Home Entertainment 70ರ ‘ಪ್ರಾಯ’ದ ಮಾವ ಮದುವೆ ಆದದ್ದು, ತನ್ನ 28ರ ಸೊಸೆಯನ್ನು! ಸಪ್ತಪದಿ ತುಳಿದ ನವ ದಂಪತಿಗಳೀಗ...

70ರ ‘ಪ್ರಾಯ’ದ ಮಾವ ಮದುವೆ ಆದದ್ದು, ತನ್ನ 28ರ ಸೊಸೆಯನ್ನು! ಸಪ್ತಪದಿ ತುಳಿದ ನವ ದಂಪತಿಗಳೀಗ ಎಲ್ಲೆಲ್ಲೂ ಫೇಮಸ್ಸೋ ಫೇಮಸ್ಸು!!

Hindu neighbor gifts plot of land

Hindu neighbour gifts land to Muslim journalist

ಪ್ರೀತಿಗೆ ಕಣ್ಣಿಲ್ಲ, ಅದು ಕುರುಡು ಎಂದು ಸಿನಿಮಾಗಳಲ್ಲಿ ಮಾತ್ರ ಹೇಳಲು ಚಂದ. ಅದನ್ನು ನಿಜ ಜೀವನದಲ್ಲಿ ಕಾರ್ಯರೂಪಕ್ಕೆ ತಂದ್ರೆ ಆಗಬಾರದ್ದು ಆಗುತ್ತೆ. ಅಲ್ಲದೆ ಆ ಪ್ರೀತಿ ಅಂಕೆ ಮೀರಿ, ಸಂಬಂಧಗಳನ್ನು ಮೀರಿ ನಡೆಯಬಾರದು. ಆದರೆ, ಈಗಂತೂ ಸಂಬಂಧಗಳಿಗೆ ಕಿಂಚಿತ್ತೂ ಬೆಲೆಯೇ ಇಲ್ಲದಂತಾಗಿದೆ. ಅಣ್ಣ ತಂಗಿಯನ್ನು ಮೋಹಿಸುವುದು, ಸ್ಕೂಲ್ ಮಾಸ್ಟರ್ ವಿದ್ಯಾರ್ಥಿನಿಗೇ ಲೆಟರ್ ಬರೆಯೋದು, ಮೈದುನ ಅತ್ತಿಗೆಯನ್ನೇ ಮದುವೆಯಾಗುವುದು ಹೀಗೆ ದಿನನಿತ್ಯ ಒಂದಲ್ಲ ಒಂದು ಪ್ರಕರಣಗಳನ್ನು ಗಮನಿಸ್ತೇವೆ. ಆದರೀಗ ಇಂತಹದೇ ಆದರೂ ವಿಚಿತ್ರವೆನ್ನುವಂತಹ ಪ್ರಕರಣವೊಂದು ಬೆಳಕಿಗೆ ಬಂದಿದ್ದು 70 ವರ್ಷದ ಮಾವ ತನ್ನ 28 ವರ್ಷದ ಸೊಸೆಯನ್ನು ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ.

ಹೌದು, ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯಲ್ಲಿ ನಡೆದ ಈ ವಿಶಿಷ್ಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 70 ವರ್ಷದ ಮಾವ ತನ್ನ 28 ವರ್ಷದ ಸೊಸೆಯನ್ನು ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ. ಈ ಇಬ್ಬರ ಮದುವೆಯ ಫೋಟೋಗಳೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವಿವಾಹವು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆದರೆ ಸದ್ಯ ಮುದುಕನನ್ನೇ ಮದುವೆಯಾದ ಸೊಸೆ ಸಪ್ತಪದಿ ತುಳಿದು, ತನ್ನ ತವರು ಮನೆಯಲ್ಲಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾಳೆ.

ತನ್ನ ಸೊಸೆಯನ್ನೇ ಮದುವೆಯಾದ ಈ 70ರ ‘ಪ್ರಾಯ’ದ ಮುದುಕನ್ನು ಕೈಲಾಸ್ ಯಾದವ್ ಎಂದು ಗುರುತಿಸಲಾಗಿದ್ದು, ಈತ ಬದಲ್‌ಗಂಜ್ ಪೊಲೀಸ್ ಠಾಣೆಯಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದಾನೆ. 12 ವರ್ಷಗಳ ಹಿಂದೆ ಈ ರಸಿಕ ಮುದಿಯನ ಹೆಂಡತಿ ಸಾವನ್ನಪ್ಪಿದ್ದಾಳೆ. ಕೈಲಾಶ್ ಅವರಿಗೆ ನಾಲ್ವರು ಮಕ್ಕಳಿದ್ದು, ಅದರಲ್ಲಿ ಮೂರನೇ ಮಗನ ಹೆಂಡತಿಯೇ ಪೂಜ. ಆದರೆ ಪೂಜಾ ಅವರ ಪತಿಯೂ ಸಾವನ್ನಪ್ಪಿದ್ದಾರೆ. ಇದಾದ ನಂತರ ಪೂಜಾ ಬೇರೆ ವ್ಯಕ್ತಿಯನ್ನು ಮದುವೆಯಾಗಿದ್ದರು. ಆದರೆ ಆಕೆಗೆ, ಆತ ಇಷ್ಟವಾಗಿರಲಿಲ್ಲ. ಇದಾದ ನಂತರ ಪೂಜಳು ಎರಡನೇ ಗಂಡನನ್ನೂ ಬಿಟ್ಟು, ಅಲ್ಲಿಂದ ಹೊರಟು ಕೈಲಾಶ್ ಮನೆಗೆ ಬಂದಿದ್ದಾಳೆ.

ಅಷ್ಟರಲ್ಲಿ ಮನೆಗೆ ಬಂದ ಸೊಸೆಯ ಮೇಲೆ ಮಾವನಿಗೆ ಪ್ರೀತಿಯಾಗಿದೆ ಎಂದು ಹೇಳಲಾಗುತ್ತಿದೆ. ನಡುವೆ ಪ್ರೇಮ ನಿವೇದನೆಯೂ ಆಗಿದೆ. ನಂತರ ಇಬ್ಬರೂ ವಯಸ್ಸು ಮತ್ತು ಸಮಾಜವನ್ನು ಲೆಕ್ಕಿಸದೆ ಮದುವೆಯಾಗಲು ನಿರ್ಧರಿಸಿದ್ದಾರೆ. ಈ ಮದುವೆ ಇಡೀ ಪ್ರದೇಶದಲ್ಲಿ ಚರ್ಚೆಯ ವಿಷಯವಾಗಿದೆ. ಮಾವ ಮತ್ತು ಸೊಸೆಯ ಮದುವೆಯ ಫೋಟೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಸುತ್ತಮುತ್ತಲಿನ ಜನರು ಒಂದೊಂದು ರೀತಿ ಮಾತನಾಡುತ್ತಿದ್ದಾರೆ. ನವ ದಂಪತಿಗೆ ಹಲವರು ಹೊಸ ಹೊಸ ರೀತಿಯಲ್ಲಿ ಕಮೆಂಟ್ ಹಾಕುತ್ತಿದ್ದಾರೆ. ಕೆಲವೊಮ್ಮೆ ಪ್ರೀತಿ ಕುರುಡೋ, ಪ್ರೀತಿ ಮಾಡುವವರು ಕುರುಡರೋ ಒಂದೂ ತಿಳಿಯದು.