Home latest ಮದುವೆಯಾಗು ಎಂದ ಮಹಿಳಾ ಕಾನ್ಸ್‌ಟೇಬಲ್‌ನ ಕೊಂದು ಚರಂಡಿಗೆ ಎಸೆದ ತಹಶೀಲ್ದಾರ್‌

ಮದುವೆಯಾಗು ಎಂದ ಮಹಿಳಾ ಕಾನ್ಸ್‌ಟೇಬಲ್‌ನ ಕೊಂದು ಚರಂಡಿಗೆ ಎಸೆದ ತಹಶೀಲ್ದಾರ್‌

Hindu neighbor gifts plot of land

Hindu neighbour gifts land to Muslim journalist

ಮಹಿಳಾ ಕಾನ್ಸ್‌ಟೇಬಲ್ ಒಬ್ಬರ ಶವ ಚರಂಡಿಯಲ್ಲಿ ಪತ್ತೆಯಾಗಿದ್ದು ಜನರನ್ನು ಬೆಚ್ಚಿಬೀಳಿಸಿದೆ.

ಲಖನೌದಲ್ಲಿ ಈ ಘಟನೆ ನಡೆದಿದ್ದು, ಘಟನೆ ಸಂಬಂಧ ತಹಶೀಲ್ದಾರ್ ಪದ್ಮಶ್ ಶ್ರೀವಾಸ್ತವ್ ಹಾಗೂ ಅವರ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಪದೇಶ್ 5 ವರ್ಷಗಳ ಹಿಂದೆ ಮೃತ ಕಾನ್ಸ್ಟೇಬಲ್ ರುಚಿ ಸಿಂಗ್ ಅವರೊಂದಿಗೆ ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿದ್ದರು. ತಹಶೀಲ್ದಾರ್ ಪದೇಶ್ ವಿವಾಹದ ಬಳಿಕವೂ ರುಚಿ ಸಿಂಗ್ ಜೊತೆ ಸಂಬಂಧ ಹೊಂದಿದ್ದರು. ಈ ನಡುವೆ ಪದ್ಮಶ್ ತನ್ನ ಪತ್ನಿಗೆ ವಿಚ್ಛೇದನ ನೀಡಿ, ತನನ್ನು ವಿವಾಹವಾಗುವಂತೆ ಒತ್ತಡ ಹೇರುತ್ತಿದ್ದಳು. ರುಚಿ ಸಿಂಗ್ ಕೊನೆಯ ಕರೆ ತಹಶೀಲ್ದಾರ್ ಪದೇಶ್‌ಗೆ ಮಾಡಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆ ವಿಚಾರಣೆ ನಡೆಸಿದಾಗ ಕೊಲೆ ಮಾಡಿ ಚರಂಡಿಗೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೂರ್ವ ವಲಯ ಪೊಲೀಸರು ಮಾಹಿತಿ ನೀಡಿದ್ದಾರೆ.ಮಹಿಳಾ ಕಾನ್ಸ್‌ಟೇಬಲ್ ಹತ್ಯೆ ಪ್ರಕರಣದಲ್ಲಿ ತಹಶೀಲ್ದಾರ್, ಅವರ ಪತ್ನಿ ಹಾಗೂ ಇನ್ನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.