Banking Rule Change: ಬ್ಯಾಂಕ್ ಗಳಿಗೆ ಸಂಬಂಧಿಸಿದ ಈ ನಿಯಮದಲ್ಲಿ ಜನವರಿ 1 ರಿಂದ ಆಗಲಿದೆ ದೊಡ್ಡ ಬದಲಾವಣೆ!

ಹೊಸ ವರ್ಷದ ಮೊದಲ ದಿನದಿಂದಲೇ ಬ್ಯಾಂಕ್ ಲಾಕರ್‌ಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಗಳು ಜಾರಿಗೆ ಬರುತ್ತಿದೆ. ಚಿನ್ನ, ಪ್ರಮುಖ ದಾಖಲೆಗಳು ಸೇರಿದಂತೆ ಅತ್ಯಮೂಲ್ಯ ವಸ್ತುಗಳನ್ನು ಸುರಕ್ಷಿತವಾಗಿಡಲು ನೀವು ಬ್ಯಾಂಕ್ ಲಾಕರ್ ಬಳಸುತ್ತಿದ್ದರೆ, 2023 ಜನವರಿ 1ರಿಂದ ಇದಕ್ಕೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಆರ್.ಬಿ.ಐ ನಿಯಮಗಳ ಪ್ರಕಾರ, ಜನವರಿ 1, 2023 ರಿಂದ, ಬ್ಯಾಂಕ್ ಲಾಕರ್‌ಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಯಾಗಲಿದೆ, ಇದು ಗ್ರಾಹಕರ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ನಿಯಮದಿಂದ ಬ್ಯಾಂಕ್ ಗ್ರಾಹಕರಿಗೆ ಹೆಚ್ಚಿನ ಲಾಭ ಸಿಗಲಿದೆ.

ಲಾಕರ್ ಸೌಲಭ್ಯ ನೀಡಿರೋದಕ್ಕೆ ಬ್ಯಾಂಕ್ ಗಳು ಗ್ರಾಹಕರಿಗೆ ವಾರ್ಷಿಕ ಶುಲ್ಕವನ್ನು ಕೂಡ ವಿಧಿಸುತ್ತದೆ. ಆದರೆ, ಬ್ಯಾಂಕ್ ಲಾಕರ್ ನಲ್ಲಿಟ್ಟಿರುವ ವಸ್ತುಗಳ ಸುರಕ್ಷತೆಯ ಜವಾಬ್ದಾರಿಯನ್ನು ಈ ಹಿಂದೆ ಬ್ಯಾಂಕ್ ಗಳು ಪೂರ್ಣ ಪ್ರಮಾಣದಲ್ಲಿ ಹೊರಲು ಸಿದ್ಧವಿರಲಿಲ್ಲ. ಆದರೆ ಹೊಸ ನಿಯಮದ ಪ್ರಕಾರ, ಲಾಕರ್‌ನಲ್ಲಿ ಇರಿಸಲಾದ ವಸ್ತುಗಳಿಗೆ ಯಾವುದೇ ಹಾನಿಯಾಗಿದ್ದರೆ, ಅದಕ್ಕೆ ಸಂಬಂಧಪಟ್ಟ ಬ್ಯಾಂಕ್ ಪರಿಹಾರವನ್ನು ಒದಗಿಸಬೇಕಾಗಲಿದೆ. ಅಷ್ಟೇ ಅಲ್ಲ ಗ್ರಾಹಕರು ಡಿಸೆಂಬರ್ 31ರವರೆಗೆ ಈ ಕುರಿತಾದ ಒಪ್ಪಂದಕ್ಕೆ ಸಹಿ ಹಾಕಬೇಕಿದ್ದು, ಅದರಲ್ಲಿ ಲಾಕರ್ ಬಗ್ಗೆ ಎಲ್ಲ ಮಾಹಿತಿ ನೀಡಲಾಗುವುದು. ಇದರೊಂದಿಗೆ, ಬ್ಯಾಂಕ್ ಗ್ರಾಹಕರಿಗೆ ಲಾಕರ್ ನಲ್ಲಿರುವ ತಮ್ಮ ವಸ್ತುಗಳ ಬಗ್ಗೆ ನಿರಂತರ ಅಪ್ಡೇಟ್ ಸಿಗಲಿದೆ.

ಹೊಸ ನಿಯಮದ ಪ್ರಕಾರ, ಇನ್ಮುಂದೆ ಗ್ರಾಹಕರಿಗೆ ದೊಡ್ಡ ಲಾಭ ಸಿಗಲಿದೆ. ಬ್ಯಾಂಕಿನ ನಿರ್ಲಕ್ಷ್ಯದಿಂದ ಲಾಕರ್‌ನಲ್ಲಿ ಇಟ್ಟಿರುವ ಸರಕುಗಳಿಗೆ ಹಾನಿಯಾಗಿದ್ದರೆ ಸಂಬಂಧಪಟ್ಟ ಬ್ಯಾಂಕ್‌ ಹಣ ಪಾವತಿಸಬೇಕಾಗುತ್ತದೆ. ಅಂದರೆ ಈಗ ಹೊಸ ನಿಯಮದ ಪ್ರಕಾರ ಬ್ಯಾಂಕಿನ ಜವಾಬ್ದಾರಿ ಹೆಚ್ಚಾಗಿದೆ. ಅಷ್ಟೇ ಅಲ್ಲ,ಲಾಕರ್‌ನಲ್ಲಿ ಇಟ್ಟವಸ್ತು ಬ್ಯಾಂಕ್‌ ನಿರ್ಲಕ್ಷ್ಯದಿಂದ ನಾಪತ್ತೆಯಾದರೆ ಅಥವಾ ಕಳೆದು ಹೋದರೆ ಅದಕ್ಕೆ ಬ್ಯಾಂಕ್‌ ಹೊಣೆಯಾಗಿದೆ. ಗ್ರಾಹಕನಿಗೆ ಬ್ಯಾಂಕುಗಳು ಬ್ಯಾಂಕ್‌ ಲಾಕರ್‌ ಬಾಡಿಗೆಯ 100 ಪಟ್ಟಿಗೆ ಸಮನಾದ ಪರಿಹಾರ ಮೊತ್ತವನ್ನು ನೀಡಬೇಕಾಗುತ್ತದೆ.

ಹೊಸ ವರ್ಷದ ಮೊದಲ ದಿನ ಅಂದರೆ ಜನವರಿ 1, 2023 ರ ಮೊದಲು, ಲಾಕರ್ ಹೊಂದಿರುವ ಎಲ್ಲ ಗ್ರಾಹಕರು ಲಾಕರ್ ಒಪ್ಪಂದದ ನವೀಕರಣ ಪತ್ರಕ್ಕೆ ಸಹಿ ಹಾಕುವ ಜೊತೆಗೆ ಅರ್ಹತ ದಾಖಲೆಗಳನ್ನು 2023ರ ಜನವರಿ 1ರೊಳಗೆ ನೀಡಬೇಕು ಎಂದು ಆರ್ ಬಿಐ ಸೂಚಿಸಿದೆ.ಅಲ್ಲದೇ, ಲಾಕರ್ ಅಗ್ರಿಮೆಂಟ್ ಮಾಡಿಕೊಳ್ಳುವಂತೆ ಬ್ಯಾಂಕ್ ಗಳಿಂದ ಗ್ರಾಹಕರಿಗೆ ಸಂದೇಶಗಳೂ ರವಾನೆಯಾಗುತ್ತಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಗ್ರಾಹಕರಿಗೆ ಈಗಾಗಲೇ ಅಲರ್ಟ್ ಕಳುಹಿಸುತ್ತಿದೆ. ಇದರಲ್ಲಿ ‘ಆರ್.ಬಿ.ಐ ಮಾರ್ಗಸೂಚಿಗಳ ಪ್ರಕಾರ, ಹೊಸ ಲಾಕರ್ ಒಪ್ಪಂದವನ್ನು 31 ಡಿಸೆಂಬರ್ 2022 ರ ಮೊದಲು ಕಾರ್ಯಗತಗೊಳಿಸಬೇಕು’ ಎಂದು ಸೂಚಿಸಲಾಗಿದೆ.

ಯಾವೆಲ್ಲಾ ಸಂದರ್ಭದಲ್ಲಿ ಗ್ರಾಹಕರಿಗೆ ಪರಿಹಾರ ಸಿಗುವುದಿಲ್ಲ ಎಂಬುದನ್ನು ನೋಡುವುದಾದರೆ, ಹೊಸ ನಿಯಮದ ಪ್ರಕಾರ ಮಿಂಚು, ಭೂಕಂಪ, ಪ್ರವಾಹ, ಚಂಡಮಾರುತ ಮುಂತಾದ ಪ್ರಾಕೃತಿಕ ವಿಕೋಪಗಳಿಂದ ಅಥವಾ ಗ್ರಾಹಕರ ನಿರ್ಲಕ್ಷ ಅಥವಾ ಗ್ರಾಹಕರ ತಪ್ಪಿನಿಂದ ಲಾಕರ್‌ನಲ್ಲಿ ಇಟ್ಟಿರುವ ವಸ್ತುಗಳಿಗೆ ಹಾನಿಯಾದರೆ ಅದಕ್ಕೆ ಬ್ಯಾಂಕ್ ಹೊಣೆಯಾಗುವುದಿಲ್ಲ.

Leave A Reply

Your email address will not be published.