ಇದಾಗಿ ಈಗ, ನಂದಕುಮಾರ್ ಪರ ಕೆಲಸ ಮಾಡುತ್ತಿದ್ದಾರೆ, ಅವರ ಧ್ವನಿ ಎತ್ತಿದ್ದಾರೆ ಎನ್ನುವ ಕಾರಣಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಹಿತ ಸುಳ್ಯದ ನಾಗರೀಕರೊಬ್ಬರಿಗೆ ಫೋನ್ ಹಾಯಿಸಿದ ಕೃಷ್ಣಪ್ಪ ದುರಹಂಕಾರ ಮೆರೆದಿದ್ದಾರೆ ಎನ್ನುವ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೃಷ್ಣಪ್ಪರವರನ್ನು (G Krishnappa) ಹೈಕಮಾಂಡ್ ಘೋಷಿಸಿರುವ ಬೆನ್ನಲ್ಲೇ ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ನಲ್ಲಿ ಅಸಮಾಧಾನ ಭುಗಿಲೆದ್ದಿದೆ.