Home latest ಟಾಟಾ ನ್ಯಾನೋಗಿಂತ ಬಂತು ಅತ್ಯಂತ ಚಿಕ್ಕದಾದ ಎಲೆಕ್ಟ್ರಿಕ್ ಕಾರು | ಅದು ಕೂಡಾ ಅತೀ ಕಡಿಮೆ...

ಟಾಟಾ ನ್ಯಾನೋಗಿಂತ ಬಂತು ಅತ್ಯಂತ ಚಿಕ್ಕದಾದ ಎಲೆಕ್ಟ್ರಿಕ್ ಕಾರು | ಅದು ಕೂಡಾ ಅತೀ ಕಡಿಮೆ ಬೆಲೆಯಲ್ಲಿ !

Hindu neighbor gifts plot of land

Hindu neighbour gifts land to Muslim journalist

ಮುಂಬೈ ಮೂಲದ ಇವಿ ಸ್ಟಾರ್ಟಪ್ ಪಿಎಂವಿ ಎಲೆಕ್ಟ್ರಿಕ್ ತನ್ನ ಮೊದಲ ಎಲೆಕ್ಟ್ರಿಕ್ ಕಾರ್ EaS-E ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಈ ಹೊಸ ಪಿಎಂವಿ EaS-E ದೇಶದ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ವಾಹನವಾಗಿದೆ. ಭಾರತದ ಈ ಚಿಕ್ಕ ಎಲೆಕ್ಟ್ರಿಕ್ ಕಾರಿನಲ್ಲಿ ಇಬ್ಬರು ವಯಸ್ಕರು ಮತ್ತು ಮಗುವಿಗೆ ಕೂರಲು ಅವಕಾಶವಿದೆ. ನಗರ ಪ್ರದೇಶದ ಗ್ರಾಹಕರನ್ನು ಗುರಿಯಾಗಿಸಿಕೊಂಡ ಪಿಎಂವಿ EaS-E ಎಲೆಕ್ಟ್ರಿಕ್ ಕಾರು 2,915 ಎಂಎಂ, 1,1157 ಎಂಎಂ ಅಗಲ ಮತ್ತು 1,600 ಎಂಎಂ ಎತ್ತರವನ್ನು ಹೊಂದಿದೆ.

ಈ ಪಿಎಂವಿ EaS-E ಎಲೆಕ್ಟ್ರಿಕ್ ಕಾರು 2,087 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದ್ದು, ಈ ಎಲೆಕ್ಟ್ರಿಕ್ ಕಾರು 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಜೊತೆಗೆ 550 ಕೆಜಿ ತೂಕವನ್ನು ಹೊಂದಿದೆ. ಇತ್ತೀಚೆಗೆ ಹೆಚ್ಚಿನ ಗ್ರಾಹಕರು ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿದ್ದು, ಈ ವೇಳೆ ಟಾಟಾ ಕಂಪನಿಯು ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ತನ್ನ ಛಾಪು ಮೂಡಿಸಲು ಪ್ರಯತ್ನಿಸುತ್ತಿವೆ . ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಟಾಟಾ ಮೇಲುಗೈಯನ್ನು ಸಾಧಿಸಿರುವುದಲ್ಲದೆ,ಈ ನಡುವೆ ಮತ್ತೊಂದು ಸ್ವದೇಶಿ ಕಂಪನಿ ಪರ್ಸನಲ್ ಮೊಬಿಲಿಟಿ ವೆಹಿಕಲ್ (PMV) ಹೊಸ ಎಲೆಕ್ಟ್ರಿಯ ಕಾರನ್ನು ಬಿಡುಗಡೆಗೊಳಿಸಿದೆ.

ಅತ್ಯಂತ ಕಡಿಮೆ ಬೆಲೆಯಲ್ಲಿ ಟಾಟಾ ನ್ಯಾನೋ ಕಾರಿಗಿಂತಲೂ ಚಿಕ್ಕದಾದ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಿದ್ದು, ಈ ಸಣ್ಣ ಕಾರಿನಲ್ಲಿ ರಿಮೋಟ್ ಕಂಟ್ರೋಲ್ ಎಸಿ, ಲ್ಯಾಂಪ್ ಗಳು. ವಿಂಡೋಗಳು ಮತ್ತು ಹಾರ್ನ್‌ನೊಂದಿಗೆ ಬರುತ್ತದೆ. ಈ ಸಣ್ಣ ಕಾರು ಪುನರುತ್ಪಾದಕ ಬ್ರೇಕಿಂಗ್ ಮತ್ತು ಓವರ್-ದಿ-ಏರ್ ನವೀಕರಣಗಳನ್ನು ಬೆಂಬಲಿಸುತ್ತದೆ. ಇದು ವಿವಿಧ ಡ್ರೈವಿಂಗ್ ಮೋಡ್‌ಗಳು, ಅಡಿ-ಮುಕ್ತ ಚಾಲನೆ, ಬ್ಲೂಟೂತ್ ಸಂಪರ್ಕ, ಆನ್‌ಬೋರ್ಡ್ ನ್ಯಾವಿಗೇಷನ್, ಮ್ಯೂಸಿಕ್ ನಿಯಂತ್ರಣಕ್ಕೆ ಪ್ರವೇಶ ಮತ್ತು ಸಂಪರ್ಕಿತ ಸ್ಮಾರ್ಟ್‌ಫೋನ್‌ಗೆ ಟೆಲಿಫೋನಿ ನಿಯಂತ್ರಣವನ್ನು ನೀಡುತ್ತದೆ.

ಹೊಸ ಪಿಎಂವಿ EaS-E ಎಲೆಕ್ಟ್ರಿಕ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.4.79 ಲಕ್ಷವಾಗಿದ್ದು, ಇದು ಪರಿಚಯಾತ್ಮಕ ಬೆಲೆಯಾಗಿದ್ದು, ಇದು ಮೊದಲ 10,000 ಗ್ರಾಹಕರಿಗೆ ಅನ್ವಯವಾಗುತ್ತದೆ. ಹೊಸ ಪಿಎಂವಿ EaS-E ಎಲೆಕ್ಟ್ರಿಕ್ ಕಾರಿಗೆ ಈಗಾಗಲೇ ಸುಮಾರು 6,000 ಮುಂಗಡ-ಬುಕ್ಕಿಂಗ್ ಗಳನ್ನು ಹೊಂದಿದ್ದು, ಆಸಕ್ತ ಗ್ರಾಹಕರು ಸಣ್ಣ ಎಲೆಕ್ಟ್ರಿಕ್ ವಾಹನವನ್ನು ಆನ್‌ಲೈನ್‌ನಲ್ಲಿ ರೂ 2,000 ಟೋಕನ್ ಮೊತ್ತವನ್ನು ಪಾವತಿಸಿ ಬುಕ್ ಮಾಡಬಹುದಾಗಿದೆ.

ಈ ಪಿಎಂವಿ ಎಲೆಕ್ಟ್ರಿಕ್ ತನ್ನ ಉತ್ಪಾದನಾ ಘಟಕವನ್ನು ಪುಣೆಯಲ್ಲಿ ಸ್ಥಾಪಿಸಲು ಯೋಜನೆ ಹಾಕಿಕೊಂಡಿದೆ ಎನ್ನಲಾಗುತ್ತಿದ್ದು, ಕಂಪನಿಯು 2023 ರ ಮಧ್ಯದ ವೇಳೆಗೆ ಸಣ್ಣ ಪಿಎಂವಿ EaS-E ಎಲೆಕ್ಟ್ರಿಕ್ ಕಾರಿನ ವಿತರಣೆಯನ್ನು ಪ್ರಾರಂಭಿಸಲು ಚಿಂತನೆ ನಡೆಸುತ್ತಿದೆ. PMV EaS-E ಎಲೆಕ್ಟ್ರಿಕ್ ಕಾರು ಫಂಕಿ ಸ್ಟೈಲಿಂಗ್‌ನೊಂದಿಗೆ ಬರುತ್ತದೆ.

ಈ ಕಾರಿನಲ್ಲಿ ರೌಂಡ್ ಹೆಡ್‌ಲ್ಯಾಂಪ್‌ಗಳು, ಅಗಲದ ಉದ್ದಕ್ಕೂ ಚಲಿಸುವ LED ಲೈಟ್ ಬಾರ್ ಮತ್ತು ಸ್ಲಿಮ್ LED ಲ್ಯಾಂಪ್‌ಗಳನ್ನು ಒಳಗೊಂಡಿದ್ದು, ಟೈಲ್-ಲೈಟ್‌ಗಳ ಮೇಲೆ ಅಡ್ಡಲಾಗಿ ಇರಿಸಲಾಗಿರುವ ಲೈಟ್ ಬಾರ್ ಅನ್ನು ನೋಡಬಹುದಾಗಿದೆ.ಈ ಹೊಸ ಪಿಎಂವಿ ಎಲೆಕ್ಟ್ರಿಕ್ ಮೈಕ್ರೊಕಾರ್ 13-ಇಂಚಿನ ಚಕ್ರಗಳಲ್ಲಿ 145-80 R13 ಟೈರ್‌ಗಳನ್ನು ಹೊಂದಿದೆ. ಪಿಎಂವಿ ಇಎಎಸ್-ಇ ಸ್ಪೋರ್ಟ್ಸ್ ಡಿಸ್ಕ್ ಮುಂಭಾಗದಲ್ಲಿ ಮತ್ತು ಡ್ರಮ್ ಬ್ರೇಕ್ ಹಿಂಭಾಗದಲ್ಲಿ ಮತ್ತು ಎಲೆಕ್ಟ್ರಿಕ್ ಮೈಕ್ರೋಕಾರ್ ಪುನರುತ್ಪಾದಕ ಬ್ರೇಕಿಂಗ್‌ನಿಂದ ಪ್ರಯೋಜನವನ್ನು ಹೊಂದಿದೆ.

ಈ ಕಾರನ್ನು 4 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದ್ದು, ಯಾವುದೇ 15A ಔಟ್ಲೆಟ್ನಿಂದ ಇದನ್ನು ಚಾರ್ಜ್ ಮಾಡಬಹುದಾಗಿದೆ. ಆದರೆ ಗ್ರಾಹಕರು ಹೊಸ ಇವಿಯೊಂದಿಗೆ 3kW AC ಚಾರ್ಜರ್ ಅನ್ನು ಸಹ ಪಡೆಯಬಹುದಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಹೊಸ ಮಾದರಿಯು ಡಿಜಿಟಲ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಎಸಿ, ರಿಮೋಟ್ ಕೀಲೆಸ್ ಎಂಟ್ರಿ ಮತ್ತು ರಿಮೋಟ್ ಪಾರ್ಕ್ ಅಸಿಸ್ಟ್, ಕ್ರೂಸ್ ಕಂಟ್ರೋಲ್‌ಗಳು, ಏರ್‌ಬ್ಯಾಗ್‌ಗಳು, ಇತ್ಯಾದಿಗಳಂತಹ ಹಲವಾರು ಉನ್ನತ-ಮಟ್ಟದ ವೈಶಿಷ್ಟ್ಯಗಳನ್ನು ಹೊಂದಿದೆ.

ಇನ್ನು ಈ ಎಲೆಕ್ಟ್ರಿಕ್ ಕಾರು 13 ಬಿಹೆಚ್‍ಪಿ ಪವರ್ ಮತ್ತು 50 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹೊಸ ಸಣ್ಣ ಎಲೆಕ್ಟ್ರಿಕ್ ಕಾರು 5 ಸೆಕೆಂಡುಗಳಲ್ಲಿ 0 ರಿಂದ 40 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. PMV EaS-E ಎಲೆಕ್ಟ್ರಿಕ್ ಕಾರಿನಲ್ಲಿ 48B ಬ್ಯಾಟರಿಯನ್ನು ಹೊಂದಿದ್ದು, ಜೊತೆಗೆ 3 ರೇಂಜ್ ಆಯ್ಕೆಗಳನ್ನು ನೀಡುತ್ತದೆ. ಇದು 120km, 160km ಮತ್ತು 200km ಆಗಿದೆ. ಈ ಎಲೆಕ್ಟ್ರಿಕ್ ಕಾರಿನ ಟಾಪ್ ಸ್ಪೀಡ್ 70 ಕಿ.ಮೀ ಆಗಿದೆ.

ಈ ಹೊಸ ಪಿಎಂವಿ EaS-E ಎಲೆಕ್ಟ್ರಿಕ್ ಕಾರು ಗ್ರಾಹಕರ ಬೇಡಿಕೆಯೆಂಂತೆ ಬಜೆಟ್ ಬೆಲೆಯೊಳಗೆ ಹೆಚ್ಚಿನ ಫೀಚರ್ಸ್ ಗಳೊಂದಿಗೆ ಬಿಡುಗಡೆಗೊಂಡಿದ್ದು, ಹೆಚ್ಚಿನ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಬಹುದು ಎಂದು ಅಂದಾಜಿಸಲಾಗಿದೆ.