Home Interesting ಮದುವೆಯಾದ 15 ದಿನದಲ್ಲೇ ಭೀಕರ ಅಪಘಾತಕ್ಕೆ ಸಾವು ಕಂಡ ಗಂಡ | ಸ್ಟ್ರೆಚರ್‌ನಲ್ಲೇ ಗಂಡನ ಶವ...

ಮದುವೆಯಾದ 15 ದಿನದಲ್ಲೇ ಭೀಕರ ಅಪಘಾತಕ್ಕೆ ಸಾವು ಕಂಡ ಗಂಡ | ಸ್ಟ್ರೆಚರ್‌ನಲ್ಲೇ ಗಂಡನ ಶವ ನೋಡಿ ಅತ್ತ ಮುದ್ದಿನ ಹೆಂಡತಿ | ವಿಧಿಯಾಟಕ್ಕೆ ಕರುಣೆ ಇಲ್ಲ

Hindu neighbor gifts plot of land

Hindu neighbour gifts land to Muslim journalist

ಮದುವೆ ಎಂಬ ಸುಂದರ ಬಂಧಕ್ಕೆ ಮುನ್ನುಡಿ ಬರೆದು ಹಸಮಣೆ ಏರಿ ಭವಿಷ್ಯದ ಬಗ್ಗೆ ನೂರಾರು ಕನಸು ಹೊತ್ತ ನೂತನ ಜೋಡಿಯ ಬಾಳಿಗೆ ವಿಧಿಯ  ಭೀಕರತೆಗೆ ತುತ್ತಾಗಿ ಸಾವಿನ ದವಡೆಗೆ ಸಿಲುಕಿದ  ಘಟನೆ ಬೆಳಕಿಗೆ ಬಂದಿದೆ.


ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಜಿಗಳಿ ಗ್ರಾಮದ ಮಠದ ರಾಜಯ್ಯ ಹಾಗೂ ಶೋಭಾ ದಂಪತಿ ಪುತ್ರ ಸಂಜಯ್ (28) ಹಾಗೂ ಬೈಲಹೊಂಗಲದ ಪ್ರೀತಿ ನ. 28 ರಂದು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಸಮುದಾಯ ಭವನದಲ್ಲಿ ಇಬ್ಬರು ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದಾರೆ. ಆದರೆ ವಿಧಿ ಲಿಖಿತವೇ ಬೇರೆ ಇದ್ದರೆ ಯಾರೇನು ಮಾಡಲು ಸಾಧ್ಯ?? ಹನಿಮೂನ್ ಗೆಂದು ನವ ಜೋಡಿಗಳಿಬ್ಬರು  ಧಾರ್ಮಿಕ ಕ್ಷೇತ್ರಗಳಿಗೆ ಹೋಗಿ ದೇವರ ದರ್ಶನ ಪಡೆದು ಎರಡು ದಿನ ಟ್ರಿಪ್ ಮುಗಿಸಿ ಹಿಂದಿರುಗುವ ವೇಳೆಗೆ  ಅಪಘಾತ ಸಂಭವಿಸಿದ್ದು, ಈ ಸಂದರ್ಭ ಸಂಜಯ್ ಮೃತ ಪಟ್ಟಿದ್ದಾರೆ.

ದಾವಣಗೆರೆಯ ನವ ವಿವಾಹಿತ ಜೋಡಿಗಳಿಗೆ  ಮದುವೆಯಾಗಿ ಕೇವಲ ಹತ್ತು ದಿನಗಳಾಗಿತ್ತಷ್ಟೆ.  ಕಲ್ಯಾಣ ಮಂಟಪದಲ್ಲಿ ಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಿಂದ,  ಮದುವೆಯಾಗಿ, ಎಲ್ಲರ ಆಶೀರ್ವಾದ ಪಡೆದು, ಹನಿಮೂನ್ ಗೆ ಹೋಗಿದ್ದ ವರನನ್ನು ಕ್ರೂರ ವಿಧಿ  ಟೆಕ್ಕಿಯೊಬ್ಬರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡು ಬಿಟ್ಟಿದೆ.

ವಿವಾಹಿತ ರಿಬ್ಬರು ಕೂಡ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ಹನಿಮೂನ್ ಗೆಂದು  ಹೋದ ಸಂದರ್ಭ ಧಾರ್ಮಿಕ ಕ್ಷೇತ್ರಗಳಿಗೂ ಕೂಡ ತೆರಳಿ ದೇವರ ದರ್ಶನ ಪಡೆದು ಎರಡು ದಿನ ಟ್ರಿಪ್ ಮುಗಿಸಿ ಊರಿಗೆ ಹಿಂದಿರುಗುವಾಗ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಪತಿ ಸಂಜಯ್ ಮೃತಪಟ್ಟಿದ್ದು, ಪತ್ನಿ ಪ್ರೀತಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ.

ಸಂಜಯ್ ಇಬ್ಬರು ಡಿ.10ಕ್ಕೆ ಹರಿಹರದ ಜಿಗಳಿಯಿಂದ ಬೈಕ್ ನಲ್ಲಿ ಹನಿಮೂನ್ ಗೆ ಹೊರಟಿದ್ದು, ಮೊದಲು ಸಾಗರ ತಾಲೂಕಿನ ಸಿಂಗಧೂರು ದೇವಿ ದರ್ಶನ ಪಡೆದಿದ್ದಾರೆ. ಬಳಿಕ ಮುರುಡೇಶ್ವರಕ್ಕೆ ಹೋಗಿ ರಾತ್ರಿ ತಂಗಿದ್ದಾರೆ.ಡಿ.11ಕ್ಕೆ ಶಿರಸಿಗೆ ಬಂದು ಅಲ್ಲಿ ಮಾರಿಕಾಂಬ ದೇವಿ ದರ್ಶನ ಪಡೆದು ವಾಪಸ್ ಜಿಗಳಿ ಎಂಬಲ್ಲಿಗೆ ತೆರಳುವ ಸಂದರ್ಭ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡದ ಬಳಿ ಬರುವಾಗ ನಿಂತಿದ್ದ ಕಬ್ಬಿನ ಟ್ರ್ಯಾಕ್ಟರ್ ಗೆ ದಂಪತಿ ಪ್ರಯಾಣಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ.

ಈ ವೇಳೆ  ನೆಲಕ್ಕೆ ಬಿದ್ದ ಸಂಜಯ್ ತಲೆಗೆ ತೀವ್ರ ಪೆಟ್ಟಾಗಿದ್ದು ಜೊತೆಗೆ  ಎರಡೂ ಕಿವಿಯಲ್ಲಿ ರಕ್ತಸ್ರಾವವಾಗಿದೆ. ಬೈಕ್ ನ ಹಿಂಬದಿಯಲ್ಲಿದ್ದ ಪ್ರೀತಿಗೂ ತೀವ್ರ ತರಹದ ಗಾಯಗಳಾಗಿದೆ. ಮದುವೆಯಾದ ಹದಿನೈದು ದಿನದಲ್ಲಿಯೇ ಪ್ರೀತಿಯ ಪತಿ ಸಂಜಯ್ ನನ್ನು ಜವರಾಯ ಕರೆಸಿಕೊಂಡಿದ್ದು, ಪ್ರೀತಿ ಈಗ ಒಬ್ಬಂಟಿ ಜೀವನ ನಡೆಸಬೇಕಾಗಿದೆ.


 
ಈ ಘಟನೆ ತತಿಳಿಯುತ್ತಿದ್ದಂತೆ  ಸಮೀಪದ ಹಂಸಬಾವಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂಜಯ್ ಮತ್ತು ಪ್ರೀತಿಯರನ್ನು ರಾಣೆಬೆನ್ನೂರು ಆಸ್ಪತ್ರೆಗೆ ರವಾನಿಸಿದ್ದಾರೆ.  ಅದರೆ ಹೆಚ್ಚಿನ ಚಿಕಿತ್ಸೆಗಾಗಿ, ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ಕರೆದುಕೊಂಡು ಬರುವ ವೇಳೆ ದಾರಿ ಮಧ್ಯೆ ಸಂಜಯ್ ಮೃತಪಟ್ಟಿದ್ದಾರೆ.

ಪತ್ನಿ ಪ್ರೀತಿ ಎರಡೂ ಕೈ ಹಾಗೂ ತಲೆಗೆ ಮತ್ತು ಸೊಂಟಕ್ಕೆ ತೀವ್ರ ಪೆಟ್ಟಾಗಿದೆ‌. ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎನ್ನಲಾಗಿದ್ದು, ಸದ್ಯ ದಾವಣಗೆರೆ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‌. ಸಂಜಯ್ ಶವ ಪರೀಕ್ಷೆ ನಂತರ ತನ್ನ ಗಂಡ ಸಂಜಯ್ ನೋಡಲು ಪ್ರೀತಿ ಸ್ಟ್ರೆಚರ್ನಲ್ಲಿ ಶವಾಗಾರಕ್ಕೆ ಬಂದಿದ್ದು, . ಬಳಿಕ ಸ್ಟ್ರೆಚರ್ ನಲ್ಲಿದ್ದುಕೊಂಡೇ ತನ್ನ ಗಂಡನ ಮುಖ ಸವರಿ ದುಃಖಿಸಿದ ಕ್ಷಣ ಅಲ್ಲಿದ್ದವರ ಮನಕಲಕುವಂತಿತ್ತು.

ಜೀವನದ ಸುಂದರ ಕ್ಷಣಗಳನ್ನು ಜೊತೆಯಾಗಿ ಸವಿಯಬೇಕಿದ್ದ ಜೋಡಿ ವಿಧಿಯಾಟಕ್ಕೆ ಬಲಿಯಾಗಿದೆ. ಸಂಜಯ್ ತಂದೆ ರಾಜಯ್ಯ ಚಿಕ್ಕಪ್ಪ ಬಸವರಾಜಯ್ಯ ಹಾಗೂ ಪ್ರೀತಿ ತಂದೆ ತಾಯಿ ಹಾಗೂ ಸಹೋದರರು ಇಡೀ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.

ಸಂಜಯ್ ಶವವನ್ನು ಜಿಗಳಿ ತಂದಾಗ ಇಡೀ ಗ್ರಾಮದಲ್ಲಿ ನೀರವ ಮೌನ ಹಬ್ಬಿತ್ತು.  ಹದಿನೈದು ದಿನದ ಕಳೆಗೆ ಇಬ್ಬರನ್ನು ಆರ್ಶೀವದಿಸಿ ಪೋಟೋ ತೆಗೆಸಿಕೊಂಡವರೆಲ್ಲ ಕಂಬನಿ ಮಿಡಿದಿದ್ದಾರೆ.

ನೂರಾರು ಕನಸು ಹೊತ್ತಿದ್ದ ನವ ಜೋಡಿ ನೂತನ ಸಂಸಾರಕ್ಕೆ ಅಣಿ ಇಡಲು ಸಂಜಯ್ ಚಿಕ್ಕಪ್ಪ ಬಸವರಾಜಯ್ಯ ಬೆಂಗಳೂರಿನಲ್ಲಿ ಮನೆ ನೋಡಿದ್ದರು ಎನ್ನಲಾಗಿದೆ.  ಇದೇ ಡಿ.12 ಕ್ಕೆ ಇಬ್ಬರು ಸೇರಿ ಹಾಲು ಉಕ್ಕಿಸಿ ಸಂಸಾರದ ಬಂಡಿ ಸಾಗಬೇಕೆನ್ನುವಷ್ಟರಲ್ಲಿ ನವ ವಿವಾಹಿತ ಸಂಜಯ್ ಕಾಲದ ಕರೆಗೆ ಓಗೊಟ್ಟು ಇಹಲೋಕದ ಯಾತ್ರೆ ಮುಗಿಸಿದ್ದಾರೆ.