ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಸರ್ವರ್ ಡೌನ್ ಎಂಬ ಭೂತ
ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಈಗ ಸರ್ವರ್ ಸಮಸ್ಯೆ. ಯಾವಾಗ ನೋಡಿದರೂ ಒಂದಲ್ಲ ಒಂದು ಕಾರಣಕ್ಕೆ ಸರ್ವರ್ ಇರೋದಿಲ್ಲ. ಅಲ್ಲಿನ ಯಾವುದೇ ಗವಾಕ್ಷಿಗಳಲ್ಲಿ ಬಗ್ಗಿ ಮುಖ ತೂರಿ ಕೇಳಿದರೂ” ಸರ್ವರ್ ಡೌನ್” ಎಂಬ ಸ್ಟ್ಯಾಂಡರ್ಡ್ ಉತ್ತರ ತಕ್ಷಣ ಲಭ್ಯ ! ತಾಂತ್ರಿಕ ಸಮಸ್ಯೆಯಿಂದಾಗಿ ಸರ್ವರ್ ಡೌನ್ ಆಗಿದ್ದು, ಇದರ ಪರಿಣಾಮ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಅಲೆದು ಅಲೆದು ಹೈರಾಣಾಗಿ ಹೋಗುತ್ತಿದ್ದಾರೆ. ಇರುವ ಕೃಷಿ ಕಾರ್ಯ ಕೆಲಸ ಬಿಟ್ಟು, ಬೇರೆ ಕಡೆ ಕೆಲಸ ಮಾಡುತ್ತಿದ್ದವರು ಅರ್ಧ ದಿನ ರಜೆ …