Home latest “ಮುಕ್ತಿಕೊಡಿ” ಎಂದು ಮೈಮೇಲೆ ಬೆಂಕಿ ಹಚ್ಚಿ ಸಾವು ಕಂಡ ಯುವಕ | ಅಷ್ಟಕ್ಕೂ ಈತನ ನಡೆಗೆ...

“ಮುಕ್ತಿಕೊಡಿ” ಎಂದು ಮೈಮೇಲೆ ಬೆಂಕಿ ಹಚ್ಚಿ ಸಾವು ಕಂಡ ಯುವಕ | ಅಷ್ಟಕ್ಕೂ ಈತನ ನಡೆಗೆ ಕಾರಣವಾಗಿತ್ತು ಆ ಒಂದು ಸಿನಿಮಾ!!!

Hindu neighbor gifts plot of land

Hindu neighbour gifts land to Muslim journalist

ಸಿನಿಮಾದಿಂದ ಪ್ರೇರಿತರಾಗಿ ಕೆಲವು ಅಭಿಮಾನಿಗಳು ಏನೇನೋ ಮಾಡುತ್ತಾರೆ. ಕೆಲವರು ಒಳ್ಳೆಯ ಕೆಲಸ ಮಾಡಿದರೆ ಇನ್ನೂ ಕೆಲವರು ಅವಘಡ ಗಳನ್ನು ಮಾಡುತ್ತಾರೆ. ಇದೊಂದು ರೀತಿಯ ಅಭಿಮಾನದ ಪರಾಕಾಷ್ಠೆ ಎಂದೇ ಹೇಳಬಹುದು. ಈಗ ಇಂತಹುದೇ ಓರ್ವ ಅಭಿಮಾನಿಯೋರ್ವ ಮಾಡಿದ ಕೃತ್ಯದಿಂದ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ.

ತೆಲುಗು ಸಿನಿಮಾ ಅರುಂಧತಿ ನೋಡಿ ಯುವಕ ರೇಣುಕಾ ಪ್ರಸಾದ್ (22) ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧುಗಿರಿ ತಾಲೂಕಿನ ಕೊಂಡವಾಡಿ ಗ್ರಾಮದ ರಸ್ತೆ ಬದಿಯಲ್ಲಿ ನಡೆದಿದೆ.

ಇತ್ತೀಚೆಗೆ ಸಿನಿಮಾಗಳನ್ನೇ ಹೆಚ್ಚು ನೋಡ್ತಿದ್ದ ಈತ ಅರುಂಧತಿ ಸಿನಿಮಾದಲ್ಲಿ ನಟಿ ಬೆಂಕಿಗಾಹುತಿಯಾಗಿ ಮರುಜನ್ಮ ಪಡೆಯುವ ರೀತಿ ನೋಡಿ ತಾನೂ ಪ್ರೇರಿತನಾಗಿ, ತನಗೆ ತಾನೇ ಬೆಂಕಿ ಹಚ್ಚಿದ್ದಾನೆ. ಅರುಂಧತಿ ಸಿನಿಮಾದಲ್ಲಿ ದುಷ್ಟ ಶಕ್ತಿಯನ್ನು ನಾಶಗೊಳಿಸಲು ನಟಿ ಸಾವನ್ನಪ್ಪುವ ದೃಶ್ಯವಿದೆ. ಈ ದೃಶ್ಯಗಳನ್ನು ನೋಡಿದ ರೇಣುಕಾ ಪ್ರಸಾದ್ ತಾನೂ ಬೆಂಕಿಗೆ ಆಹುತಿಯಾಗಲು ಯತ್ನಿಸಿದ್ದ. ಬೆಂಕಿ ಹಚ್ಚಿಕೊಂಡು ಮುಕ್ತಿ ಕೊಡಿ ಮುಕ್ತಿ ಕೊಡಿ ಎಂದು ರೇಣುಕಾ ಪ್ರಸಾದ್ ಕಿರುಚಾಡಿಕೊಂಡಿದ್ದ. ಈ ವೇಳೆ ಇದನ್ನು ಕಂಡ ಸ್ಥಳೀಯರು ಬೆಂಕಿ ಹಾರಿಸಿ ಯುವಕನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಈ ದುಸ್ಸಾಹದ ಮಾಡಿದ ಯುವಕನ ತಂದೆ, ಅರುಂಧತಿ ಸಿನಿಮಾದಿಂದಲೇ ತಮ್ಮ ಮಗ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಹೇಳಿದ್ದಾರೆ. ಅರುಂಧತಿ ಸಿನಿಮಾ ನೋಡಬೇಡ ಎಂದು ಹೇಳಿದಾಗ, ಈ ವೇಳೆ ನನಗೆ ಮುಕ್ತಿ ಕೊಡಪ್ಪ ಎಂದು ನನ್ನ ಮಗ ಹೇಳಿದ್ದಾನೆ ಎಂದು ಯುವಕನ ತಂದೆ ಕಣ್ಣೀರು ಹಾಕುತ್ತಾ ಹೇಳಿದ್ದಾರೆ.