Home Entertainment Video Viral | ಸಮೋಸ ಪ್ರಿಯರೇ ಈ ವೀಡಿಯೋ ನೋಡಿ | ಈ ರೀತಿ ಸಮೋಸ...

Video Viral | ಸಮೋಸ ಪ್ರಿಯರೇ ಈ ವೀಡಿಯೋ ನೋಡಿ | ಈ ರೀತಿ ಸಮೋಸ ಮಾಡುವುದಾದರೆ ಜನ್ಮದಲ್ಲಿ ತಿನ್ನಲ್ಲ ನೀವು !!!

Hindu neighbor gifts plot of land

Hindu neighbour gifts land to Muslim journalist

ಚುಮುಚುಮು ಚಳಿಗೆ ಆಲೂಗಡ್ಡೆ ಸಮೋಸ ಅಂದ್ರೆ ಎಲ್ಲರ ಬಾಯಲ್ಲಿ ನೀರೂರಿಸುತ್ತೆ..ಸಂಜೆಯಾಗುತ್ತಿದಂತೆ ಟೀ ಜತೆ ಟೀ ಜತೆ ಬಿಸಿಬಿಸಿ ಸಮೋಸ ತಿನ್ನೋದು ಹೆಚ್ಚಿನ ಜನರಿಗೆ ರೂಢಿಯಾಗಿದೆ. ಆದ್ರೆ ನೀವು ಎಂದಾದ್ರೂ ಆಲೂಗಡ್ಡೆ ಸಮೋಸ ಹೇಗೆ ತಯಾರಿ ಮಾಡುತ್ತಾರೆ ಅನ್ನೋದರ ಬಗ್ಗೆ ಯೋಚನೆ ಮಾಡಿದ್ದೀರಾ..?ನಾವು ತೋರಿಸುವ ಈ ವಿಡಿಯೋ ನೋಡಿದ್ರೆ ನಾಳೆಯಿಂದ ಸಮೋಸ ತಿನ್ನುವುದಕ್ಕೆ ಗುಡ್‌ಬೈ ಹೇಳಲುಬಹುದು ಅರೇ ಯಾಕೆ ಅಂತೀರಾ ಇಲ್ಲಿದೆ ನೋಡಿ ವಿಡಿಯೋ ಆಧಾರಿತ ಸ್ಟೋರಿ…

ಗಾಜಿಯಾಬಾದ್ ಹೋಟೆಲ್ ಉದ್ಯೋಗಿಯೊಬ್ಬರು ಚಪ್ಪಲಿ ಧರಿಸಿಕೊಂಡು ಕಾಲಿನಲ್ಲಿ ಆಲೂಗಡ್ಡೆಯ ಸಮೋಸ ತಯಾರಿಸೋದಕ್ಕೆ ತುಳಿಯುವುದನ್ನು ಕಾಣಬಹುದು. ನೀಲಿ ಟೀ ಶರ್ಟ್ ಮತ್ತು ಜೀನ್ಸ್ ಧರಿಸಿದ ವ್ಯಕ್ತಿಯೊಬ್ಬರು ದೊಡ್ಡ ಪಾತ್ರೆಯೊಳಗೆ ಕಾಲಿಟ್ಟು ಆಲೂಗಡ್ಡೆಯನ್ನು ತುಳಿಯುತ್ತಿದ್ದಾರೆ. ಆ ಪಾತ್ರೆಯ ಅರ್ಥದಷ್ಟು ದೊಡ್ಡ  ಚಪ್ಪಲಿಯನ್ನು ಹಾಕಿಕೊಂಡಿರುವುದನ್ನು ಕಾಣಿಸುತ್ತದೆ. ಆತ ಆಲೂಗಡ್ಡೆ ತುಂಬಿದ ಪಾತ್ರೆಯಲ್ಲಿ ನಿಂತಿದ್ದಾರೆ ಮತ್ತು ಅವುಗಳನ್ನು ಸಮೋಸ ತಯಾರಿಕೆಗಾಗಿ  ಪದೇ ಪದೇ ಕಾಲಿನ ಮೂಲಕ ತುಳಿಯುತ್ತಿದ್ದಾರೆ. ಯುವಕರ ಗುಂಪೊಂದು ಈ ವೀಡಿಯೊವನ್ನು ಚಿತ್ರೀಕರಿಸಿದೆ ಮತ್ತು ಅವರು ವೀಡಿಯೊದಲ್ಲಿ ಅಂಗಡಿಯ ಹೆಸರನ್ನು ಸೇರಿಸಲು ಪರಸ್ಪರ ಕೇಳಿಕೊಳ್ಳುವ ಮಾತನಾಡುವುದನ್ನು ಕೇಳಬಹುದು. ಅವರು  ಅಂಗಡಿಯ ಹೆಸರನ್ನು ಹಿಡಿಯಲು ಹೋಗುತ್ತಾರೆ ಆಗ ಅವರಿಗೆ ಕುಮಾರ್ ಸ್ವೀಟ್ಸ್ ಕಾರ್ನರ್ ಎಂದು ತಿಳಿದುಬಂದಿದೆ.  ಈ ವಿಡಿಯೋ ನೋಡಿದ ನಂತ್ರ ಯಾರೊಬ್ಬರು ಹೊರಗಡೆ ಸಿಗುವ ಬಿಸಿಬಿಸಿ ಸಮೋಸ ತಿನ್ನೋದಕ್ಕೂ ಹಿಂದೇಟು ಹಾಕುವುದಂತೂ ಗ್ಯಾರಂಟಿ