Home Karnataka State Politics Updates Kanpur: ಬ್ಯೂಟಿಪಾರ್ಲರ್‌ಗೆ ಹೋಗುವೆ ಎಂದು ಹೋದ ವಧು ಎಸ್ಕೇಪ್‌; ವಧು ಪ್ರಿಯಕರನೊಂದಿಗೆ ಪರಾರಿ!

Kanpur: ಬ್ಯೂಟಿಪಾರ್ಲರ್‌ಗೆ ಹೋಗುವೆ ಎಂದು ಹೋದ ವಧು ಎಸ್ಕೇಪ್‌; ವಧು ಪ್ರಿಯಕರನೊಂದಿಗೆ ಪರಾರಿ!

Kanpur

Hindu neighbor gifts plot of land

Hindu neighbour gifts land to Muslim journalist

Kanpur News: ಮದುವೆಯ ದಿನದಂದು ಬ್ಯೂಟಿಪಾರ್ಲರ್‌ಗೆ ಹೋಗಿ ಬರುತ್ತೇನೆಂದು ಹೇಳಿದ ವಧು ನಾಪತ್ತೆಯಾಗಿರುವ ಘಟನೆಯೊಂದು ಕಾನ್ಪುರ ಚೌಬೆಪುರ್‌ ಪ್ರದೇಶದ ಗಂಗಾ ತೀರದ ಹಳ್ಳಿಯೊಂದರಲ್ಲಿ ನಡೆದಿದೆ. ಇತ್ತ ವರನು ಮದುವೆ ದಿಬ್ಬಣದೊಂದಿಗೆ ವಧು ಮನೆಗೆ ಬಂದಿದ್ದು ವಧುವಿಗಾಗಿ ಕಾದು ಕುಳಿತಿದ್ದಾನೆ. ಆದರೆ ತಡರಾತ್ರಿಯಾದರೂ ವಧು ಮನೆಗೆ ಬಾರದೆ ಇದ್ದಾಗ ಮದುವೆಯನ್ನು ಮುಂದೂಡಿದ್ದು ವಧು ಇಲ್ಲದೆ ಮದುವೆ ಮೆರವಣಿಗೆ ವಾಪಸಾಗಬೇಕಾಯಿತು.

ಇದನ್ನೂ ಓದಿ: Cervical Cancer: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಏನು ಮಾಡಬೇಕು? ನಿಮ್ಮ ಈ ಜೀವನಶೈಲಿಯಲ್ಲಿ ಬದಲಾಯಿಸಿ!

ಸೋಮವಾರ ಊರ ಹೊರಗಿನ ಅತಿಥಿಗೃಹದಲ್ಲಿ ಮದುವೆ ಸಮಾರಂಭವಿತ್ತು. ಅತಿಥಿಗಳು ಸೇರಿದ್ದರು. ಈ ಮಧ್ಯೆ, ಮಧ್ಯಾಹ್ನ ವಧು ತನ್ನ ಸಂಬಂಧಿಕರೊಬ್ಬರೊಂದಿಗೆ ಬ್ಯೂಟಿ ಪಾರ್ಲರ್‌ಗೆ ಹೋಗಿದ್ದಳು. ಸಂಜೆಯ ಸಮಯಕ್ಕೆ ವರನ ಮದುವೆಯ ಮೆರವಣಿಗೆಯು ಗ್ರಾಮವನ್ನು ತಲುಪಿತು. ಆದರೆ ವಧು ಮನೆಗೆ ಬಂದ ತಿಥಿಗಳನ್ನು ವಧುವಿನ ಕಡೆಯವರು ತಿನ್ನಲು ಕೇಳಲಿಲ್ಲ ಅಥವಾ ಮದುವೆಗೆ ಸಂಬಂಧಿಸಿದ ಯಾವುದೇ ಆಚರಣೆಗಳನ್ನು ಪ್ರಾರಂಭಿಸಲಿಲ್ಲ. ವಧುವಿನ ತಂದೆಯ ಬಳಿ ಕೇಳಿದಾಗ ವಧು ಬ್ಯೂಟಿ ಪಾರ್ಲರ್‌ಗೆ ಸಿದ್ಧವಾಗಲು ಹೋಗಿದ್ದಾಳೆ ಎಂದು ಹೇಳಿದರು.

ಬಳಿಕ ಬ್ಯೂಟಿ ಪಾರ್ಲರ್‌ಗೆ ಸಂಪರ್ಕಿಸಿದಾಗ ವಧು ಅಲ್ಲಿಗೆ ಬಂದಿಲ್ಲ ಎಂದು ತಿಳಿದುಬಂದಿದೆ. ವಧು ಪರಾರಿಯಾಗಿರುವ ವಿಷಯ ತಿಳಿದ ವರನಿಗೆ ಪ್ರಜ್ಞೆ ತಪ್ಪಿತ್ತು. ಸಾಕಷ್ಟು ಹುಡುಕಾಟದ ನಂತರ ತಡರಾತ್ರಿಯಾದರೂ ವಧು ಪತ್ತೆಯಾಗದಿದ್ದಾಗ ವಧು ಇಲ್ಲದೆ ಮದುವೆ ಮೆರವಣಿಗೆ ಮರಳಬೇಕಾಯಿತು. ಇದೇ ವೇಳೆ ವಧು ಮತ್ತೊಬ್ಬ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು ಎಂಬ ಮಾತು ಹಬ್ಬಿದೆ. ಆಕೆಯ ಇಚ್ಛೆಗೆ ವಿರುದ್ಧವಾಗಿ ಮನೆಯವರು ಮದುವೆ ನಿಶ್ಚಯ ಮಾಡಿದ್ದರು ಎನ್ನಲಅಗಿದೆ.. ಬ್ಯೂಟಿ ಪಾರ್ಲರ್‌ಗೆ ಹೋಗುವ ನೆಪದಲ್ಲಿ ಪ್ರಿಯಕರನ ಜೊತೆ ಆಕೆ ಹೋಗಿದ್ದಳು. ಸದ್ಯ ಈ ವಿಚಾರದಲ್ಲಿ ಯಾವುದೇ ವರದಿ ದಾಖಲಾಗಿಲ್ಲ.