ಸೈನಿಕನ ಮೇಲೆ ದಾಳಿ ಹಿನ್ನೆಲೆ -ಮಡಿಕೇರಿ ಚಲೋ ! | ದುಷ್ಕರ್ಮಿಗಳಿಗೆ ತಕ್ಷಣ ಜಾಮೀನು ನೀಡಿದ ನ್ಯಾಯಾಲಯದ ಕ್ರಮದ ವಿರುದ್ಧ ಪ್ರತಿಭಟನೆ
ಹಾಲಿ ಸೈನಿಕನ ಮತ್ತು ಅವರ ಕುಟುಂಬದವರ ಮೇಲೆ ಮಾರಣಾಂತಿಕ ಹಲ್ಲೆ ಆಗಿ, ದುಷ್ಕರ್ಮಿಗಳ ಮೇಲೆ ಎಫ್ ಐ ಆರ್ ದಾಖಲಾಗಿದ್ದರೂ ಆರೋಪಿಗಳು ಅರೆಸ್ಟ್ ಆದ ಒಂದೇ ದಿನದಲ್ಲಿ ಅವರಿಗೆ ನ್ಯಾಯಾಲಯ ಜಾಮೀನು ನೀಡಿರುವುದನ್ನು ಪ್ರತಿಭಟಿಸಿ ಮಾಜಿ ಸೈನಿಕರು ಪ್ರತಿಭಟನೆಗೆ ಇಳಿದಿದ್ದಾರೆ. ಇಂದಿನ ಸಮಾಜದಲ್ಲಿ ಸೈನಿಕರ ಕುಟುಂಬಕ್ಕೆ ಯಾರೂ ಕೂಡ ಗೌರವವನ್ನು ನೀಡುತ್ತಿಲ್ಲ, ನಾವು ದೇವರು ಎಂದು ನಂಬಿರುವ ನ್ಯಾಯಾಲಯವೂ ಕೂಡ ನಮಗೆ ನಮ್ಮ ಸೈನಿಕನ ಮೇಲೆ ಹಲ್ಲೆ ಮಾಡಿರುವ ಆರೋಪಿಗಳಿಗೆ ಕೇವಲ ಒಂದೇ ದಿನದಲ್ಲಿ ಜಾಮೀನು ನೀಡಿದೆ. …