Home Karnataka State Politics Updates Chakravarti sulibele: ಚಕ್ರವರ್ತಿ ಸೂಲಿಬೆಲೆಗೆ ಬಿಜೆಪಿ ಟಿಕೆಟ್ ?! ಕ್ಷೇತ್ರ ಯಾವುದು ?!

Chakravarti sulibele: ಚಕ್ರವರ್ತಿ ಸೂಲಿಬೆಲೆಗೆ ಬಿಜೆಪಿ ಟಿಕೆಟ್ ?! ಕ್ಷೇತ್ರ ಯಾವುದು ?!

Chakravarthy sulibele

Hindu neighbor gifts plot of land

Hindu neighbour gifts land to Muslim journalist

Chakravarti sulibele: ಲೋಕಸಭಾ ಚುನಾವಣೆಗೆ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ ಆಗಿದೆ. ಇದೀಗ ಎರಡನೆ ಪಟ್ಟಿ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು, ಕರ್ನಾಟಕದ ಅಭ್ಯರ್ಥಿಗಳು ಯಾರಾಗಬಹುದೆಂದು ಕುತೂಹಲ ಕೆರಳಿಸಿದೆ. ಈ ನಡುವೆ ಕೆಲವು ಕ್ಷೇತ್ರಗಳಿಗೆ ಕುತೂಹಲದ ರೀತಿ ಕೆಲವು ಅಭ್ಯರ್ಥಿಗಳ ಹೆಸರು ಕೇಳಿಬರುತ್ತಿದೆ. ಅಂತೆಯೇ ಹಿಂದುತ್ವವಾದಿ, ವಾಗ್ಮಿ ಚಕ್ರವರ್ತಿ ಸೂಲಿಬೆಲೆಗೂ(Chakravarti sulibele) ಈ ಸಲ ಬಿಜೆಪಿ ಟಿಕೆಟ್ ನೀಡಲಿದೆ ಎಂಬ ಸುದ್ದಿ ಚರ್ಚೆಯಾಗುತ್ತಿದೆ.

ಹೌದು, ಉತ್ತರ ಕನ್ನಡ(Uttara kannada) ಲೋಕಸಭಾ ಕ್ಷೇತ್ರದಿಂದ ಈ ಬಾರಿ ಹಾಲಿ ಸಂಸದ ಅನಂತಕುಮಾರ್ ಹೆಗಡೆ(Ananth kumar hegde)ಅವರಿಗೆ ಬಿಜೆಪಿ ಟಿಕೆಟ್ ನೀಡುವುದಿಲ್ಲ ಎಂಬ ಸುದ್ದಿ ಭಾರೀ ಚರ್ಚೆಯಾಗುತ್ತಿದೆ. ಈ ಬೆನ್ನಲ್ಲೇ ಅವರಷ್ಟೇ ಹಿಂದುತ್ವದ ಪ್ರಖರವಾದಿಯಾದಿಯಾಗಿರುವ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಪಾಳೆಯದಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.

ಅಂದಹಾಗೆ ಈ ಹಿಂದೆಯೂ ಚುನಾವಣೆ ವೇಳೆ ಚಕ್ರವರ್ತಿ ಸೂಲಿಬೆಲೆ ಅವರ ಹೆಸರು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಕೇಳಿಬಂದಿತ್ತು. ಆದರೆ ಸೂಲಿಬೆಲೆ ಅವರು ಚುನಾವಣಾ ರಾಜಕಾರಣಕ್ಕೆ ಪ್ರವೇಶಿಸುವ ಬಗ್ಗೆ ನಿರಾಸಕ್ತಿ ತೋರಿದ್ದರು. ಮೋದಿ ಅವರ ನಾಯಕತ್ವ ಯಾಕೆ ಬೆಂಬಲಿಸಬೇಕು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದರು. ಆದರೀಗ ಅನಂತ್ ಕುಮಾರ್ ಹೆಗಡೆ ಅವರ ವರ್ಚಸ್ಸು ಕುಗ್ಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಅವರ ಕುರಿತು ಅಪಸ್ವರಗಳು ಕೇಳಿಬರುತ್ತಿರುವುದರಿಂದ ಈ ಸಲ ಉತ್ತರ ಕನ್ನಡದ ಟಿಕೆಟ್ ಬಿಜೆಪಿ ಪಾಲಾಗುತ್ತದೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ ಕಾದುನೋಡಬೇಕಿದೆ.