Home News Winter Heater Jacket : ಏನ್ ಸೂಪರ್ ಗುರೂ | ಈ ಜಾಕೆಟ್ ಧರಿಸಿದರೆ ಚಳಿ...

Winter Heater Jacket : ಏನ್ ಸೂಪರ್ ಗುರೂ | ಈ ಜಾಕೆಟ್ ಧರಿಸಿದರೆ ಚಳಿ ಆಗಲ್ಲ| ಏನಿದರ ವಿಶೇಷತೆ?

Hindu neighbor gifts plot of land

Hindu neighbour gifts land to Muslim journalist

ಮಳೆಗಾಲದ ಛತ್ರಿ ರೈನ್ ಕೋಟ್ ಎಲ್ಲಾ ಮೂಲೆ ಸೇರುತ್ತಿದೆ. ಮಳೆಗಾಲ ಸರಿದಂತೆ ಜೊತೆ ಜೊತೆಗೆ ಚಳಿಗಾಲ ಬಂದೇ ಬಿಟ್ಟಿತು ನೋಡಿ . ಹೌದು ಅಂದಹಾಗೆ ಚಳಿ ಅಂದಾಗ ಸ್ವಲ್ಪ ಸ್ವೆಟರ್ ನೆನಪಾಗುವುದು ಸಹಜ ತಾನೇ. ಚಳಿಗಾಲ ಬರುತ್ತಿದ್ದಂತೆ ಮೂಲೆಯಲ್ಲಿಟ್ಟ ಸ್ವೆಟರ್, ಶಾಲು, ರಗ್ಗುಗಳು ಹೊರ ಬರುತ್ತವೆ.
ವರ್ಷದಲ್ಲಿ ಮೂರು ಕಾಲಗಳು ಬರುತ್ತದೆ ಅದರಲ್ಲಿ ಚಳಿಗಾಲವೂ ಒಂದು. ಈ ಚಳಿಗಾಲವನ್ನು ಎದುರಿಸುವುದೇ ಒಂದು ದೊಡ್ಡ ಸವಾಲಾಗಿದೆ. ಈ ಸಮಯದಲ್ಲಿ ಎಲ್ಲರೂ ಮನೆಯಿಂದ ಹೊರಗೆ ಬರಲು ಹಿಂಜರಿಯುತ್ತಾರೆ. ಯಾಕೆಂದರೆ ಯಾವುದನ್ನೂ ತಡೆಯಬಹುದು ಆದರೆ ಈ ಚಳಿಯನ್ನು ಒಂದು ತಡೆದುಕೊಳ್ಳಲು ಸಾಧ್ಯವೇ ಇಲ್ಲ. ಇದಕ್ಕಾಗಿ ಜನರು ಏನಾದರೊಂದು ಪರಿಹಾರವನ್ನು ಹುಡುಕುತ್ತಲೇ ಇರುತ್ತಾರೆ. ಕೆಲವರು ಮನೆ ಮುಂದೆ ಬೆಂಕಿ ಹಾಕಿ ಮೈ ಬಿಸಿ ಮಾಡಿಕೊಳ್ಳುತ್ತಾರೆ, ಇನ್ನು ಕೆಲವರು ಹಲವಾರು ರೀತಿಯ ಜಾಕೆಟ್ ಅನ್ನು ಧರಿಸುವ ಮೂಲಕ ಚಳಿಯನ್ನು ತಡೆಯಲು ಪ್ರಯತ್ನಿಸುತ್ತಿರುತ್ತಾರೆ. ಕೆಲವೊಂದು ಪ್ರದೇಶಗಳಲ್ಲಿ ತಡೆಯಲಾಗದಷ್ಟು ಚಳಿಯಿರುತ್ತದೆ.
ಆದ್ರೆ ಇಲ್ಲೊಂದು ಸ್ವೆಟರ್ ಬಗ್ಗೆ ನೀವು ತಿಳಿದು ಕೊಳ್ಳಲೇ ಬೇಕು. ಈ ಸ್ವೆಟರ್ ಹಾಕಿಕೊಂಡರೆ ಚಳಿ ಆಗಲ್ವಂತೆ.
ಇಲ್ಲೊಂದು ಕಂಪೆನಿ ಹೀಟ್‌ ಜ್ಯಾಕೆಟ್‌ ಅನ್ನು ಸ್ಥಾಪಿಸಿದ್ದು. ಇದು ಚಳಿಯನ್ನು ನಿಯಂತ್ರಿಸುವ ಫೀಚರ್‌ ಅನ್ನು ಹೊಂದಿದೆ. ಇದರ ಹೆಸರು “YHG ಹೀಟೆಡ್‌ ವೆಸ್ಟ್”‌ . ಇದು ಈ ಬಾರಿಯ ಹೊಸ ಮಾದರಿಯ ವಿಂಟರ್‌ ಜಾಕೆಟ್‌ ಆಗಿದೆ.

ಇದರ ಹೆಸರು ಐಹೆಚ್‌ಜಿ ಹೀಟೆಡ್‌ ವೆಸ್ಟ್‌ ಎಂಬುದಾಗಿದೆ. ನೀವು ಇದರ ಹೆಸರಿನಿಂದಲೇ ವಿಶೇಷತೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ. ಇದು ಸಾಮಾನ್ಯ ಜಾಕೆಟ್‌ಗಿಂತ ಹೆಚ್ಚು ಬಿಸಿಯಾಗಿರುತ್ತದೆ. ಸಾಮಾನ್ಯ ಜಾಕೆಟ್‌ಗೆ ಹೋಲಿಸಿದರೆ ಈ ಹೀಟೆಡ್‌ ಜಾಕೆಟ್ ವಿಶೇಷವಾದ ಉತ್ತಮ ವೈಶಿಷ್ಟ್ಯವನ್ನು ಹೊಂದಿದೆ.‌

ಐಹೆಚ್‌ಜಿ ಹೀಟೆಡ್‌ ವೆಸ್ಟ್‌ ಜಾಕೆಟ್ ಪರಿಚಯ :
• ಇದು ವಾಸ್ತವವಾಗಿ ಹೀಟರ್‌ ಜಾಕೆಟ್ ಆಗಿದ್ದು ನೀವು ಬಟನ್ ಒತ್ತಿದ ತಕ್ಷಣ ಬಿಸಿಯಾಗುತ್ತದೆ.
• ಈ ಜಾಕೆಟ್‌ನ ಹಿಂಭಾಗದಲ್ಲಿ ಹೀಟಿಂಗ್ ಎಲಿಮೆಂಟ್‌ಗಳನ್ನು ಅಳವಡಿಸಲಾಗಿದೆ.
• ಈ ಎಲಿಮೆಂಟ್ಸ್‌ಗಳು ಕಾಣಿಸುವುದಿಲ್ಲ. ಆದರೆ ಕೆಲಸ ಮಾಡುತ್ತಿರುತ್ತದೆ.
• ಈ ಜಾಕೆಟ್‌ನಲ್ಲಿ, ನೀವು ಸಾರ್ವತ್ರಿಕ USB ಪ್ಲಗ್ ಅನ್ನು ಅಳವಡಿಕೆ ಮಾಡಲಾಗಿದೆ.
• ಜೊತೆಗೆ LED ಪವರ್ ಬಟನ್ ಅನ್ನು ಕೂಡ ಅಳವಡಿಸಿದ್ದಾರೆ.
• ಇದರ ಬಟ್ಟೆಯು ಸಾಮಾನ್ಯ ಜಾಕೆಟ್‌ನಂತೆಯೇ ಇದೆ ಆದರೆ ನೀವು ಬಟನ್ ಒತ್ತಿದ ತಕ್ಷಣ ಅದು ಬಿಸಿಯಾಗಲು ಪ್ರಾರಂಭಿಸುತ್ತದೆ.‌
• ನೀವು ಈ ಜಾಕೆಟ್ ಅನ್ನು ಹೆಚ್ಚಿನ ಮೀಡಿಯಮ್‌ ಮತ್ತು ಕಡಿಮೆ ಮೋಡ್‌ನಲ್ಲಿ ಇಡುವ ಅವಕಾಶವೂ ಇದೆ.
• ಈ ಜಾಕೆಟ್ ನ ಜೇಬಿನಲ್ಲಿ ಪವರ್ ಬ್ಯಾಂಕ್ ಅನ್ನು ಕೂಡ ಇಟ್ಟು ಚಾರ್ಜ್‌ ಮಾಡಬಹುದು.

ಈ ಜಾಕೆಟ್‌ ಬೇರೆ ಬೇರೆ ಇ – ಕಾಮರ್ಸ್‌ ವೆಬ್‌ಸೈಟ್‌ಗಳಲ್ಲಿ ಲಭ್ಯವಿದೆ. ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಈ ಜಾಕೆಟ್‌ ಅನ್ನು ಉತ್ಪಾದಿಸಿ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ ಇದು ಅಮೆಜಾನ್‌ನಿಂದ ಕೇವಲ ₹ 3709 ಕ್ಕೆ ಖರೀದಿಸಬಹುದು. ಈ ಜಾಕೆಟ್‌ ಈಗಿನ ತಂತ್ರಜ್ಞಾನ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ಹೊಸ ಉತ್ಪನ್ನವಾಗಿದ್ದು. ಜನರನ್ನು ಬೇಗನೆ ಆಕರ್ಷಿಸಬಹುದು.

ಈ ಜಾಕೆಟ್‌ ಹಲವಾರು ಫೀಚರ್ಸ್‌ ಅನ್ನು ಹೊಂದಿದೆ. ಅಲ್ಲದೇ ಜನರಿಗೆ ಇದು ತುಂಬಾನೇ ಉಪಯೋಗವಾಗಬಹುದು. ಇದು ಜನರನ್ನು ಚಳಿಗಾಲದಲ್ಲಿ ಬೆಚ್ಚಗೆ ಇಡುವಂತೆ ಮಾಡಲು ಪ್ರಯತ್ನಿಸುತ್ತದೆ. ಚಳಿಗಾಲವು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಈ ಜಾಕೆಟ್ ಅನ್ನು ಧರಿಸಬಹುದು, ಇದರಿಂದಾಗಿ ನೀವು ನಿಮ್ಮ ದೇಹವನ್ನು ಬಿಸಿಯಾಗಿ ಇಟ್ಟುಕೊಳ್ಳಬಹುದು. ಹೆಚ್ಚಾಗಿ ಹೊರಗೆ ಪ್ರಯಾಣ ಮಾಡುವ ಜನರಿಗೆ ಈ ಜಾಕೆಟ್ ಬೆಸ್ಟ್ ಆಯ್ಕೆ ಆಗಿದೆ.