Home Karnataka State Politics Updates PM Modi: ‘ಕಾಂಗ್ರೆಸ್’ ಪಾರ್ಟಿ ಕುರಿತು ಅಚ್ಚರಿ ಭವಿಷ್ಯ ನುಡಿದ ಪ್ರಧಾನಿ ಮೋದಿ !!

PM Modi: ‘ಕಾಂಗ್ರೆಸ್’ ಪಾರ್ಟಿ ಕುರಿತು ಅಚ್ಚರಿ ಭವಿಷ್ಯ ನುಡಿದ ಪ್ರಧಾನಿ ಮೋದಿ !!

PM Modi

Hindu neighbor gifts plot of land

Hindu neighbour gifts land to Muslim journalist

PM Modi: ತಮ್ಮ ಎರಡನೇ ಅವಧಿಯ ಕೊನೆಯ ಹಾಗೂ ಹಣಕಾಸು ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ(Parliament election) ಕಾಂಗ್ರೆಸ್ ಭವಿಷ್ಯ ಏನಾಗಲಿದೆ ಎಂದು ಪ್ರಧಾನಿ ಮೋದಿ(PM Modi)ಯವರು ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: PM Kissan Scheme : ‘ಪಿಎಂ ಕಿಸಾನ್’ ಹಣ ಹೆಚ್ಚಳ ವಿಚಾರ – ಇಲ್ಲಿದೆ ನೋಡಿ ಶಾಕಿಂಗ್ ನ್ಯೂಸ್ !!

ನೂತನ ಸಂಸತ್ ಭವನದಲ್ಲಿ(New Parliament house)ಪ್ರಧಾನಿ ಮೋದಿಯವರ ಭಾಷಣ ಗುಡುಗು-ಸಿಡಿಲುಗಳು ಆರ್ಭಟಿಸಿದಂತಿತ್ತು. ತುಂಬಾ ಅಗ್ರೆಸ್ಸಿವ್ ಆಗಿಯೇ ಶುರುವಾದ ಭಾಷಣ ವಿಪಕ್ಷಗಳ ವಿರುದ್ಧ ದೊಡ್ಡ ಧ್ವನಿಯಲ್ಲೇ ಅಟ್ಯಾಕ್ ಮಾಡೋ ಸೂಚನೆಯನ್ನ ಕೊಟ್ಟಿತ್ತು. ಈ ವೇಳೆ ಕಾಂಗ್ರೆಸ್ ಅನ್ನು ಪ್ರತೀ ಹಂತದಲ್ಲೂ ಮೂದಲಿಸಿದ ಅವರು ಕೊನೆಗೆ ಅಚ್ಚರಿಯ ಭವಿಷ್ಯ ನುಡಿದು ‘ಮುಂದಿನ ಚುನಾವಣೆ ಬಳಿಕ ನೀವು ವೀಕ್ಷಕರ ಗ್ಯಾಲರಿಯಿಂದ ಸಂಸತ್ ವೀಕ್ಷಿಸಬಹುದು’ ಎಂದು ಹೇಳಿದರು.

ಹೌದು, ವಿಪಕ್ಷಗಳು(Opposition Parties) ಒಂದು ಸಂಕಲ್ಪ ತಗೊಂಡಿವೆ. ಅವರ ಮಾತುಗಳನ್ನ ಕೇಳ್ತಾ ಇದ್ರೆ ನನಗೂ ನಮ್ಮ ದೇಶದ ಜನರಿಗೂ ಒಂದು ವಿಶ್ವಾಸ ಬಂದಿದ್ದು ಏನಂದ್ರೆ ಇವರು ತುಂಬಾ ಸಮಯಗಳ ಕಾಲ ವಿಪಕ್ಷ ಸ್ಥಾನದಲ್ಲೇ ಕೂರುವ ಸಂಕಲ್ಪ ಹೊಂದಿದ್ದಾರೆ. ಅನೇಕ ದಶಕಗಳ ಕಾಲ ನೀವು ಆಡಳಿತ ಪಕ್ಷದಲ್ಲಿ ಇದ್ರಿ, ಈಗ ಒಂದು ದಶಕದಿಂದ ವಿಪಕ್ಷದಲ್ಲಿ ಕೂತಿದ್ದೀರಿ. ಇನ್ನಷ್ಟು ವರ್ಷ ಕೂರುವ ಸಂಕಲ್ಪ ಪಡೆದಿದ್ದೀರಿ. ಈಶ್ವರನ ಸ್ವರೂಪವಾದ ಜನರು ನಿಮಗೆ ಆಶೀರ್ವಾದ ಮಾಡಲಿ. ಇದೀಗ ವಿಪಕ್ಷ ಸ್ಥಾನದಲ್ಲಾದರೂ ಇದ್ದೀರಿ. ಆದರೆ ಮುಂದಿನ ಚುನಾವಣೆ ಬಳಿಕ ವೀಕ್ಷಕರ ಗ್ಯಾಲರಿಯಿಂದ ಸಂಸತ್ ಅಧಿವೇಶನವನ್ನು ವೀಕ್ಷಿಸಬಹುದು ಎಂದು ಮೋದಿ ಹೇಳಿದರು. ಈ ಮೂಲಕ ವಿರೋಧ ಪಕ್ಷವೇ ಇರೋದಿಲ್ಲ, ಆ ಅರ್ಹತೆ ಕೂಡ ಇರೋದಿಲ್ಲ ಎಂದು ಮೋದಿ ವಾಗ್ದಾಳಿ ನಡೆಸಿದರು.

ಅಲ್ಲದೆ ನಾನು ದೇಶದ ಮನಸ್ಥಿತಿಯನ್ನು ನೋಡುತ್ತೇನೆ. ಇದು ಎನ್‌ಡಿಎಯನ್ನು 400 ದಾಟುವಂತೆ ಮಾಡುತ್ತದೆ. ಬಿಜೆಪಿ ಖಂಡಿತವಾಗಿಯೂ 370 ಸ್ಥಾನಗಳನ್ನು ಪಡೆಯುತ್ತದೆ ಎಂದು ಪ್ರಧಾನಿಯವರು ವಿಪಕ್ಷಗಳು ಕೂಡ ಶಾಕ್ ಆಗುವಂತೆ ಚುನಾವಣಾ ಫಲಿತಾಂಶದ ಭವಿಷ್ಯ ಕೂಡ ಹೇಳಿದ್ದಾರೆ.