Home latest Gang Rape: ರಾಜ್ಯ ರಾಜಧಾನಿಯಲ್ಲಿ ಮತ್ತೆ ಗ್ಯಾಂಗ್‌ ರೇಪ್‌ | ಕೇರಳ ಯುವತಿ ಮೇಲೆ...

Gang Rape: ರಾಜ್ಯ ರಾಜಧಾನಿಯಲ್ಲಿ ಮತ್ತೆ ಗ್ಯಾಂಗ್‌ ರೇಪ್‌ | ಕೇರಳ ಯುವತಿ ಮೇಲೆ ರ್ಯಾಪಿಡೋ ಚಾಲಕ ಹಾಗೂ ಸ್ನೇಹಿತನಿಂದ ಸಾಮೂಹಿಕ ಅತ್ಯಾಚಾರ

Hindu neighbor gifts plot of land

Hindu neighbour gifts land to Muslim journalist

ಒಂಟಿ ಹೆಣ್ಣು ರೋಡಲ್ಲಿ ಸಿಕ್ಕರೆ ಸಾಕು ಬಲಿಪಶು ಗಳಂತೆ ವಿಕೃತ ಮೆರೆಯುವ ಮೂಲಕ ತಮ್ಮ ಪೌರುಷ ಪ್ರದರ್ಶನ ಮಾಡುವ ಪ್ರಕರಣಗಳೂ ಆಗಾಗ ವರದಿಯಾಗುತ್ತಲೆ ಇರುತ್ತವೆ.ಇದೆ ರೀತಿಯ ಪ್ರಕರಣವೊಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಬೈಕ್​ ಸವಾರ​ ಕುಡಿದ ಅಮಲಿನಲ್ಲಿದ್ದ ಯುವತಿಯನ್ನು ನೀಲಾದ್ರಿ ನಗರದಲ್ಲಿರುವ ತನ್ನ ಸ್ನೇಹಿತನ ರೂಮ್​ಗೆ ಕರೆದುಕೊಂಡು ಹೋಗಿ ಗ್ಯಾಂಗ್ ರೇಪ್ ದೌರ್ಜನ್ಯ ವೆಸಗಿ ಹೇಯ ಕೃತ್ಯ ಎಸಗಿ ವಿಕೃತ ಮೆರೆದ ಘಟನೆ ನಡೆದಿದೆ.

ರಾಜ್ಯ ರಾಜಧಾನಿಯಲ್ಲಿ (State Capital) ಗ್ಯಾಂಗ್​ ರೇಪ್​ (Gang Rape) ನಡೆದಿದ್ದು, ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದ ಬಳಿಯಲ್ಲೊಂದು ಪೈಶಾಚಿಕ ಕೃತ್ಯ ವರದಿಯಾಗಿದೆ. ಕೇರಳ (Kerala) ಮೂಲದ ಯುವತಿ ಮೇಲೆ ಇಬ್ಬರು ಯುವಕರು ಸಾಮೂಹಿಕ ಅತ್ಯಾಚಾರವೆಸಗಿ ದೌರ್ಜನ್ಯ ನಡೆಸಿದ್ದಾರೆ.

ನವೆಂಬರ್​ 25ರ ರಾತ್ರಿ ಈ ಘಟನೆ ನಡೆದಿದ್ದು, ಆದರೆ, ತಡವಾಗಿ ಮುನ್ನಲೆಗೆ ಬಂದಿದೆ. ಬಿಟಿಎಂ ಲೇಔಟ್​ನ ಸಂಸ್ಥೆಯೊಂದರಲ್ಲಿ ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯ ಮೇಲೆ ಗ್ಯಾಂಗ್‌ ರೇಪ್‌ ನಡೆದಿದ್ದು, ಶುಕ್ರವಾರ ರಾತ್ರಿ ಬಿಟಿಎಂ ಲೇಔಟ್ (BTM Layout) ನಿಂದ ನೀಲಾದ್ರಿ ನಗರಕ್ಕೆ ರ್ಯಾಪಿಡೋ ಬೈಕ್ ಬುಕ್ಕಿಂಗ್ ಮಾಡಿದ್ದಾರೆ.

ರ್ಯಾಪಿಡ್ ಬೈಕ್ (Rapido Bike) ಪಿಕ್ ಅಪ್ ವೇಳೆ ಯುವತಿ ಮದ್ಯಪಾನ ಮಾಡಿದ್ದಳು ಎನ್ನಲಾಗಿದೆ. ನೀಲಾದ್ರಿ ನಗರ ತಲುಪುವ ಹೊತ್ತಿಗೆ ಯುವತಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದಳು. ಇದನ್ನೇ ಬಂಡವಾಳ ಮಾಡಿಕೊಂಡು ಸಿಕ್ಕಿದ ಅವಕಾಶವನ್ನು ದುರುಪಯೋಗ ಮಾಡಿಕೊಂಡು,ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯನ್ನು ಡ್ರಾಪ್ ಪಾಯಿಂಟ್ ಗೆ ತಲುಪಿಸುವ ಬದಲಿಗೆ, ಸ್ನೇಹಿತನ ರೂಮ್​ಗೆ ಕರೆದೊಯ್ದಿದ್ದು ಮಾತ್ರವಲ್ಲದೇ, ಸ್ನೇಹಿತನ ಜೊತೆ ಸೇರಿ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ನಡೆದಿದೆ.

ಬೈಕ್​ ಸವಾರ​ ಕುಡಿದ ಅಮಲಿನಲ್ಲಿದ್ದ ಯುವತಿಯನ್ನು ನೀಲಾದ್ರಿ ನಗರದಲ್ಲಿರುವ ತನ್ನ ಸ್ನೇಹಿತನ ರೂಮ್​ಗೆ ಕರೆದುಕೊಂಡು ಹೋಗಿ ಗ್ಯಾಂಗ್ ರೇಪ್ ಮಾಡಿದ್ದು, ರ್ಯಾಪಿಡೋ ಬೈಕ್ ಸವಾರ ಮತ್ತು ಸ್ನೇಹಿತರಿಬ್ಬರು ಈ ಕೃತ್ಯಕ್ಕೆ ಸಾಥ್ ನೀಡಿದ್ದಾರೆ.ಈ ವೇಳೆ ಯುವತಿಯನ್ನು ಬೈಕ್ ಮೇಲೆ ಕೂರಿಸಿಕೊಂಡ ಯುವಕ ಸ್ನೇಹಿತನ ರೂಮ್ ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದು, ಇಬ್ಬರು ಯುವಕರ ಕೃತ್ಯಕ್ಕೆ ಓರ್ವ ಯುವತಿ ಕೂಡ ಸಾಥ್ ನೀಡಿದ್ದಾಳೆ ಎನ್ನಲಾಗಿದೆ.

ಪ್ರಜ್ಞೆ ಬಂದ ಬಳಿಕ ಯುವತಿಗೆ ವಿಷಯ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಘಟನೆಯ ಬಳಿಕ ಯುವತಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ, ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಕುರಿತಾಗಿ, ಮೂವರನ್ನು ಬಂಧನ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾಹಿತಿ ನೀಡಿದ್ದಾರೆ.