Home Interesting ಮಂಗಳೂರು:ಪ್ರಧಾನಿ ಮೋದಿ ಪರ ವಾಟ್ಸಪ್ ಸ್ಟೇಟಸ್!! ವಿದ್ಯಾರ್ಥಿನಿಗೆ ವಿದ್ಯಾರ್ಥಿಗಳಿಂದಲೇ ಬೆದರಿಕೆ-ದೂರು!!

ಮಂಗಳೂರು:ಪ್ರಧಾನಿ ಮೋದಿ ಪರ ವಾಟ್ಸಪ್ ಸ್ಟೇಟಸ್!! ವಿದ್ಯಾರ್ಥಿನಿಗೆ ವಿದ್ಯಾರ್ಥಿಗಳಿಂದಲೇ ಬೆದರಿಕೆ-ದೂರು!!

Hindu neighbor gifts plot of land

Hindu neighbour gifts land to Muslim journalist

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ.ಕೆಲ ಮಹಿಳೆಯರು ತಮ್ಮ ಮೇಲೆ ನಡೆಯುವ ಹಲ್ಲೆ ಪ್ರಕರಣದ ಬಗ್ಗೆ ದ್ವನಿ ಎತ್ತಿದರೆ ಮತ್ತೆ ಕೆಲವರು ಮನೆಯ ಮರ್ಯಾದೆಗೆ ಅಂಜಿ ಮೌನ ತಾಳುತ್ತಾರೆ. ಇತ್ತೀಚೆಗಷ್ಟೇ ಸಂಶೋಧನಾ ವಿದ್ಯಾರ್ಥಿನಿ ಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ಪ್ರಾಧ್ಯಾಪಕನನ್ನು ಅಮಾನತು ಮಾಡಿದ ಘಟನೆ ವರದಿಯಾಗಿತ್ತು. ಇದೀಗ, ಮತ್ತೊಂದು ಪ್ರಕರಣ ಕರಾವಳಿಯ ಸುಳ್ಯದ ಕಾಲೇಜೊಂದರಲ್ಲಿ ಬೆಳಕಿಗೆ ಬಂದಿದೆ.

ಹೌದು!!!..ಪ್ರಧಾನಿ ಮೋದಿ ಸ್ಟೇಟಸ್ (Modi Status)​ ಹಾಕಿದಕ್ಕಾಗಿ ಡೆಂಟಲ್ ವಿದ್ಯಾರ್ಥಿನಿಗೆ (Dental Student) ರ‍್ಯಾಗಿಂಗ್ ಮಾಡಿರುವ ಘಟನೆ ಸುಳ್ಯದ ಕೆ.ವಿ‌.ಜಿ ಡೆಂಟಲ್ ಕಾಲೇಜಿನಲ್ಲಿ ನಡೆದಿದ್ದು, ವಿದ್ಯಾರ್ಥಿನಿ ಕಾಲೇಜಿನ ಆರು ವಿದ್ಯಾರ್ಥಿಗಳ ವಿರುದ್ಧ ದೂರು ನೀಡಿದ್ದಾರೆ ಎನ್ನಲಾಗಿದೆ ಸದ್ಯ ಈ ಪ್ರಕರಣದ ಕುರಿತಾಗಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಕೆ.ವಿ.‌ಜಿ ಡೆಂಟಲ್ ಕಾಲೇಜಿನಲ್ಲಿ ಮೂರನೇ ವರ್ಷದ ವಿದ್ಯಾರ್ಥಿನಿ ರ್ಯಾಂಕ್ ಹೋಲ್ಡರ್ ಆಗಿದ್ದು, ಆಕೆಯ ಮೇಲೆ ರ‍್ಯಾಗಿಂಗ್ ಮಾಡಲಾಗಿದ್ದು, ಆಕೆ ಬೆಂಗಳೂರಿನ ವೈಟ್ ಫೀಲ್ಡ್​ ನಿವಾಸಿಯಾಗಿದ್ದು ಸದ್ಯ ಸುಳ್ಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎನ್ನಲಾಗಿದೆ.

ನೊಂದ ವಿದ್ಯಾರ್ಥಿನಿ ತನ್ನ ಮೊಬೈಲ್ ನಲ್ಲಿ ಮೋದಿಯ ಸ್ಟೇಟಸ್​​ ಹಾಕಿದ್ದರು ಎನ್ನಲಾಗಿದ್ದು, ಹೀಗಾಗಿ, ಕೇರಳ ಮೂಲದ ಆರು ಮಂದಿ ವಿದ್ಯಾರ್ಥಿಗಳು ನೊಂದ ವಿದ್ಯಾರ್ಥಿನಿ ಮೇಲೆ ರ‍್ಯಾಗಿಂಗ್ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ. ಇದರಿಂದ ನೊಂದ ವಿದ್ಯಾರ್ಥಿನಿ ಸುಳ್ಯ ಪೊಲೀಸ್​ ಠಾಣೆಗೆ ತೆರಳಿ ರ‍್ಯಾಗಿಂಗ್​ ಜೊತೆಗೆ ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ, ವಿದ್ಯಾರ್ಥಿನಿಯ ದೂರಿನ ಅನ್ವಯ ಕಾಲೇಜಿನ ಮೂರನೇ ವರ್ಷದ ಡೆಂಟಲ್ ವಿದ್ಯಾರ್ಥಿ ವಿಶಾಖ್ ಸೇರಿದಂತೆ ಆರು ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.