Home News ಬಾಲಕ ಸುಮಂತ್‌ ಕೊಲೆ ಪ್ರಕರಣ; ಕೆರೆಯಲ್ಲಿ ಕತ್ತಿ, ಟಾರ್ಚ್‌ ಪತ್ತೆ

ಬಾಲಕ ಸುಮಂತ್‌ ಕೊಲೆ ಪ್ರಕರಣ; ಕೆರೆಯಲ್ಲಿ ಕತ್ತಿ, ಟಾರ್ಚ್‌ ಪತ್ತೆ

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ: ಓಡಿಲ್ನಾಳ ಗ್ರಾಮದ ಸಂಬೋಳ್ಯದ ಬಾಲಕ ಸುಮಂತ್‌ ಶವ ಕೆರೆಯಲ್ಲಿ ಪತ್ತೆಯಾಗಿದ್ದು, ಕತ್ತಿ ಮತ್ತು ಟಾರ್ಚ್‌ ಲೈಟ್‌ ಪತ್ತೆಯಾಗಿದೆ ಎಂದು ತಿಳಿದು ಬಂದಿರುವ ಕುರಿತು ವರದಿಯಾಗಿದೆ. ಸುಮಂತ್‌ ಸಾವಿನ ಕುರಿತು ಪ್ರಾಥಮಿಕ ವರದಿ ಬಂದಿದ್ದು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಜ.14 ರಂದು ಬೆಳ್ತಂಗಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಓಡಿಲ್ನಾಳ ಗ್ರಾಮದ ಸಂಬೋಳ್ಯದ ಪ್ರಕರಣದಲ್ಲಿ ಮೃತ ಸುಮಂತ್‌ (15) ಬಾಲಕನ ಶವಪರೀಕ್ಷೆಯ ನಂತರ ಪ್ರಾಥಮಿಕ ವರದಿಯ ಪ್ರಕಾರ ಹುಡುಗನು ಕೆರೆಯಲ್ಲಿ ಮುಳುಗುವ ಸಮಯದಲ್ಲಿ ಜೀವಂತವಾಗಿದ್ದ ಮತ್ತು ತಕ್ಷಣದ ಸಾವಿನ ಕಾರಣ ಮುಳುಗು ಸಾವಾಗಿರುತ್ತದೆ ಎಂದು ಪೊಲೀಸ್‌ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು.

ತಲೆಯ ಮೇಲೆ ಗಾಯಗಳು ಉಂಟಾಗಿದ್ದು, ಯಾವುದೇ ಚೂಪಾದ ಆಯುಧದಿಂದ ಆಗಿರುವ ಗಾಯ ಅಲ್ಲ ಎಂದು ತಿಳಿದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿರುತ್ತದೆ. ತಲೆಯ ಮೇಲೆ ಉಂಟಾದ ಗಾಯದ ಕುರಿತು ವಿವರಣೆ ದೊರೆತಿಲ್ಲ.

ಈ ಪ್ರಕರಣದ ಕುರಿತು ಬೆಳ್ತಂಗಡಿ ಡಿಎಸ್‌ಪಿ ಅವರ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್‌ ಇಲಾಖೆ ಈಗಾಗಲೇ ಹೇಳಿತ್ತು. ಇದರ ಮುಂದುವರಿದ ಭಾಗವಾಗಿ ಕೆರೆಯ ನೀರನ್ನು ಖಾಲಿ ಮಾಡಿ ಪರಿಶೀಲನೆ ಮಾಡಿದಾಗ ಕತ್ತಿ ಮತ್ತು ಟಾರ್ಚ್‌ ಲೈಟ್‌ ದೊರೆತಿದೆ ಎಂದು ವರದಿಯಾಗಿದೆ.