ಮಗುವಿಗೆ ಶಿಸ್ತು ರೂಢಿಸಲು ವೇಳಾಪಟ್ಟಿ ಒಪ್ಪಂದ ಮಾಡಿಕೊಂಡ ತಂದೆ | ಪ್ರತಿದಿನ 10 ರೂ, ಅಳದೆ ಹೋಂವರ್ಕ್ ಮಾಡಿದರೆ 100 ರೂ. ಬೋನಸ್ ಅಂತೆ !!
ಬಹಳಷ್ಟು ಪೋಷಕರು ತಮ್ಮ ಮಕ್ಕಳು ಓದಿನ ವಿಷಯದಲ್ಲಿ ಒಳ್ಳೆಯ ರ‍್ಯಾಂಕ್ ಪಡೆದುಕೊಳ್ಳಬೇಕು ಎಂದು ಬಯಸುತ್ತಾರೆ. ಅದೇ ಕಾರಣಕ್ಕೆ ಅನೇಕ ಶಿಸ್ತುಬದ್ಧ ನಿಯಮಗಳನ್ನು ವಿಧಿಸುತ್ತಾರೆ. ಆದರೆ, ಇಲ್ಲೊಬ್ಬ ತಂದೆ ತನ್ನ 6 ವರ್ಷದ ಮಗುವಿನೊಂದಿಗೆ ವೇಳಾಪಟ್ಟಿ ಒಪ್ಪಂದ ಮಾಡಿಕೊಳ್ಳುವ ಮೂಲಕ ತಮ್ಮ ಮಗನಿಗೆ ಶಿಸ್ತು ರೂಢಿಸಲು ಮುಂದಾಗಿದ್ದಾರೆ. ಭಾರತೀಯ ಮೂಲದ ವ್ಯಕ್ತಿಯೊಬ್ಬರು ತಮ್ಮ 6 ವರ್ಷದ ಮಗನಿಗೆ ವೇಳಾಪಟ್ಟಿ ರಚಿಸಿ ಅದನ್ನು ಟ್ವೀಟ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು ತಮ್ಮ ಮಗ ಅಬೀರ್ ಅವರೊಂದಿಗೆ ಸಹಿ ಮಾಡಿದ ಕೈಬರಹದ ವೇಳಾಪಟ್ಟಿ …