Home Interesting BMW Vision DEE : ವ್ಹಾವ್, ಬಣ್ಣ ಬದಲಾಯಿಸೋ, ಮಾತನಾಡೋ ಕಾರು | ಯಾವ ಕಂಪನಿದ್ದು...

BMW Vision DEE : ವ್ಹಾವ್, ಬಣ್ಣ ಬದಲಾಯಿಸೋ, ಮಾತನಾಡೋ ಕಾರು | ಯಾವ ಕಂಪನಿದ್ದು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

ಸಾಮಾನ್ಯವಾಗಿ ಭೂಲೋಕದಲ್ಲಿ ಮಾತನಾಡುವ ಜೀವಿ ಯಾವುದಪ್ಪಾ ಅಂದ್ರೆ ಮನುಷ್ಯನ ಕಡೆ ಬೆರಳು ಮಾಡಿ ತೋರಿಸ್ತಿವಿ. ಆದರೆ, ಆಯಾಯ ಪ್ರಾಣಿ-ಪಕ್ಷಿಗಳು ಅದರದ್ದೇ ಆದ ಭಾಷೆಗಳಲ್ಲಿ ಮಾತಾಡ್ಕೋತಾವೆ ನಮಗೆ ಅರ್ಥ ಆಗೋಲ್ಲ ಅಷ್ಟೇ. ಕಾರ್ಟೂನ್ ಚಿತ್ರಗಳಲ್ಲಿ ನೀವು ವಾಹನಗಳು ಮಾತನಾಡುವುದನ್ನು ನೋಡಿದ್ದೀರಿ. ಅದೊಂದು ಕಲ್ಪನಾ ಲೋಕವಾಗಿದ್ದೂ, ನಿರ್ಜೀವಿ ವಸ್ತುಗಳು ಮಾತನಾಡುತ್ತವೆ. ಆದರೆ ಇನ್ನೂ ಕೆಲವೇ ವರ್ಷಗಳಲ್ಲಿ ಇಂತಹದೊಂದು ಕಾನ್ಸೆಪ್ಟ್ ವಾಸ್ತವ ಜಗತ್ತಿಗೂ ಬರಲಿದೆ!!

ಹೌದು, ಪ್ರಯಾಣಿಕರ ಜೊತೆ ಪ್ರಯಾಣದುದ್ದಕ್ಕೂ ಸಂಭಾಷಣೆ ಮಾಡುತ್ತಾ, ಮಧ್ಯೆ ತಲೆ ಹರಟೆ ಮಾಡುತ್ತಾ, ಐಡಿಯಾಗಳನ್ನು ಕೊಡುತ್ತಾ ಹೋಗುವುದನ್ನು ನೋಡುವುದು ಒಂಥರಾ ಖುಷಿ. ಇಂಥದ್ದೊಂದು ಕಾನ್ಸೆಪ್ಟ್’ನ ಕಾರೊಂದನ್ನು ಜರ್ಮನಿ ಮೂಲದ ಕಾರು ತಯಾರಕ ಕಂಪನಿ ಬಿಎಂಡಬ್ಲ್ಯು ತಯಾರಿಸಿ ರಸ್ತೆಗಿಳಿಸಲಿದೆ. ಇದು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಎಲೆಕ್ಟ್ರಿಕ್ ಸಬ್ಜೆಕ್ಟ್ ಕಾರಾಗಿದ್ದು, ವರ್ಚುಯಲ್ ಲೋಕ ಪ್ರಯಾಣಕ್ಕೆ ಕೊಂಡೊಯ್ಯಲಿದೆ. ಕಾರಿನಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಟೆಕ್ನಾಲಜಿ ಇರಲಿದ್ದು, ಪ್ರಯಾಣದ ಅವಧಿಯಲ್ಲಿ ತನಗೆ ತೋಚಿದನ್ನು ಹೇಳುತ್ತದೆ.

ಕಾರು ಕೇವಲ ಪಟ ಪಟ ಅಂತಾ ಮಾತನಾಡುವುದಲ್ಲದೆ, ಪಕ್ಕಾ ಗೋಸುಂಬೆಯಂತೆ ವರ್ತಿಸಲಿದೆ. ಈ ಕಾರಿನಲ್ಲಿ ಬೇಕಾದ ಹಾಗೇ ಕಲರ್ ಚೇಂಜ್ ಮಾಡುವ ಮ್ಯಾಜಿಕ್ ಟೆಕ್ನಾಲಜಿ ಇದೆ. ಚಾಲಕನಿಗೆ ಒಂದಲ್ಲಾ ಎರಡಲ್ಲಾ ಬರೋಬ್ಬರಿ 32 ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಅಗತ್ಯಕ್ಕೆ ತಕ್ಕ ಹಾಗೆ, ತನ್ನ ಡ್ರೆಸ್ ಕಲರ್’ಗೆ ಮ್ಯಾಚಿಂಗ್ ಇರುವ ಹಾಗೆ ಕಾರು ಬಣ್ಣವನ್ನು ಬದಲಾಯಿಸಬಹುದು. ವಿಷನ್ ಡಿಇಇ ಕಾರಿನಲ್ಲಿ ಒಟ್ಟು 240 ಭಾಗಗಳಿದ್ದು, ಅವುಗಳ ಮೂಲಕ ಕಾರಿನ ಬಣ್ಣವನ್ನು ಬದಲಾಯಿಸುವ ತಾಂತ್ರಿಕತೆಯನ್ನು ನಿರ್ಮಿಸಲಾಗಿದೆ. ಕಾರಿನ ಬಾಡಿಯ ನಾನಾ ಭಾಗಗಳಲ್ಲಿ ಬಣ್ಣಗಳು ಬದಲಾಗಲಿದ್ದು, ಟಯರ್ ಕೂಡ ಬಣ್ಣವನ್ನು ಬದಲಿಸಿಕೊಳ್ಳಲಿದೆ.

ಕಾರಿನ ಹೆಡ್‌ಲೈಟ್ ಹಾಗೂ ಗ್ರಿಲ್‌ಗಳು ಚಾಲಕನ ಮುಖಭಾವಕ್ಕೆ ತಕ್ಕ ಹಾಗೆ ಹಾವಭಾವಗಳನ್ನು ವ್ಯಕ್ತಪಡಿಸಲಿದೆ ಎಂದು ಬಿಎಂಡಬ್ಲ್ಯು ಹೇಳಿದೆ. ವಿಷನ್ ಡಿಇಇ ಕಾರು ಪ್ರಯಾಣಿಕರನ್ನು ಸಂಪೂರ್ಣವಾಗಿ ಡಿಜಿಟಲ್ ಮಾಯಲೋಕಕ್ಕೆ ಕೊಂಡೊಯ್ಯಲಿದೆ. ವಿಂಡ್ ಶೀಲ್ಡ್ ಹಾಗೂ ಬದಿಯಲ್ಲಿರುವ ಗಾಜುಗಳು ಮಾಹಿತಿ ಹಾಗೂ ಮನೋರಂಜನೆಯ ಗಣಿಯಾಗಲಿದೆ. ಅಲ್ಲದೇ, ಮಾತಿಗೂ ಸ್ಪಂದನೆ ಕೊಡಲಿದೆ. ಈ ಕಾರಿನ ಹೆಡ್ ಅಪ್ ಡಿಸ್‌ಪ್ಲೇ, ವಿಂಡ್ ಶೀಲ್ಡ್‌ಗೆ ಪೂರ್ತಿಯಾಗಿ ಆವರಿಸಿಕೊಳ್ಳಲಿದೆ. ಈ ಕಾರಿನಲ್ಲಿ 27 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ಪಾಪ್ ಅಫ್ ಸ್ಟೀರಿಂಗ್ ವೀಲ್ ಇರುತ್ತದೆ.

ಇಂತಹದೊಂದು ಕಾನ್ಸೆಪ್ಟ್’ನಿಂದಾಗಿ ಸಿನಿಮಾದ ಕಲ್ಪನೆಗಳು ಸಾಕಾರಗೊಳ್ಳುವುದು ಖಚಿತ. ಕಲ್ಪನಾ ಲೋಕದಲ್ಲಿದ್ದ ಕಾರುಗಳನ್ನು ವಾಸ್ತವವಾಗಿ ಕಾಣಬಹುದು. ಆದರೆ, ಇಷ್ಟೆಲ್ಲ ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿರುವ ಈ ಕಾರು ರಸ್ತೆ ಮೇಲೆ ಇಳಿಯುವುದಕ್ಕೆ ಇನ್ನೆರಡು ವರ್ಷ ಕಾಯಬೇಕು. 2025ರಿಂದ ಕಾರಿನ ಉತ್ಪಾದನೆಯನ್ನು ಆರಂಭಿಸುತ್ತೇವೆ ಎಂದು ಕಂಪನಿಯು ತಿಳಿಸಿದೆ