Home latest ಕಡಿಮೆ ಮಾಲಿನ್ಯಕಾರಕ ವಾಹನಕ್ಕೆ ತೆರಿಗೆ ವಿನಾಯಿತಿ

ಕಡಿಮೆ ಮಾಲಿನ್ಯಕಾರಕ ವಾಹನಕ್ಕೆ ತೆರಿಗೆ ವಿನಾಯಿತಿ

Hindu neighbor gifts plot of land

Hindu neighbour gifts land to Muslim journalist

ದಸರಾ ಹಬ್ಬದಲ್ಲಿ ರಾಜ್ಯದ ಜನತೆಗೆ ಬಂಪರ್ ಕೊಡುಗೆಗಳನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ದಿನನಿತ್ಯ ಬಳಕೆಯಾಗುವ ತೈಲಗಳ ಬೆಲೆ ಕಡಿಮೆ ಮಾಡುವ ಯೋಜನೆಯ ಬೆನ್ನಲ್ಲೇ ವಾಹನಗಳ ತೆರಿಗೆಯಲ್ಲಿ ವಿನಾಯಿತಿ ನೀಡಲು ಮುಂದಾಗಿದೆ.

ಆಟೋಮೊಬೈಲ್ ಕ್ಷೇತ್ರವನ್ನು ಬೆಂಬಲಿಸುವ ನಿಟ್ಟಿನಲ್ಲಿ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಕ್ಷೇತ್ರವನ್ನು ತೆರಿಗೆ ರಿಯಾಯಿತಿ ನೀಡಿ, ಮಾಲಿನ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಯೋಜನೆ ಸಿದ್ಧಪಡಿಸುತ್ತಿದೆ.

ಹೆಚ್ಚು ಮೈಲೇಜ್ ಹೊಂದಿರುವ ಇಲ್ಲವೇ ಕಡಿಮೆ ಇಂಧನ ಹೊರಸೂಸುವಿಕೆ ತಂತ್ರಜ್ಞಾನ ಬಳಸುವ ವಾಹನಗಳಿಗೆ ಬಂಪರ್ ಕೊಡುಗೆಯ ರೀತಿಯಲ್ಲಿ ತೆರಿಗೆ ರಿಯಾಯಿತಿ ನೀಡುವ ಉದ್ದೇಶವನ್ನು ಸರ್ಕಾರ ಒಳಗೊಂಡಿದೆ. ಈ ತೆರಿಗೆ ವಿನಾಯಿತಿ ಯೋಜನೆಯ ಪ್ರಸ್ತಾಪ ಸದ್ಯಕ್ಕೆ ಕಾರ್ಯರೂಪಕ್ಕೆ ಬರಲು ಕೇಂದ್ರ ಭಾರೀ ಕೈಗಾರಿಕೆಗಳ ಸಚಿವಾಲಯ ತಯಾರಿ ನಡೆಸುತ್ತಿದ್ದು, ನೋಡಲ್ ಕಂಪನಿಯು ತೆರಿಗೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿರ್ವಹಿಸಿ ಹಣಕಾಸು ಸಚಿವಾಲಯಕ್ಕೆ ಸಂಬಂಧಿಸಿದ ವಿವರಗಳನ್ನೂ ರವಾನಿಸಿದೆ.

ತೆರಿಗೆ ಪದ್ಧತಿಯ ಅಡಿಯಲ್ಲಿ ಕಂಡುಬರುವ ಲೋಪ ದೋಷಗಳ ಬಗ್ಗೆ ಕೇಂದ್ರ ಮತ್ತು ರಾಜ್ಯಗಳಿಗೆ ಸಲಹೆಗಳನ್ನು ನೀಡುವ ಅಧಿಕಾರವನ್ನು ಸಚಿವಾಲಯ ಹೊಂದಿದ್ದು,ಎಲೆಕ್ಟ್ರಿಕ್ ವಾಹನಗಳ ಬಳಕೆಯಿಂದ ಇಂಧನ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.

ಈ ಯೋಜನೆ ಜಾರಿಗೆ ಬಂದರೆ, ಜಿ. ಎಸ್. ಟಿ ಕೌನ್ಸಿಲ್‌ಗಿಂತ ತ್ವರಿತವಾಗಿ ಸರಿಯಾದ ಪ್ರಸ್ತಾವನೆಗಳನ್ನು ಕೈಗೊಳ್ಳಬಹುದು. ಇದೀಗ, ಪ್ಯಾಸೆಂಜರ್ ಆಟೋಮೊಬೈಲ್ಗಳ ಮೇಲೆ ಶೇ.28 ರಷ್ಟು GST ಶುಲ್ಕವಿದ್ದು, ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ ಗಾಗಿ ರಿಯಾಯಿತಿಯನ್ನು ಮೀಸಲಿಡಲಾಗಿದ್ದು, ಶೇ.5ರಷ್ಟು ತೆರಿಗೆಯನ್ನು ಹೊಂದಿದೆ.

ಮೂಲ ಶುಲ್ಕದ ಮೇಲೆ ಶೇ.28ರಷ್ಟು ಅಲ್ಲದೆ,ಶೇ. 1 ರಿಂದ 22 ರವರೆಗೆ ಸೆಸ್ಗಳಿವೆ. ಇದರ ಜೊತೆಗೆ ಹೈಬ್ರಿಡ್ ಆಟೋಮೊಬೈಲ್ಗಳು ಶೇ. 43ರಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಕೇವಲ ಎಲೆಕ್ಟ್ರಿಕ್ ವಾಹನಗಳಲ್ಲದೆ, ಇತರ ತಂತ್ರಜ್ಞಾನಗಳನ್ನು ಸಹ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿದ್ದು, ಈ ನಡುವೆ ವಿಶಿಷ್ಟವಾದ ಹೈಬ್ರಿಡ್ ಆಟೋಮೊಬೈಲ್ಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಪ್ರಸ್ತಾವನೆಯನ್ನು ಈ ಮೊದಲೆ ಸಲ್ಲಿಸಿದ್ದರೂ ಕೂಡ ಆಕ್ಷೇಪ ವ್ಯಕ್ತವಾಗಿ ಇನ್ನೂ ಕಾರ್ಯರೂಪಕ್ಕೆ ತರಲು ಸಾಧ್ಯವಾಗಿಲ್ಲ. ವಾಹನಗಳ ಮೇಲಿನ ತೆರಿಗೆ ಕಡಿತ ಎಷ್ಟರ ಮಟ್ಟಿಗೆ ಜನರಿಗೆ ಪ್ರಯೋಜನವಾಗಲಿದೆ ಎಂದು ಕಾದು ನೋಡಬೇಕಾಗಿದೆ.