ಸಾವು

ಭೀಕರ ರಸ್ತೆ ಅಪಘಾತ | 7 ಮಕ್ಕಳು ಸೇರಿ 15 ಮಂದಿ ದುರ್ಮರಣ | ಪ್ರಧಾನಿ ಮೋದಿಯಿಂದ ಪರಿಹಾರ ಘೋಷಣೆ

ಭೀಕರ ರಸ್ತೆ ಅಪಘಾತವೊಂದು ಸಂಭವಿಸಿ 15 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆಯೊಂದು ಬಿಹಾರದ ವೈಶಾಲಿ ಜಿಲ್ಲೆ ಮೆಹನಾರ್‌ನಲ್ಲಿ ನಡೆದಿದೆ. ಈ ಭೀಕರ ದುರಂತದಲ್ಲಿ 7 ಮಕ್ಕಳು ಕೂಡಾ ಸಾವನ್ನಪ್ಪಿದ್ದು ಒಟ್ಟು ಸಾವಿನ ಸಂಖ್ಯೆ 15ಕ್ಕೆ ಏರಿದೆ. ರಸ್ತೆ ಬದಿಯ ಜನವಸತಿ ಪ್ರದೇಶಕ್ಕೆ ಟ್ರಕ್ ನುಗ್ಗಿದ ಪರಿಣಾಮ ಅಪಘಾತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಉಪವಿಭಾಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈಶಾಲಿ ಜಿಲ್ಲೆಯ ದೇಸರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವೇಗವಾಗಿ ಬಂದ ಟ್ರಕ್, ಮಕ್ಕಳ ಸಹಿತ ಹಲವರ ಮೇಲೆ ಹರಿದಿದೆ. …

ಭೀಕರ ರಸ್ತೆ ಅಪಘಾತ | 7 ಮಕ್ಕಳು ಸೇರಿ 15 ಮಂದಿ ದುರ್ಮರಣ | ಪ್ರಧಾನಿ ಮೋದಿಯಿಂದ ಪರಿಹಾರ ಘೋಷಣೆ Read More »

ಕಣಜದ ದಾಳಿಗೊಳಗಾದ ವ್ಯಕ್ತಿ ಮೃತ್ಯು

ವಿಟ್ಲ: ಕಣಜದ ಹುಳುಗಳಿಂದ ದಾಳಿಗೊಳಗಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮೃತರನ್ನು ಮಾಣಿಲ ಗ್ರಾಮದ ಪಕಳಕುಂಜ ನಿವಾಸಿ ಶ್ರೀಕೃಷ್ಣ ನಾಯಕ್(50) ಎಂದು ಗುರುತಿಸಲಾಗಿದೆ. ಕೃಷ್ಣ ರವರ ಮೇಲೆ ನಿನ್ನೆ ಸಂಜೆ ವೇಳೆ ಪೆರುವಾಯಿ ಸಮೀಪ ಕಣಜದ ಹುಳುಗಳು ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡಿದ್ದ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೇ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಗತಿಪರ ಕೃಷಿಕ ತಿರುಮಲೇಶ್ವರ ಭಟ್ ಕಾನಾವು ನಿಧನ

ಸುಳ್ಯ : ಪ್ರಗತಿಪರ ಕೃಷಿಕರು, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ನಮ್ಮೂರಿನ ಮಾರ್ಗದರ್ಶಕರಾಗಿದ್ದ ತಿರುಮಲೇಶ್ವರ ಭಟ್ ಕಾನಾವು (70) ಮೇ 28 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶ ಸಮಿತಿ ಅಧ್ಯಕ್ಷರಾಗಿ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿ, ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ದಶಮಾನೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಸೇರಿದಂತೆ ಹತ್ತಾರು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.

error: Content is protected !!
Scroll to Top