ಪಿತೃಗಳಿಗೆ ಅರ್ಪಿತವಾದ ದಿನ ಅಮಾವಾಸ್ಯೆ ತಿಥಿಯಂದು ಮಾಡಬಾರದ ಕಾರ್ಯಗಳು ಯಾವುವೆಂಬ ಬಗ್ಗೆ ನಿಮಗೆ ತಿಳಿದಿದೆಯೇ?? ಇಲ್ಲಿದೆ ನೋಡಿ ಈ ಕುರಿತು ಮಾಹಿತಿ
ಸನಾತನ ಸಂಸ್ಕೃತಿಯಲ್ಲಿ ಅನೇಕ ಆಚರಣೆಗಳಿದ್ದು, ಕೆಲವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಪ್ರತಿ ಆಚರಣೆ ಹಿಂದೆಯೂ ವಿಶೇಷ ಅರ್ಥ ಹಾಗೂ ಮಹತ್ವವಿದೆ. ಅಂತೆಯೇ ಅಮಾವಾಸ್ಯೆ ಮತ್ತು ಹುಣ್ಣಿಮೆ ತಿಂಗಳಿಗೊಮ್ಮೆ ಬರುವ ತಿಥಿಯಾಗಿದೆ. ಪಂಚಾಂಗದಲ್ಲಿ ನಮೂದಿಸಿದ ತಿಥಿ, ಮೂಹೂರ್ತಗಳಿಗೆ ಅನುಗುಣವಾಗಿ ಕೆಲವೊಂದು ದಿನಗಳು ಕೆಲವು ಕೆಲಸಗಳಿಗೆ ನಿಷಿದ್ಧವಾಗಿರುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ಈ ರೀತಿ ಅನೇಕ ವಿಷಯಗಳಿಗೆ ನಿರ್ಬಂಧವಿದೆ. ಉದಾಹರಣೆಗೆ ಹೇಳುವುದಾದರೆ ಹುಟ್ಟಿದ ವಾರದಂದು ಉಗುರು ಕತ್ತರಿಸುವುದು, ತಲೆಕೂದಲನ್ನು ಕತ್ತರಿಸುವುದು ಇತ್ಯಾದಿ ಕ್ರಿಯೆಗಳನ್ನು ಮಾಡುವಂತಿಲ್ಲ. ಪಿತೃಗಳಿಗೆ ಅರ್ಪಿತವಾದ ದಿನ ಅಮವಾಸ್ಯೆ ತಿಥಿಯಾಗಿದೆ. …