Home Karnataka State Politics Updates ಪ್ರತಿದಿನ ನಾನು 2- 3 ಕೆಜಿ ಬೈಗುಳ ತಿನ್ನುತ್ತೇನೆ; ಬೈಗುಳ ವನ್ನೇ ಪೌಷ್ಟಿಕಾಂಶವಾಗಿ ಪರಿವರ್ತಿಸುವ ಶಕ್ತಿ...

ಪ್ರತಿದಿನ ನಾನು 2- 3 ಕೆಜಿ ಬೈಗುಳ ತಿನ್ನುತ್ತೇನೆ; ಬೈಗುಳ ವನ್ನೇ ಪೌಷ್ಟಿಕಾಂಶವಾಗಿ ಪರಿವರ್ತಿಸುವ ಶಕ್ತಿ ದೇವರು ನನಗೆ ಕೊಟ್ಟಿದ್ದಾರೆ!!! ವಿರೋಧಿಗಳಿಗೆ ಟಾಂಗ್ ಕೊಟ್ಟ ಮೋದಿ

Hindu neighbor gifts plot of land

Hindu neighbour gifts land to Muslim journalist

ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ತಮಗೆ ಹೇಳಿಕೆ ನೀಡಿದ್ದವರಿಗೆ ಪರೋಕ್ಷವಾಗಿ ಉತ್ತರ ನೀಡಿದ್ದು, ಪ್ರತಿದಿನ ನಾನು 2-3 ಕೆ.ಜಿ ಬೈಗುಳ ಸ್ವೀಕರಿಸುತ್ತೇನೆ. ಆದರು ಕೂಡ ಆ ಬೈಗುಳವನ್ನೆ ಪೌಷ್ಠಿಕಾಂಶವಾಗಿ ಬದಲಾಯಿಸುವಂತಹ ವಿಶೇಷ ಶಕ್ತಿಯನ್ನು ತನಗೆ ದೇವರು ಕರುಣಿಸಿದ್ದಾರೆ ಎಂಬುದಾಗಿ ಹೇಳಿಕೊಂಡಿದ್ದಾರೆ.

ತೆಲಂಗಾಣದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಶನಿವಾರ ಮಾತನಾಡಿದ ಪ್ರಧಾನಿ ಮೋದಿ ” ನನಗೆ ಬೈಯುತ್ತಾರೆ, ಎಷ್ಟೆಂದರೆ ಆ ಬೈಗುಳ ದಿನಕ್ಕೆ ಎರಡು-ಮೂರು ಕೆಜಿಯಷ್ಟಿರುತ್ತದೆ. ಆದರೆ ಅದೆಲ್ಲವೂ ಪೌಷ್ಠಿಕಾಂಶವಾಗಿ ಬದಲಾಗುತ್ತದೆ. ದೇವರು ಅಂತಹ ವಿಶೇಷ ಶಕ್ತಿಯನ್ನು ತನಗೆ ವರವಾಗಿ ನೀಡಿದ್ದಾನೆ ಎಂದು ಸಿಎಂ ಕೆ. ಚಂದ್ರಶೇಖರ್‍ ರಾವ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಈ ಬೈಗುಳ ಗಳಲ್ಲಿ ಕೆಲವು ಕೆಲವರ ಹತಾಷೆಯಿಂದ ಹೊರ ಹೊಮ್ಮಿದ್ದರೆ, ಇಲ್ಲವೇ ಆತಂಕದಿಂದ ನನ್ನನ್ನು ಬೈಯುತ್ತಾರೆ. ಆದರೆ ನನ್ನತ್ತ ಬರುವ ಬೈಗುಳದಿಂದ ನೀವೆಂದೂ ದಾರಿ ತಪ್ಪಬೇಡಿ ಎಂದು ಸಲಹೆ ನೀಡಿದ್ದು ಜೊತೆಗೆ ಬೈಗುಳಗಳ ತಂತ್ರಕ್ಕೆ ನೀವು ಬಲಿಯಾಗಬೇಡಿ ಎಂದು ಇದೇ ವೇಳೆ ಕಾರ್ಯಕರ್ತರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ .

ಈ ಸಂದರ್ಭದಲ್ಲಿ ಬಿಜೆಪಿ, ಮೋದಿಯನ್ನು ನಿಂದಿಸಿದರೆ ನಿಂದಿಸಲಿ ಪರವಾಗಿಲ್ಲ, ಆದರೆ ತೆಲಂಗಾಣದ ಜನರನ್ನು ನಿಂದಿಸಿದರೆ ಮುಂದಿನ ದಿನಗಳಲ್ಲಿ ಅದಕ್ಕೆ ದೊಡ್ಡ ಮಟ್ಟದಲ್ಲಿ ಬೆಲೆ ತೆರಲು ಸಿದ್ದರಾಗಬೇಕಾಗುತ್ತದೆ ಎಂದು ತಮ್ಮ ವಿರೋಧಿಗಳಿಗೆ ಮೋದಿಯವರು ಎಚ್ಚರಿಕೆ ನೀಡಿದ್ದಾರೆ.