Home Interesting ಹೆಣ್ಣು ಹೆತ್ತ ಕೂಡಲೇ ಅದೃಷ್ಟ ಮನೆ ಬಾಗಿಲಿಗೇ ಬಂತು | 80 ಲಕ್ಷ ಗೆದ್ದು ಬೀಗಿದ...

ಹೆಣ್ಣು ಹೆತ್ತ ಕೂಡಲೇ ಅದೃಷ್ಟ ಮನೆ ಬಾಗಿಲಿಗೇ ಬಂತು | 80 ಲಕ್ಷ ಗೆದ್ದು ಬೀಗಿದ ಬಾಣಂತಿ!

Hindu neighbor gifts plot of land

Hindu neighbour gifts land to Muslim journalist

ಅದೃಷ್ಟ ಎಂಬುದು ಯಾವ ಘಳಿಗೆಯಲ್ಲಿ, ಯಾರಿಗೆ ಒಲಿದು ಬರುತ್ತದೆ ಎಂಬುದು ಗೊತ್ತೇ ಆಗುದಿಲ್ಲ. ಅದೃಷ್ಟವೊಂದಿದ್ದರೆ ಬಡವನು ನಾಳೆ ಸಾಹುಕಾರನಾದರೂ ಸಂಶಯವಿಲ್ಲ. ಇಲ್ಲೊಬ್ಬ ಮಹಿಳೆಗೆ ಒಂದಲ್ಲ ಡಬಲ್ ಅದೃಷ್ಟ ಒಲಿದಿದೆ. ಅಷ್ಟಕ್ಕೂ ಈ ಅದೃಷ್ಟವಂತೆ ಮಹಿಳೆಯ ಕಥೆ ಏನ್ ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ.

ಉತ್ತರ ಕೆರೊಲಿನಾದ ಕಾನ್ನಾರ್ಡ್‌ನ 28 ವರ್ಷದ ಮಹಿಳೆ ಮನೆಗೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಈಕೆ ತನ್ನ ಲಕ್ ಪರೀಕ್ಷೆ ಮಾಡಲು ಪವರ್‌ಬಾಲ್ ಟಿಕೆಟ್ ಖರೀದಿಸಿದ್ದಳು. ಆ ವೇಳೆ ಈಕೆ ತುಂಬು ಗರ್ಭಿಣಿ. ಕಳೆದ ವಾರ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಹೆತ್ತ ಖುಷಿ ಒಂದೆಡೆಯಾದರೆ, ಮಗು ಹೆತ್ತು ಎರಡು ಗಂಟೆಯ ಒಳಗೆ ಆಕೆಗೆ ಬಹುಮಾನದ ಸುದ್ದಿಯೂ ಬಂದಿದ್ದು, ಡಬಲ್ ಧಮಾಕಾ ಎಂದು ಬರೆದುಕೊಂಡಿದ್ದಾಳೆ.

ಹೆಣ್ಣು ಮಗುವಿಗೆ ಜನ್ಮ ನೀಡಿದ ಕೆಲವೇ ಗಂಟೆಗಳಲ್ಲಿ $100,000 (ಸುಮಾರು 81 ಲಕ್ಷ ರೂಪಾಯಿ) ಬಹುಮಾನ ಲಾಟರಿಯಲ್ಲಿ ಸಿಕ್ಕಿದ್ದು, ಇದರ ಬಗ್ಗೆ ಸುದ್ದಿ ವೈರಲ್ ಆಗಿದೆ. ಲಾಟರಿಯಲ್ಲಿ ಈ ಬಹುಮಾನ ಗೆದ್ದಿದ್ದು, ತನ್ನ ಮಗಳ ಕಾಲ್ಗುಣ ಎಂದು ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಈಕೆಗೆ ಇಬ್ಬರು ಗಂಡುಮಕ್ಕಳಿದ್ದರು. ಹೆಣ್ಣು ಮಗುವಿನ ಆಸೆಯಿಂದ ಮತ್ತೊಮ್ಮೆ ಗರ್ಭ ಧರಿಸಿದ್ದಳು. ಮಗಳು ಹುಟ್ಟಿದ ಖುಷಿಯಲ್ಲಿ ಇರುವಾಗಲೇ ಬಹುಮಾನವೂ ಬಂದಿದೆ. . “ಮಗಳು ನನಗೆ ಅದೃಷ್ಟವನ್ನು ತಂದಳು ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾಳೆ.