Home Interesting Elon Musk: ಎಲಾನ್ ಮಸ್ಕ್ ಮೇಲೆ ಕೇಸ್ ಜಡಿದ ಟ್ವಿಟರ್ ಮಾಜಿ ಸಿಬ್ಬಂದಿ

Elon Musk: ಎಲಾನ್ ಮಸ್ಕ್ ಮೇಲೆ ಕೇಸ್ ಜಡಿದ ಟ್ವಿಟರ್ ಮಾಜಿ ಸಿಬ್ಬಂದಿ

Elon Musk

Hindu neighbor gifts plot of land

Hindu neighbour gifts land to Muslim journalist

ಟ್ವಿಟರ್‌ನ ಪದಚ್ಯುತ ಸಿಇಒ ಪರಾಗ್ ಅಗರ್ವಾಲ್ ಸೇರಿದಂತೆ, ಆ ಕಂಪನಿಯ ಮಾಜಿ ಉನ್ನತಾಧಿಕಾರಿಗಳು ಎಲಾನ್ ಮಸ್ಕ್ ವಿರುದ್ಧ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ತಮ್ಮನ್ನು ದಿಢೀರ್ ಕೆಲಸದಿಂದ ಪದಚ್ಯುತಗೊಳಿಸಿದಾಗ ನೀಡಬೇಕಿದ್ದ ಸುಮಾರು 128 ಬಿಲಿಯನ್ ಡಾಲರ್ (ಸಾವಿರ ಕೋಟಿ ರೂ.ಗೂ ಹೆಚ್ಚು) ಪರಿಹಾರ ಪ್ಯಾಕೇಜ್ ಅನ್ನು ಎಲಾನ್ ಮಸ್ಕ್ ನೀಡಿಲ್ಲ. ಆ ಮೂಲಕ ನಮ್ಮನ್ನು ವಂಚಿಸಿದ್ದಾರೆ ಎಂದು ಮಾಜಿ ಸಿಇಒ ಪರಾಗ್ ಅಗರರ್ವಾಲ್, ಮಾಜಿ ಸಿಎಫ್ ಒ ನೆಡ್ ಸೆಗಲ್, ಮಾಜಿ ಸಿಎಲ್‌ಒ ವಿಜಯಾ ಗದ್ದೆ ಮತ್ತಿತರರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ: Political News: ಭಾರತ ಒಂದು ರಾಷ್ಟ್ರವಲ್ಲ : ಡಿಎಂಕೆ ಸಂಸದ ಎ. ರಾಜಾ ರಾಷ್ಟ್ರವಿರೋಧಿ ಹೇಳಿಕೆ : ಬಂಧನಕ್ಕೆ ಬಿಜೆಪಿ ಆಗ್ರಹ

ಟ್ವಿಟರ್ ಅನ್ನು 2022ರ ಅಕ್ಟೋಬರ್ ನಲ್ಲಿ ಖರೀದಿ ಮಾಡಿದ್ದ ಎಲಾನ್ ಮಸ್ಕ್, ಅದರ ಲೋಗೋ, ಹೆಸರು, ಆಡಳಿತ ವ್ಯವಸ್ಥೆ, ಸಿಬ್ಬಂದಿ ಸೇರಿದಂತೆ ಎಲ್ಲವನ್ನೂ ಬದಲಿಸಿದ್ದರು. ಖರೀದಿಸಿದ ಕೂಡಲೇ ಭಾರತೀಯ ಮೂಲದ ಸಿಇಒ ಪರಾಗ್ ಅಗರ್ವಾಲ್ ಸೇರಿದಂತೆ ಉನ್ನತಾಧಿ ಕಾರಿಗಳನ್ನು ವಜಾ ಮಾಡಿದ್ದರು.

ಈ ಅಧಿಕಾರಿಗಳೂ ಸೇರಿದಂತೆ ಟ್ವಿಟರ್ ನ ಶೇ.60ಕ್ಕೂ ಅಧಿಕ ಸಿಬ್ಬಂದಿಯನ್ನು ಮನೆಗೆ ಕಳಿಸಿದ್ದರು.