Home News ಕಾರ್ ಶೆಡ್ನಲ್ಲಿ ಗೃಹಿಣಿಯ ಶವ ಪತ್ತೆ| ಸಾಯುವ ಮುನ್ನ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ |...

ಕಾರ್ ಶೆಡ್ನಲ್ಲಿ ಗೃಹಿಣಿಯ ಶವ ಪತ್ತೆ| ಸಾಯುವ ಮುನ್ನ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ | ಆಕೆಯ ಸಾವಿನ ಹಿಂದಿನ ರಹಸ್ಯವೇನು?

Hindu neighbor gifts plot of land

Hindu neighbour gifts land to Muslim journalist

ಶಿವಮೊಗ್ಗದ ಅಶ್ವಥ್​​ ನಗರದಲ್ಲಿ ಆರು ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಗೃಹಿಣಿಯೊಬ್ಬಳು ಸಾವನ್ನಪ್ಪಿದ್ದಾರೆ. ಈ ಪ್ರಕರಣ ಇದೀಗ ಸಾಕಷ್ಟು ಗಂಭೀರವಾಗುತ್ತಿದೆ. ಕಾರಣ, ಖುಷಿಯಾಗಿಯೇ ಜೀವನ ನಡೆಸುತ್ತಿದ್ದಂತಹ ಗೃಹಿಣಿ ಇದ್ದಕಿದ್ದಂತೆ ಸಾವನ್ನಪ್ಪಿರುವುದು ಪ್ರಶ್ನೆಯಾಗಿದೆ. ಅದಷ್ಟೇ ಅಲ್ಲದೆ, ಗೃಹಿಣಿಯ ಸಾವಿಗಿಂತ ಮೊದಲು ಆಕೆಯ ನಡವಳಿಕೆಗಳು ಅನುಮಾನಾಸ್ಪದವಾಗಿತ್ತು. ಹಾಗಾದರೆ ನಿಜವಾಗಿಯೂ ನಡೆದಿದ್ದಾದರೂ ಏನು ಎಂದು ನೋಡೋಣ.

23 ವರ್ಷದ ನವ್ಯಶ್ರೀ ಮೃತಪಟ್ಟಿರುವ ಗೃಹಿಣಿ ತಮ್ಮ ವಿದ್ಯಾಭ್ಯಾಸವನ್ನು ಎಂಇಎಸ್ ನಲ್ಲಿ ಮುಗಿಸಿದ್ದಾರೆ. ಓದು ಮುಕ್ತಾಯವಾದ ನಂತರ ಆಕೆಯನ್ನು ದೊಡ್ಡಕುಟುಂಬವೊಂದಕ್ಕೆ ಮದುವೆ ಮಾಡಿಕೊಟ್ಟಿದ್ದಾರೆ. ಆಕೆ ತನ್ನ ಗಂಡನ ಮನೆಯಲ್ಲಿ ಖುಷಿಯಾಗಿಯೇ ಇದ್ದರು. ಹಾಗೇ ಕಳೆದ ಆರು ತಿಂಗಳಿನಿಂದ ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದರು. ಅಷ್ಟೇ ಅಲ್ಲದೆ, ತುಳಸಿ ಪೂಜೆಯ ದಿನ ತುಳಸಿ ಪೂಜೆಯನ್ನು ಮಾಡಿದ್ದ ನವ್ಯಶ್ರೀ ಅಕ್ಕಪಕ್ಕದ ಮನೆಗೆ ಅರಶಿನ ಕುಂಕುಮಕ್ಕೂ ಹೋಗಿಬಂದಿದ್ಧಾರೆ. ಆನಂತರ ಇನ್​ಸ್ಟಾಗ್ರಾಂನಲ್ಲಿ ರೀಲ್ಸ್​ವೊಂದನ್ನು ಪೋಸ್ಟ್​ ಮಾಡಿದ್ದಾರೆ.

ಹೀಗೆ ನವ್ಯಶ್ರಿಗೆ ರೀಲ್ಸ್ ಮಾಡುವುದು ಹವ್ಯಾಸವಾಗಿ ಬಿಟ್ಟಿದೆ. ತಾನು ಮಾಡಿದ್ದ ಒಂದು ರೀಲ್ಸ್​ನಲ್ಲಿ ಆಕೆ ಕಣ್ತುಂಬಿಕೊಂಡಿದ್ದಾಳೆ. ಇದನ್ನು ನೋಡಿದ ಆಕೆಯ ಸಹೋದರ ಏನಾಯ್ತು ಎಂದು ವಿಚಾರಿಸಲು ಕರೆ ಮಾಡಿದ್ದಾನೆ. ಆದರೆ, ನವ್ಯ ಫೋನ್ ಪಿಕ್ ಮಾಡಿರಲಿಲ್ಲವಂತೆ. ಹೀಗಾಗಿ ಇವತ್ತು ಆಕೆಯ ಪೋಷಕರು ಚಿಕ್ಕಮಗಳೂರಿನಿಂದ ಬಂದಿದ್ದಾರೆ. ಈ ವೇಳೆ ಕಾರ್​ಶೆಡ್​ನಲ್ಲಿ ನವ್ಯಶ್ರೀಯ ಶವ ಕಂಡು ದಂಗಾಗಿದ್ದಾರೆ. ನಂತರ ಪೋಲಿಸರಿಗೆ ಕರೆ ಮಾಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.