Home Breaking Entertainment News Kannada ಕನ್ನಡದ ಮೊಟ್ಟ ಮೊದಲ 3ಡಿ ಸಿನಿಮಾ “ವಿಕ್ರಾಂತ್ ರೋಣ” ಕಲೆಕ್ಷನ್ ಎಷ್ಟು ಗೊತ್ತಾ? ; ...

ಕನ್ನಡದ ಮೊಟ್ಟ ಮೊದಲ 3ಡಿ ಸಿನಿಮಾ “ವಿಕ್ರಾಂತ್ ರೋಣ” ಕಲೆಕ್ಷನ್ ಎಷ್ಟು ಗೊತ್ತಾ? ; ರಂಗಿತರಂಗ ಪಾರ್ಟ್ 2 ಅಂದವರಿಗೆ ತೋರಿಸಿತು ಅಸಲಿ ಆಟ!!!!

Hindu neighbor gifts plot of land

Hindu neighbour gifts land to Muslim journalist

‘ವಿಕ್ರಾಂತ್‌ ರೋಣ’ ರಿಲೀಸ್‌ ಆಗಿ ಇನ್ನೇನು 1 ತಿಂಗಳು ಕಂಪ್ಲೀಟ್ ಆಗಲಿದೆ. ಆದರೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಸಿನಿಮಾ ಹವಾ ಒಂಚೂರು ಕಡಿಮೆ ಆಗಿಲ್ಲ. ಆಗೋಲ್ಲ ಬಿಡಿ. ಅಬ್ಬರಿಸುತ್ತಿರುವ ‘ವಿಕ್ರಾಂತ್‌ ರೋಣ’ ₹200 ಕೋಟಿ ಕ್ಲಬ್‌ ಸೇರಿದೆ. ಈ ಮೂಲಕ ₹200 ಕೋಟಿ ಕ್ಲಬ್‌ ಸೇರಿದ ಕನ್ನಡ ಸಿನಿಮಾ ಇಂಡಸ್ಟ್ರಿಯ 2ನೇ ಸಿನಿಮಾ ಎಂಬ ಹೆಗ್ಗಳಿಕೆಗೂ ‘ವಿಕ್ರಾಂತ್‌ ರೋಣ’ ಪಾತ್ರವಾಗಿದೆ. ಅಷ್ಟಕ್ಕೂ ‘ವಿಕ್ರಾಂತ್‌ ರೋಣ’ ಸಿನಿಮಾ ಈವರೆಗೂ ಕಲೆಕ್ಷನ್‌ ಮಾಡಿರುವ ಒಟ್ಟು ಮೊತ್ತ ಎಷ್ಟು ಅನ್ನೋ ಕುತೂಹಲ ನಿಮಗಿದ್ದರೆ ಮುಂದಿನ ವರದಿ ಓದಿ.
ಕನ್ನಡ ಸಿನಿಮಾಗಳ ತಾಕತ್ತು ಇಡೀ ಜಗತ್ತಿಗೇ ಗೊತ್ತಾಗಿದೆ. ಹೀಗಾಗಿ ಕನ್ನಡದ ಸಿನಿಮಾಗಳು ಸಪ್ತಸಾಗರ ದಾಟಿವೆ, ಎಲ್ಲೆಲ್ಲೂ ಕನ್ನಡದ ಕಂಪು ಹರಿಸುತ್ತಿವೆ ಸ್ಯಾಂಡಲ್‌ವುಡ್‌ ಸಿನಿಮಾಗಳು. ಇದೇ ರೀತಿ ಕನ್ನಡಿಗ ಕಿಚ್ಚ ಸುದೀಪ್‌ ಅವರ ‘ವಿಕ್ರಾಂತ್‌ ರೋಣ’ ಕೂಡ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಈಗಾಗಲೇ ಬಾಕ್ಸ್‌ ಆಫಿಸ್‌ನಲ್ಲಿ ₹210 ಕೋಟಿ ಕಲೆಕ್ಷನ್‌ ಮಾಡಿರುವ ಈ ಚಿತ್ರ ₹250 ಕೋಟಿ ಕ್ಲಬ್‌ ಸೇರಲು ದಾಪುಗಾಲು ಇಡುತ್ತಿದೆ.

ವಿಕ್ರಾಂತ್ ಗೆ ಈಗಲೂ ಹವಾ

ಈಗಾಗಲೇ ₹200 ಕೋಟಿ ಗಡಿ ದಾಟಿ ಹೊಸ ಇತಿಹಾಸ ಬರೆದಿರುವ ನಟ ಸುದೀಪ್‌ ಅವರ ಸಿನಿಮಾ, ಇದೀಗ ಜಗತ್ತಿನ ಮೂಲೆ ಮೂಲೆಯಲ್ಲೂ ಸದ್ದು ಮಾಡ್ತಿದೆ. ಈಗಾಗಲೇ ಹಾಲಿವುಡ್‌ ಅಂಗಳಕ್ಕೆ ಎಂಟ್ರಿಯಾದ ಮೊಟ್ಟಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಯನ್ನ ‘ವಿಕ್ರಾಂತ್‌ ರೋಣ’ ಪಡೆದಿದ್ದು, ಕೋಟಿ ಕೋಟಿ ಭಾರತೀಯರು ಹಾಗೂ ಜಗತ್ತಿನಾದ್ಯಂತ ಇರುವ ಕಿಚ್ಚ ಸುದೀಪ್‌ ಅವರ ಅಭಿಮಾನಿಗಳು ಸಿನಿಮಾ ಕಣ್ತುಂಬಿಕೊಂಡಿದ್ದಾರೆ. ಇನ್ನು ಸಿನಿಮಾ ರಿಲೀಸ್‌ ಆಗಿ 1 ತಿಂಗಳು ಕಂಪ್ಲೀಟ್‌ ಆಗುತ್ತಾ ಬಂದ್ರು ‘ವಿಕ್ರಾಂತ್‌ ರೋಣ’ ಹವಾ ಕಡಿಮೆ ಆಗಿಲ್ಲ.

₹300 ಕೋಟಿ ಕ್ಲಬ್‌ ಆಗುತ್ತಾ?

ಕನ್ನಡ ಸಿನಿಮಾ ರಂಗದ ಪಾಲಿಗೆ ಕಿಚ್ಚ ಸುದೀಪ್‌ ‘ವಿಕ್ರಾಂತ್‌ ರೋಣ’ ಸಖತ್‌ ಸ್ಪೆಷಲ್.‌ ಯಾಕಂದ್ರೆ ಕನ್ನಡಿಗರ ಸಿನಿಮಾ ಇದೇ ಮೊದಲ ಬಾರಿ ಹಾಲಿವುಡ್‌ಗೆ ಎಂಟ್ರಿ ಕೊಟ್ಟು, ಅದ್ಧೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಎಲ್ಲೆಲ್ಲೂ ಅಬ್ಬರ ತೋರುತ್ತಿರುವ ಕಿಚ್ಚ ಸುದೀಪ್‌ ‘ವಿಕ್ರಾಂತ್‌ ರೋಣ’ ಭರ್ಜರಿ ಕಲೆಕ್ಷನ್‌ ಕೂಡ ಮಾಡಿದೆ. ಅದರಲ್ಲೂ ರಿಲೀಸ್‌ ಆದ 27ನೇ ದಿನವೂ ‘ವಿಕ್ರಾಂತ್‌ ರೋಣ’ನ ಅಬ್ಬರ ಇನ್ನೂ ಹಾಗೇ ಇದೆ. ₹200 ಕೋಟಿ ಕ್ಲಬ್‌ ಸೇರಿ ಹೊಸ ದಾಖಲೆ ಬರೆದಿದೆ ಕನ್ನಡಿಗರ ‘ವಿಕ್ರಾಂತ್‌ ರೋಣ’ ಸಿನಿಮಾ.‌ ಅಲ್ಲದೆ ₹300 ಕೋಟಿ ಕ್ಲಬ್‌ ಸೇರುವ ನಿರೀಕ್ಷೆಯನ್ನೂ ಹುಟ್ಟುಹಾಕಿದೆ. ಹಾಗೂ ಕನ್ನಡ ಮೊಟ್ಟ ಮೊದಲ 3ಡಿ ಸಿನಿಮಾ ಎಂಬ ಹೆಗ್ಗಳಿಯೂ ಇದೆ.
ಹೀಗೆ ಹತ್ತು ಹಲವಾರು ವಿಷಯಗಳನ್ನು ಒಳಪಟ್ಟಿರುವ ವಿಕ್ರಾಂತರೋಣ ಇನ್ನು ಜಯವನ್ನು ಗಳಿಸಬೇಕು ಎಂಬುದೇ ಕನ್ನಡಿಗರ ಆಶಯ.