ಬೆಳ್ತಂಗಡಿ :ಲಾಯಿಲದ ತರಕಾರಿ ವ್ಯಾಪಾರಿ ನಾಪತ್ತೆ
ಬೆಳ್ತಂಗಡಿ : ಲಾಯಿಲ ಗ್ರಾಮದ ರಾಘವೇಂದ್ರ ನಗರದ ಬಳಿ ವಾಸ್ತವ್ಯವಿದ್ದ ತರಕಾರಿ ವ್ಯಾಪಾರಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ತರಕಾರಿ ವ್ಯಾಪಾರ ನಡೆಸುತ್ತಿದ್ದ ಮಲ್ಲಿಕಾರ್ಜುನ ಗೌಡ(48.ವ) ಎಂಬವರು ಡಿ. 4 ರಂದು ರಾತ್ರಿ ಮನೆಯಿಂದ ಹೊರಟು ಹೋದವರು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿರುವುದಾಗಿ,ಆತನ ಪತ್ನಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೊರಜಿಲ್ಲೆಯಿಂದ ತರಕಾರಿ ತಂದು ಮಾರಾಟ ಮಾಡುತ್ತಿದ್ದ ಮಲ್ಲಿಕಾರ್ಜುನ ರವರು ತಮ್ಮ ಪತ್ನಿ ಗೀತಾರೊಂದಿಗೆ ಲಾಯಿಲ ಗ್ರಾಮದ ರಾಘವೇಂದ್ರ ನಗರದ ಬಳಿ ವಾಸವಾಗಿದ್ದರು. ಡಿ.4 ರಂದುರಾತ್ರಿ ಮನೆಯಲ್ಲಿದ್ದ …