Home latest Air Hostess : ಮಹಿಳೆಯರೇ ಏಕೆ ಗಗನಸಖಿಯಾಗಿ ಕೆಲಸ ಮಾಡುತ್ತಾರೆ ? ಇಂಟೆರೆಸ್ಟಿಂಗ್ ಉತ್ತರ ಇಲ್ಲಿದೆ!!!

Air Hostess : ಮಹಿಳೆಯರೇ ಏಕೆ ಗಗನಸಖಿಯಾಗಿ ಕೆಲಸ ಮಾಡುತ್ತಾರೆ ? ಇಂಟೆರೆಸ್ಟಿಂಗ್ ಉತ್ತರ ಇಲ್ಲಿದೆ!!!

Hindu neighbor gifts plot of land

Hindu neighbour gifts land to Muslim journalist

ಹೆಣ್ಣೆಂದರೆ ಆಕೆ ನಾಲ್ಕು ಗೋಡೆಗಷ್ಟೇ ಸೀಮಿತ ಎಂಬ ಕಾಲವೊಂದಿತ್ತು. ಆದರೆ ಇಂದು ಆಕೆ ಒಂದು ಶಕ್ತಿಯಾಗಿ ಹೊರಹೊಮ್ಮುತ್ತಿರುವ ಜೊತೆಗೆ ಎಲ್ಲ ಕ್ಷೇತದಲ್ಲೂ ಸಹ ತನ್ನದೇ ಛಾಪು ಮೂಡಿಸಿ, ತೊಟ್ಟಿಲ ತೂಗುವ ಕೈ ಜಗತ್ತನ್ನೇ ಆಳಬಹುದು ಎಂಬುದು ನಿರೂಪಿಸಿದ್ದು ಹಳೆಯ ವಿಚಾರ.

ಹೆಣ್ಣು ಮಕ್ಕಳಿಗಾಗಿಯೇ ಕೆಲವೊಂದು ವಿಭಾಗಗಳಲ್ಲಿ ಹೆಚ್ಚಿನ ಪ್ರಾಶಸ್ತ್ಯವಿದೆ. ವಿಮಾನಯಾನದಲ್ಲಿ ಏರ್‌ಹೋಸ್ಟೆಸ್ ಆಗಿ ಮಹಿಳೆಯರನ್ನೇ ನೇಮಿಸಲಾಗುತ್ತದೆ. ಮಹಿಳೆಯರ ಸೌಂದರ್ಯದ ಹೊರತಾಗಿ, ಈ ಉದ್ಯಮದಲ್ಲಿ ಮಹಿಳೆಯರಿಗೆ ಉದ್ಯೋಗಗಳಿಗಾಗಿ ಅವರನ್ನು ಹೆಚ್ಚು ಪರಿಪೂರ್ಣ ಆಯ್ಕೆಯನ್ನಾಗಿ ಮಾಡಿಕೊಳ್ಳುವ ಬೇರೆ ಕಾರಣಗಳು ಕೂಡ ಇವೆ ಎಂದರೆ ಅಚ್ಚರಿಯಾಗಬಹುದು.

ವಿಮಾನದಲ್ಲಿ ಪುರುಷರು (Men) ಮತ್ತು ಮಹಿಳೆಯರು (ಏರ್ ಹೋಸ್ಟೆಸ್) ಇಬ್ಬರನ್ನೂ ನೇಮಿಸಿಕೊಳ್ಳುವ ಪ್ರಕ್ರಿಯೆ ಇದ್ದರೂ ಕೂಡ ಮಹಿಳಾ ಸಿಬ್ಬಂದಿಗಳ ಸಂಖ್ಯೆಯೇ ಹೆಚ್ಚೆಂದರೆ ತಪ್ಪಾಗದು. ವಾಯುಯಾನ ವಲಯದಲ್ಲಿ ಹೆಚ್ಚಾಗಿ ಪುರುಷರನ್ನು ಏರ್‌ಹೋಸ್ಟೆಸ್ ಆಗಿ ಹೆಚ್ಚಾಗಿ ನೇಮಿಸಿಕೊಳ್ಳುವುದಿಲ್ಲ.

ಫ್ಲೈಟ್ ಅಟೆಂಡೆಂಟ್‌ಗಳಾಗಿ ಪುರುಷರನ್ನು ನೇಮಿಸಿಕೊಳ್ಳುವ ಕಂಪನಿಗಳು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಪುರುಷರನ್ನು ನೇಮಿಸುತ್ತಾರೆ.

ಉಳಿದಂತೆ ಹೆಚ್ಚಿನ ವಿಮಾನಗಳಲ್ಲಿ ಮಹಿಳೆಯರದ್ದೇ ಪಾರುಪತ್ಯ ಎಂದರೆ ಅತಿಶಯೋಕ್ತಿಯಾಗಲಾರದು. ಒಂದು ಅಂದಾಜಿನ ಪ್ರಕಾರ, ಕ್ಯಾಬಿನ್ ಸಿಬ್ಬಂದಿಗಳಲ್ಲಿ ಪುರುಷ ಮತ್ತು ಮಹಿಳಾ ಕ್ಯಾಬಿನ್ ಸಿಬ್ಬಂದಿಗಳ ಅನುಪಾತವು 2/20 ಆಗಿದೆ. ಕೆಲವು ವಿದೇಶಿ ವಿಮಾನಯಾನ ಸಂಸ್ಥೆಗಳಲ್ಲಿ ಈ ಅನುಪಾತವು 4/10 ರಷ್ಟಿದೆ. ಆತಿಥ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ಇದರ ಹಿಂದೆ ಹಲವು ಕಾರಣಗಳಿವೆ. ಹೆಚ್ಚಿನ ಮಹಿಳೆಯರು ಉತ್ತಮ ಸಂವಹನ ಕೌಶಲ್ಯ ಹೊಂದಿದ್ದು, ವಿಷಯವನ್ನು ಮತ್ತೊಬ್ಬರಿಗೆ ತಿಳಿಸುವ ರೀತಿ, ಸಹನೆ ಹಾಗೂ ಮಾತನಾಡುವ ವೈಖರಿಗೆ ಮರುಳಾಗಿ, ಅವರ ಮಾತುಗಳನ್ನು ಎಲ್ಲರೂ ಕಿವಿಗೊಟ್ಟು ಆಲಿಸುತ್ತಾರೆ. ಪ್ರಯಾಣಿಕರು (Passengers) ಮಹಿಳೆಯರು ವಿಮಾನದಲ್ಲಿ ಅಗತ್ಯ ಸೂಚನೆಗಳನ್ನು ತಿಳಿಸಿ, ಅನುಸರಿಸಲು ಸೂಚಿಸಿದಾಗ ಹೆಚ್ಚಿನ ಜನರು ಎಚ್ಚರಿಕೆಯಿಂದ ಆಲಿಸಿ ಪಾಲಿಸುತ್ತಾರೆ.

ವಿಮಾನದಲ್ಲಿ ಸೇವೆ ಮತ್ತು ಇತರ ನಿರ್ವಹಣೆಗೆ ಹೆಚ್ಚಿನ ಗಮನ ನೀಡಲಾಗುತ್ತದೆ. ಪುರುಷರಿಗಿಂತ ಮಹಿಳೆಯರು ಉತ್ತಮ ನಿರ್ವಹಣಾ ಕೌಶಲ್ಯವನ್ನು ಹೊಂದಿದ್ದು, ಸಹನೆಯ ಕಲೆಯು ಕರಗತವಾಗಿರುವುದರಿಂದ ಮಹಿಳೆಯರಿಗೆ ಎಲ್ಲದರ ಬಗ್ಗೆ ಉತ್ತಮ ತರಬೇತಿ (Training) ನೀಡಬಹುದು. ಪುರುಷರಿಗೆ ಮಹಿಳೆಯರಿಗಿಂತ ಕೋಪ ಜಾಸ್ತಿ ಇದ್ದು, ಕೇಳುವ ತಾಳ್ಮೆ ಕಡಿಮೆ ಇರುವುದರಿಂದ ಟ್ರೈನಿಂಗ್ ಕೊಡಲು ಮಹಿಳೆಯರಿಗೆ ಸುಲಭವಾಗಿದ್ದು, ಮಹಿಳೆಯರು ಎಂಥಹ ಕಠಿಣ ಪರಿಸ್ಥಿತಿ ಎದುರಾದರೂ ಸರಳವಾಗಿ ನಿಭಾಯಿಸಬಲ್ಲರು ಎಂಬ ಕಾರಣದಿಂದ ಮಹಿಳೆಯರನ್ನು ಹೆಚ್ಚು ನೇಮಿಸಲಾಗುತ್ತದೆ.

ಮಹಿಳೆಯರಷ್ಟು ಚೆನ್ನಾಗಿ ಆತಿಥ್ಯ ಮಾಡಲು ಪುರುಷರಿಂದ ಸಾಧ್ಯವಿಲ್ಲ . ಏರ್‌ ಹೋಸ್ಟೆಸ್ ಎಂದಾಗ ಅವರು ಮಾಡಬೇಕಾಗಿರುವ ಮುಖ್ಯವಾದ ಕೆಲಸ, ಪ್ರಯಾಣಿಕರ ಆತಿಥ್ಯ ವಹಿಸುವುದು, ಅವರ ಅವಶ್ಯಕತೆಗೆ ತಕ್ಕಂತೆ ಗಮನಿಸಿಕೊಳ್ಳುವುದು. ಹಾಗಾಗಿ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ.

ಗ್ಲಾಮರ್ ಇಂಡಸ್ಟ್ರಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಬ್ಯೂಟಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಗ್ಲಾಮರ್‌ ಅನ್ನು ಎಲ್ಲಾ ಕ್ಷೇತ್ರದಲ್ಲೂ ಉದಾರವಾಗಿ ಬಳಸಿಕೊಳ್ಳಲಾಗುತ್ತದೆ. ಇದೇ ಕಾರಣದಿಂದ ವಿಮಾನದಲ್ಲಿ ಏರ್‌ ಹೋಸ್ಟೆಸ್ ಆಗಿ ಮಹಿಳೆಯರನ್ನು ಆಯ್ಕೆ ಮಾಡಲಾಗುತ್ತದೆ.

ವಿಮಾನದ ಕ್ಯಾಬಿನ್ ಸಿಬ್ಬಂದಿಗೆ ಇದು ಅತ್ಯಗತ್ಯ ಗುಣಮಟ್ಟವೆಂದು ಪರಿಗಣಿಸಲಾಗಿದೆ. ಆತಿಥ್ಯ ಉದ್ಯಮದಲ್ಲಿ, ಗ್ಲಾಮರ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ.ಮಹಿಳೆಯರು ಅಬಲೆ ಎಂಬ ಚೌಕಟ್ಟನ್ನು ಮೀರಿ, ಸಾಧನೆಯ ಮಜಲನ್ನು ಏರಿ ಎಲ್ಲ ಕ್ಷೇತ್ರದಲ್ಲಿಯು ಕೂಡ ತನ್ನ ಪ್ರತಿಭೆ ಅನಾವರಣ ಮಾಡಿಕೊಂಡು ಬರುತ್ತಿದ್ದಾಳೆ.