Home Karnataka State Politics Updates DK Shivakumar: ನನ್ನ ಮನೆಯ ಬೋರ್ವೆಲ್ ಕೂಡ ಒಣಗಿದೆ : ಉಪ ಮುಖ್ಯಮಂತ್ರಿ ಡಿ. ಕೆ....

DK Shivakumar: ನನ್ನ ಮನೆಯ ಬೋರ್ವೆಲ್ ಕೂಡ ಒಣಗಿದೆ : ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್

DK Shivakumar

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬೋರ್ವೆಲ್ ಗಳು ಬತ್ತಿಹೋಗಿ, ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

ಇನ್ನೂ ಕೆಲವೆಡೆ ಟ್ಯಾಂಕರ್ ಮೂಲಕ ನೀರು ತರಿಸುತ್ತಿದ್ದು ಅದು ಸಹ ದುಬಾರಿಯಾಗಿದೆ.

ಇದನ್ನೂ ಓದಿ: Madras High Court: ಸನಾತನ ಧರ್ಮ ವಿವಾದ : ಡಿ ಎಮ್ ಕೆ ಸಚಿವ ಉದಯ ನಿಧಿ ಸ್ಟಾಲಿನ್ಗೆ ಚೀಮಾರಿ ಹಾಕಿದ ಮದ್ರಾಸ್ ಹೈಕೋರ್ಟ್

ಇಂತಹ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಬೆಂಗಳೂರಿನ 3000 ಕ್ಕೂ ಹೆಚ್ಚು ಕೊಳವೆ ಬಾವಿಗಳು ಒಣಗಿವೆ ಎಂದು ಹೇಳಿದ್ದಾರೆ. ತಮ್ಮ ಸ್ವಂತ ಮನೆಯಲ್ಲಿರುವ ಬೋರ್ವೆಲ್ ಕೂಡ ಒಣಗಿ ಹೋಗಿದ್ದು, “ನಾನು ಇದನ್ನು ಬಹಳ ಗಂಭೀರವಾಗಿ ನೋಡುತ್ತಿದ್ದೇನೆ. ನಾನು ಎಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ನೀರು ಲಭ್ಯವಿರುವ ಸ್ಥಳಗಳನ್ನು ನಾವು ಗುರುತಿಸುತ್ತಿದ್ದೇವೆ ಎಂದು ಹೇಳಿದರು.

ಹಲವಾರು ಗ್ರಾಮಗಳಲ್ಲಿ ನೀರಿನ ಮೂಲಗಳು ಖಾಲಿಯಾಗಿವೆ ಎಂಬ ವರದಿಗಳ ನಡುವೆಯೂ, ಬೆಂಗಳೂರಿನಲ್ಲಿ ಕುಡಿಯುವ ನೀರಿನ ಕೊರತೆಯನ್ನು ಪರಿಹರಿಸಲು ಕರ್ನಾಟಕದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಂಪುಟ ಸಚಿವರ ನೇತೃತ್ವದಲ್ಲಿ ಮಂಗಳವಾರ ಸಭೆ ನಡೆಯಿತು.

ಈ ಬಿಕ್ಕಟ್ಟನ್ನು ನಿಭಾಯಿಸಲು, ನೀರು ಲಭ್ಯವಿರುವ ಸ್ಥಳಗಳನ್ನು ಗುರುತಿಸಲು ಮತ್ತು ಜನರಿಗೆ ಸಮಂಜಸವಾದ ದರದಲ್ಲಿ ಒದಗಿಸಲು ಸರ್ಕಾರ ಯೋಜಿಸಿದೆ. ಹೆಚ್ಚುವರಿಯಾಗಿ, ಮಾರ್ಚ್ 7 ರ ಗಡುವಿನೊಳಗೆ ಅಧಿಕಾರಿಗಳೊಂದಿಗೆ ನೋಂದಾಯಿಸಿಕೊಳ್ಳುವಂತೆ ರಾಜ್ಯದ ನೀರಿನ ಟ್ಯಾಂಕರ್ ಮಾಲೀಕರಿಗೆ ಡಿಕೆಶಿ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ನೊಂದಾಯಿಸಿಕೊಳ್ಳದಿದ್ದರೆ ಯ ಅವರ ಟ್ಯಾಂಕರ್ಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

“ನಾವು ಎಲ್ಲಾ ಜನರಿಗೆ ಬಹಳ ಸಮಂಜಸವಾದ ದರದಲ್ಲಿ ನೀರನ್ನು ಒದಗಿಸುತ್ತೇವೆ. ನನ್ನ ಮನೆಯಲ್ಲಿರುವ ಬೋರ್ವೆಲ್ ಸೇರಿದಂತೆ ಎಲ್ಲಾ ಬೋರ್ವೆಲ್ಗಳು ಒಣಗಿರುವುದರಿಂದ ನಾವು ಅದರ ಬಗ್ಗೆ ಚಿಂತಿತರಾಗಿದ್ದೇವೆ “ಎಂದು ಡಿಕೆಶಿ ಹೇಳಿದರು.