ಕೇಂದ್ರ ಸರಕಾರದಿಂದ ಬಡವರಿಗೆ ಉಚಿತ ಪಡಿತರ | ಹೊಸವರ್ಷಕ್ಕೆ ಬಂಪರ್ ಕೊಡುಗೆ

ಕೇಂದ್ರ ಸರಕಾರ ಹೊಸವರ್ಷಕ್ಕೆ ದೇಶದ ಅತ್ಯಂತ ಕಡು ಬಡವರಿಗೆ ಉಚಿತ ಪಡಿತರ ‌ನೀಡುವ ನಿರ್ಧಾರವನ್ನು ಪ್ರಕಟಿಸಿದೆ. ಈ ಮಹತ್ವದ ನಿರ್ಧಾರವನ್ನು ಶುಕ್ರವಾರ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಅದಕ್ಕಾಗಿ 2 ಲಕ್ಷ ಕೋಟಿ ರೂ. ವೆಚ್ಚ ಮಾಡಲಿದೆ ಮತ್ತು ಅದರ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ಆಹಾರ ಸಚಿವ ಪಿಯೂಷ್ ಗೋಯಲ್ ಸಂಪುಟ ಸಭೆಯ ಬಳಿಕ ತಿಳಿಸಿದ್ದಾರೆ.

ಈ ಪ್ರಕಟಣೆಯ ಪ್ರಕಾರ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ)ಯ ಅನ್ವಯ ಈ ಯೋಜನೆಯಲ್ಲಿ, ಇದರ ಪ್ರಕಾರ 81.35 ಕೋಟಿ ಮಂದಿ ಆಹಾರ ಧಾನ್ಯಕ್ಕೆ ಒಂದು ರೂಪಾಯಿ ಕೂಡಾ ಕೊಡುವ ಅಗತ್ಯ ಇಲ್ಲ. ಈವರೆಗೆ ರಿಯಾಯಿತಿ ದರದಲ್ಲಿ ಆಹಾರಧಾನ್ಯವನ್ನು ನೀಡಲಾಗುತಿತ್ತು.

ಸದ್ಯ ಆಹಾರ ಭದ್ರತಾ ಕಾಯ್ದೆಯ ಅಡಿ ಪ್ರತಿ ಕುಟುಂಬಕ್ಕೆ 5 ಕೆಜಿ ಆಹಾರ ಧಾನ್ಯಗಳನ್ನು ನೀಡಲಾಗುತ್ತಿದೆ. ಪ್ರತಿ ಕೆಜಿ ಅಕ್ಕಿಗೆ 2 ರೂ.ಗಳಿಂದ 3 ರೂ. ಮತ್ತು ಪ್ರತಿ ಕೆಜಿ ಗೋಧಿಗೆ 2 ರೂ ವಿಧಿಸಲಾಗುತ್ತಿದೆ.

ಇದೇ ವೇಳೆ, 2020ರ ಏಪ್ರಿಲ್‌ನಿಂದ ಶುರು ಮಾಡಲಾಗಿದ್ದ ಪ್ರಧಾನಮಂತ್ರಿ ಗರೀಬ್ ಅನ್ನ ಕಲ್ಯಾಣ್ ಯೋಜನೆಯನ್ನು ಡಿ.31ರ ಬಳಿಕ ವಿಸ್ತರಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.

Leave A Reply

Your email address will not be published.