Home Breaking Entertainment News Kannada ಸೆಕ್ಸ್ ವೀಡಿಯೋ ನೋಡುವ ಚಟ ಗಂಡನಿಗಿತ್ತು – ನಟ ನರೇಶ್ ಪತ್ನಿಯ ಶಾಕಿಂಗ್ ಹೇಳಿಕೆ

ಸೆಕ್ಸ್ ವೀಡಿಯೋ ನೋಡುವ ಚಟ ಗಂಡನಿಗಿತ್ತು – ನಟ ನರೇಶ್ ಪತ್ನಿಯ ಶಾಕಿಂಗ್ ಹೇಳಿಕೆ

Hindu neighbor gifts plot of land

Hindu neighbour gifts land to Muslim journalist

ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಜೋಡಿ ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದಾರೆ. ನಟಿ ಪವಿತ್ರಾ ಲೋಕೇಶ್ ಹಾಗೂ ಹಿರಿಯ ನಟ ನರೇಶ್ ಅವರ ಸಂಬಂಧದ ಬಗ್ಗೆ ದಿನಕ್ಕೊಂದು ಕಥೆ ಕೇಳಿ ಬರುತ್ತಲೇ ಇವೆ. ಇವರಿಬ್ಬರು ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದವು. ಈ ಬಗ್ಗೆ ನರೇಶ್ ಅವರ ಮೂರನೇ ಪತ್ನಿ ರಮ್ಯಾ ಅವರು ಬುಸುಗುಡುತ್ತಿದ್ದು, ಇದೀಗ ನರೇಶ್ ಬಗ್ಗೆ ರಮ್ಯಾ ಅವರು ಶಾಕಿಂಗ್ ಮಾಹಿತಿಯೊಂದನ್ನು ನೀಡಿದ್ದಾರೆ.

ಈ ಹಿಂದೆ ಮೈಸೂರಿನ ಲಾಡ್ಜ್ ಒಂದರಲ್ಲಿ ಇಬ್ಬರು ಕೂಡ ನರೇಶ್ ಅವರ ಮೂರನೇ ಪತ್ನಿ ರಮ್ಯಾ ಅವರ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಈ ವಿಚಾರ ಭಾರೀ ಸುದ್ದಿಯಾಗಿತ್ತು. ಹಾಗೇ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ರಮ್ಯಾ, ನರೇಶ್ ಎಂತಹ‌ ವ್ಯಕ್ತಿ? ಅವರಿಗೆ ಯಾವೆಲ್ಲಾ ದುರಾಭ್ಯಾಸಗಳು ಇವೆ? ಎಂಬುದನ್ನು ಬಿಚ್ಚಿಟ್ಟಿದ್ದಾರೆ.

” ತನಗೆ ಕಾರು ಚಾಲಕನ ಜೊತೆ ಅಕ್ರಮ ಸಂಬಂಧ ಇದೆ ಎಂದು ನರೇಶ್ ಕತೆ ಕಟ್ಟಿದ್ದು, ಸದಾ ನನ್ನ ಮೇಲೆ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುವುದೇ ಆತನ ಕೆಲಸವಾಗಿತ್ತು. ಅಲ್ಲದೆ ಆತ ನೀಡಿದ ತೊಂದರೆಯ ಪರಿಣಾಮ ಹಲವು ರಾತ್ರಿ ನಿದ್ರೆ ಇಲ್ಲದೆ ಕಳೆದಿದ್ದುಂಟು” ಎಂದು ಪತ್ನಿ ರಮ್ಯಾ ಆರೋಪ ಮಾಡಿದ್ದಾರೆ.

“ಇದಿಷ್ಟೇ ಅಲ್ಲದೆ, ನರೇಶ್‌ಗೆ ತುಂಬಾ ಪೋರ್ನ್ ವಿಡಿಯೋಗಳನ್ನು ನೋಡುವ ಹವ್ಯಾಸವಿದೆ. ಈ ಬಗ್ಗೆ ಮಗ ರಣವೀರ್ ಬಂದು ಹೇಳುವಾಗಲೇ ತನಗೆ ಗೊತ್ತಾಗಿದ್ದು, ಅಪ್ಪ ಸಾಕಷ್ಟು ಕೆಟ್ಟ ಕೆಟ್ಟ ವಿಡಿಯೋಗಳನ್ನು ನೋಡುತ್ತಾರೆ ಎಂದು ರಣವೀರ್ ನನ್ನ ಬಳಿ ಬಂದು ಹೇಳಿದ್ದ” ಎಂದು ರಮ್ಯಾ ಅವರು ನರೇಶ್ ಮುಖವಾಡವನ್ನು ಕಳಚಿದ್ದಾರೆ.

ಈ ಹಿಂದೆ ನರೇಶ್ ಮೂರನೆ ಪತ್ನಿ ರಮ್ಯಾ ತಮಗೆ ಪತಿಯಿಂದ ಅನ್ಯಾಯವಾಗಿದ್ದು, ನ್ಯಾಯಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ವಿಚಾರಕ್ಕೆ ಪುಷ್ಟಿ ನೀಡುವಂತೆ ನರೇಶ್ ಹಾಗೂ ಪವಿತ್ರಾ ಹೋಟೆಲ್‌ನಲ್ಲಿ ಒಂದೇ ರೂಮಿನಲ್ಲಿ ತಂಗಿದ್ದರು. ಇಷ್ಟೆಲ್ಲಾ ನಡೆದರೂ ಪವಿತ್ರ ಲೋಕೇಶ್ ತಮ್ಮ ಸಂಬಂಧದ ಬಗ್ಗೆ ಬಾಯ್ಬಿಟ್ಟಿರಲಿಲ್ಲ. ತಾವು ಸ್ನೇಹಿತರು ಎಂದೇ ಹೇಳಿದ್ದರು.

ಆದರೆ ನರೇಶ್ 2023ರ ಹೊಸ ವರ್ಷಕ್ಕೆ ವಿಡಿಯೋವೊಂದನ್ನು ಬಿಡುಗಡೆ ಮಾಡುವ ಮೂಲಕ ಹೊಸ ಬಿಸಿ ಬಿಸಿ ಸುದ್ಧಿ ನೀಡಿದ್ದಾರೆ.
ಏನೆಂದರೆ, ಇವರಿಬ್ಬರು ಕ್ಯಾಂಡಲ್ ಲೈಟ್ ನಲ್ಲಿ ಪರಸ್ಪರ ಕೇಕ್ ತಿನ್ನಿಸಿ, ಇಬ್ಬರೂ ಒಬ್ಬರಿಗೊಬ್ಬರು ಪರಸ್ಪರ ಚುಂಬಿಸಿದ್ದಾರೆ. ಅಲ್ಲದೆ, ಸದ್ಯದಲ್ಲೇ ನಾವಿಬ್ಬರೂ ಮದುವೆಯಾಗಲಿದ್ದೇವೆ ಎಂದು ನರೇಶ್ ಪವಿತ್ರಾ ಲೋಕೇಶ್ ಜೊತೆಗಿನ ಸಂಬಂಧವನ್ನು ತಿಳಿಸಿದ್ದಾರೆ.