Home Interesting Mahalakshmi : ನವವಧು ಮಹಾಲಕ್ಷ್ಮಿ ಗಂಡನಿಗಾಗಿ ಬೇಯಿಸಿದ ಮೊಟ್ಟೆ ಸುಟ್ಟು ಕರಕಲಾಯ್ತು | ಇದೇನು ಕಥೆ?

Mahalakshmi : ನವವಧು ಮಹಾಲಕ್ಷ್ಮಿ ಗಂಡನಿಗಾಗಿ ಬೇಯಿಸಿದ ಮೊಟ್ಟೆ ಸುಟ್ಟು ಕರಕಲಾಯ್ತು | ಇದೇನು ಕಥೆ?

Hindu neighbor gifts plot of land

Hindu neighbour gifts land to Muslim journalist

ತಮಿಳು ಕಿರುತೆರೆಯ ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಜೋಡಿ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿ ಮದುವೆಯ ಬಳಿಕ ಒಂದಲ್ಲ ಒಂದು ವಿಚಾರಕ್ಕೆ ನೆಟ್ಟಿಗರ ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಮದುವೆಯ ವಿಷಯಕ್ಕೆ ಕಾಲೆಳೆಯುವ ಮಂದಿಯೇ ಹೆಚ್ಚು. ಸದ್ಯ ಹೊಸ ವಿಷಯವನ್ನು ಶೇರ್ ಮಾಡಿರುವ ರವೀಂದ್ರ ಅವರು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುವ ಪ್ರಯತ್ನ ನಡೆಸಿದ್ದಾರೆ.

ತಮಿಳು ಕಿರುತೆರೆ ನಟಿ ಮಹಾಲಕ್ಷ್ಮಿ ಅವರು ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಅವರನ್ನು ಮದುವೆಯಾಗಿ ಎಷ್ಟೋ ದಿನಗಳ ಕಾಲ ಟ್ರೆಂಡಿಂಗ್ ಆಗಿ ಸುದ್ದಿಯಾಗಿದ್ದರು. ತಮ್ಮ ಮದುವೆ ಫೋಟೊ ಮೂಲಕವೇ ಸುದ್ದಿಯಾದ ಜೋಡಿ ಈಗ ನಿತ್ಯ ಸುದ್ದಿಯಲ್ಲಿದ್ದಾರೆ. ಇದೀಗ, ರವೀಂದ್ರ ಅವರು ಇತ್ತೀಚೆಗೆ ಪತ್ನಿಯ ಕುಕ್ಕಿಂಗ್ ಸ್ಕಿಲ್ಸ್ ತೋರಿಸುವ ಫೋಟೊ ಒಂದನ್ನು ಶೇರ್ ಮಾಡಿ ಮುದ್ದಿನ ಮಡದಿಯನ್ನು ತಮಾಷೆ ಮಾಡಿದ್ದಾರೆ.

ಬೇಯಿಸಿದ ಮೊಟ್ಟೆ ಈ ರೀತಿ ಸೀದುಹೋಗುವುದನ್ನು ನಾನು ಜೀವಮಾನದಲ್ಲಿಯೇ ಕಂಡಿಲ್ಲ ಜೊತೆಗೆ ತಾನು ತೆಳ್ಳಗಾಗದೆ ಬೇರೆ ದಾರಿ ಉಳಿಸಿಲ್ಲ ಮಹಾಲಕ್ಷ್ಮಿ ಎಂದು ಬರೆದಿದ್ದಾರೆ.ನ್ಯೂ ಲೈಫ್ ಮೈ ವೈಫ್ ಎಂದು ರವೀಂದ್ರ ಕ್ಯಾಪ್ಶನ್ ಕೊಟ್ಟಿದ್ದು ಇದರಲ್ಲಿ ತಮ್ಮ ಹೆಂಡತಿಯ ಕುಕ್ಕಿಂಗ್ ಸ್ಕಿಲ್ಸ್​ ಅನ್ನು ತೋರ್ಪಡಿಸಿದ್ದಾರೆ.

ಈ ಮೊದಲು ಮದುವೆಯ ಫೋಟೋಗಳಂತೂ ದೇಶಾದ್ಯಂತ ಸುದ್ದಿಯಾಗಿ, ರವೀಂದ್ರ ಅವರ ದೇಹ ಗಾತ್ರ, ಬಣ್ಣವನ್ನು ಮೆನ್ಶನ್ ಮಾಡಿ ನೆಟ್ಟಿಗರು ಟ್ರೋಲ್ ಮಾಡಿದ್ದರು.

ಈಗಲೂ ನೆಟ್ಟಿಗರು ತಮಿಳು ಕಿರುತೆರೆಯ ಸೆಲೆಬ್ರಿಟಿ ಜೋಡಿಯ ಕಾಲೆಳೆಯುವುದನ್ನು ಬಿಟ್ಟಿಲ್ಲ. ಆದರೆ ಇದ್ಯಾವುದಕ್ಕೂ ಇಬ್ಬರೂ ಕ್ಯಾರೇ ಎನ್ನದೆ ಖುಷಿಯಲ್ಲಿ ಜೀವನ ನಡೆಸುತ್ತಿದ್ದಾರೆ.

ಮಹಾಲಕ್ಷ್ಮಿಗೆ ಇದು ಎರಡನೇ ಮದುವೆಯಾಗಿದ್ದು ನಟಿ ಮೊದಲ ಮದುವೆಯಲ್ಲಿ ಒಬ್ಬ ಮಗನನ್ನು ಹೊಂದಿದ್ದು, ಸಣ್ಣ ಸಣ್ಣ ವಿಚಾರದಲ್ಲಿಯೂ ಸಂತೋಷವನ್ನು ಅರಸುತ್ತಾ ನೆಮ್ಮದಿಯ ಬದುಕು ಕಟ್ಟಿಕೊಳ್ಳುತ್ತಿರುವ ಜೋಡಿಗಳು ಯಾರ ಮಾತಿಗೂ ಕಿವಿಗೊಡದೆ ಖುಷಿಯ ಕ್ಷಣಗಳನ್ನು ಆಸ್ವಾದಿಸುತ್ತಿದ್ದಾರೆ.