Home latest Sexual Assault on Cow : ಆಕಳ ಕರುವಿನ ಮೇಲೆ ಲೈಂಗಿಕ ತೃಷೆ ತೀರಿಸಿಕೊಂಡ ವಿಕೃತಕಾಮಿ!

Sexual Assault on Cow : ಆಕಳ ಕರುವಿನ ಮೇಲೆ ಲೈಂಗಿಕ ತೃಷೆ ತೀರಿಸಿಕೊಂಡ ವಿಕೃತಕಾಮಿ!

Hindu neighbor gifts plot of land

Hindu neighbour gifts land to Muslim journalist

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನಂಪ್ರತಿ ಹೆಚ್ಚುತ್ತಿದ್ದು, ದೈಹಿಕವಾಗಿ ಮಾನಸಿಕವಾಗಿ ಕಿರುಕುಳ ನೀಡುವ ವಿಕೃತ ಕಾಮಿ ವ್ಯಕ್ತಿತ್ವದವರು ನಾವು ನೋಡಿರುತ್ತೇವೆ. ಆದರೆ ಏನು ಅರಿಯದ ಮುಗ್ಧ ಗೋವುಗಳ ಮೇಲೂ ಕೂಡ ತಮ್ಮ ಅಟ್ಟಹಾಸ ಮೆರೆಯುವ ಅಮಾನವೀಯ ಘಟನೆಗಳು ನಡೆಯುತ್ತಿವೆ. ಇದೇ ರೀತಿಯ ಘಟನೆಯೊಂದು ಬೆಳಕಿಗೆ ಬಂದಿದೆ.

ಕೊಟ್ಟಿಗೆಯಲ್ಲಿ ಮಲಗಿದ್ದ ಆಕಳಿನ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿ ಅಮಾನುಷವಾಗಿ ವಿಕೃತಿಯನ್ನು (Sexual assault on cow) ಮೆರೆದಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ಲಿಂಗಸಗೂರು ಗ್ರಾಮದ ಅಮರೇಶ ಎಂಬವರಿಗೆ ಗ್ರಾಮದ ಅಮೀನ ದರ್ಗಾದ ಪಕ್ಕದಲ್ಲಿ ಹೊಲವಿದ್ದು, ಅಮರೇಶ ಅವರು ತಮ್ಮ ಹೊಲದಲ್ಲೇ ಒಂದು ಕೊಟ್ಟಿಗೆಯನ್ನು ಕಟ್ಟಿಕೊಂಡು ಅಲ್ಲಿ ಏಳೆಂಟು ದನವನ್ನು ಸಾಕುತ್ತಿದ್ದರು ಎನ್ನಲಾಗಿದೆ. ಅಮರೇಶ ರವರು ಹೆಚ್ಚಿನ ಸಮಯ ಗೋವುಗಳ ಜೊತೆಗೆ ಕಳೆಯುತ್ತಿದ್ದರು ಎನ್ನಲಾಗಿದ್ದು, ಕೇವಲ ಊಟ ಮತ್ತು ಸ್ನಾನ ಶೌಚಾದಿಗಳಿಗಷ್ಟೇ ಮನೆಗೆ ಹೋಗುತ್ತಿದ್ದರು ಎನ್ನಲಾಗಿದೆ.

ಡಿಸೆಂಬರ್‌ 31 ರ ರಾತ್ರಿಯೂ ಅಲ್ಲೇ ಮಲಗಿದ್ದ ಅಮರೇಶ ಅವರು ಬೆಳಗ್ಗಿನ ಜಾವ ದನಗಳಿಗೆ ಆಹಾರ ನೀಡಿ, ಸ್ನಾನ ಮತ್ತು ತಿಂಡಿ ಮಾಡಿಕೊಂಡಿಕೊಂಡು ಬರಲೆಂದು ಮನೆಗೆ ತೆರಳಿದ್ದ ಸಂದರ್ಭ ಈ ಸಮಯವನ್ನು ಸಾಧಿಸಿಕೊಂಡ ಗೋಮುಖ ವ್ಯಾಘ್ರ ದ ವ್ಯಕ್ತಿತ್ವದ ವ್ಯಕ್ತಿ ಕರುವಿನ ಮೇಲೆರಗಿ ಅತ್ಯಾಚಾರ ಎಸಗಿದ್ದಾನೆ. ಬೆಳಗ್ಗೆ 7.30ರ ಹೊತ್ತಿಗೆ ಅಮರೇಶ ಮರಳಿ ಬಂದಾಗ ಈ ದೃಶ್ಯವನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.

ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಸ್ಥಿತಿಯಲ್ಲೇ ಅದರ ಕೈ ಕಾಲುಗಳನ್ನೂ ಕಟ್ಟಿ ಹಾಕಿ ಇಮ್ತಿಯಾಜ್‌(24) ಒಂದು ಆಕಳ ಕರುವನ್ನು ನೆಲಕ್ಕೆ ಕೆಡವಿ ಅದರ ಮೇಲೆ ಪೈಶಾಚಿಕ ಕೃತ್ಯ ಎಸಗಿದ್ದನ್ನು ಕಂಡು ಇಮ್ತಿಯಾಜ್ ಎಂಬ ವ್ಯಕ್ತಿಯನ್ನು ಅಮರೇಶ ಹಿಡಿದು ಪೊಲೀಸ್‌ ಠಾಣೆಗೆ ಒಪ್ಪಿಸಿ ದೂರು ನೀಡಿದ್ದಾರೆ.


ಆರೋಪಿ ವಿರುದ್ಧ ಹಸುವಿನ ಮಾಲೀಕರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಘಟನೆ ಮುನ್ನಲೆಗೆ ಬಂದಿದ್ದು, ಸದ್ಯ ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿದ್ದು, ರಿಕ್ಷಾ ಚಾಲಕನಾಗಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಸೆಕ್ಷನ್‌ 377ರ ಅಡಿ ಅನೈಸರ್ಗಿಕ ಲೈಂಗಿಕ ಸಂಬಂಧದ ಕಾಲಂನಡಿಯಲ್ಲಿ ಇಮ್ತಿಯಾಜ್ ಮೇಲೆ ದೌರ್ಜನ್ಯ ಪ್ರಕರಣ ದಾಖಲಾಗಿದೆ.