Home latest ಅರೆ ಇವಳೇ ಮಾಡರ್ನ್ ಹೆಂಡತಿ | ಗುಂಡಿಗೆ ಬಿದ್ದ ಗಂಡನ ವೀಡಿಯೊ ಮಾಡುತ್ತಾ ಕುಳಿತ ಹೆಂಡತಿ|

ಅರೆ ಇವಳೇ ಮಾಡರ್ನ್ ಹೆಂಡತಿ | ಗುಂಡಿಗೆ ಬಿದ್ದ ಗಂಡನ ವೀಡಿಯೊ ಮಾಡುತ್ತಾ ಕುಳಿತ ಹೆಂಡತಿ|

Hindu neighbor gifts plot of land

Hindu neighbour gifts land to Muslim journalist

ದಿನಂಪ್ರತಿ ಒಂದಲ್ಲ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುವಲ್ಲಿ ಯಶಸ್ವಿಯಾಗುತ್ತವೆ. ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ತಮಾಷೆಯ ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಅಂತದ್ದೇ ಇಲ್ಲೊಂದು ವಿಡಿಯೋ ವೈರಲ್‌ ಆಗಿದೆ .

ಅದೇನುಂತಾ ತಿಳಿಯಬೇಕಾದರೆ ಈ ವೀಡಿಯೋ ನೋಡಿ.

ಮೋಟಾರು ಬೈಕ್‌ನಲ್ಲಿ ದಂಪತಿಗಳು ವೇಗವಾಗಿ ಹೋಗುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ದಂಪತಿಗಳಿಬ್ಬರು ತಮ್ಮ ಸವಾರಿಯನ್ನು ಆನಂದಿಸುತ್ತಿದ್ದಾರೆ. ಮಹಿಳೆ ಫುಲ್‌ ಜಾಲಿ ಮೂಡ್‌ನಲ್ಲಿ ವಿಡಿಯೋ ಮಾಡುತ್ತಿದ್ದಾಳೆ. ಈ ನಡುವೆ ವಿಡಿಯೋಗೆ ಪತಿ ಫೋಸ್‌ ಕೊಡುವ ಭರದಲ್ಲಿ ದಾರಿ ಮುಂದೆ ನೋಡದೇ ಬೈಕ್‌ ಸ್ಕಿಡ್‌ ಆಗಿ ಬೀಳುತ್ತದೆ. ಪತ್ನಿ ರಸ್ತೆಯ ಒಂದು ಬದಿ ಬಿದ್ದರೆ, ಪತಿ ಇನ್ನೊಂದು ಬದಿ ಬೀಳುತ್ತಾರೆ. ತಮಾಷೆ ಇರುವುದೇ ಇಲ್ಲಿ!! ಈಗ ಪತ್ನಿ ಏನು ಮಾಡಬಹುದು ಊಹಿಸಿ!! ಗಂಡನನ್ನು ರಕ್ಷಿಸಲು ಮುಂದಾಗುತ್ತಾರೆ ಎಂದು ನೀವು ಅಂದುಕೊಡರೆ ಖಂಡಿತಾ ಇಲ್ಲ…

ಗಂಡನನ್ನು ಏಳಿಸುವ ಬದಲಿಗೆ ವಿಡಿಯೋ ಮಾಡೋದರಲ್ಲೆ ಬಿಝಿಯಾಗಿದ್ದಾರೆ. ಈ ವಿಡಿಯೋ ಸದ್ಯ ನೆಟಿಗ್ಗರನ್ನು ನಗುವಿನ ಅಲೆಯಲ್ಲಿ ತೇಲಿಸುತ್ತಿದ್ದು, ಈ ವೀಡಿಯೊ 1.66 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 13.5 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ.

ನೋಡಿದವರು ಅಕ್ಕಾ!!.. ನಿಜವಾಗಿಯೂ ನಿನಗೆ ಇದು ಬೇಕಿತ್ತಾ!! ಎಂದು ಕೇಳಿದರೂ ಅಚ್ಚರಿಯಿಲ್ಲ..