Home latest Ration Card Status check: ರೇಷನ್ ಕಾರ್ಡ್ ಅಲ್ಲಿ ಹೆಸರು ಸೇರಿಸೋದು, ತಿದ್ದುಪಡಿ ಮಾಡೋದು ಮಾಡಿದ್ದೀರಾ...

Ration Card Status check: ರೇಷನ್ ಕಾರ್ಡ್ ಅಲ್ಲಿ ಹೆಸರು ಸೇರಿಸೋದು, ತಿದ್ದುಪಡಿ ಮಾಡೋದು ಮಾಡಿದ್ದೀರಾ ?! ಹಾಗಿದ್ರೆ ಈ ಕೂಡಲೇ ಹೀಗ್ ಮಾಡಿ, ಸ್ಟೇಟಸ್ ಚೆಕ್ ಮಾಡಿ

Ration Card Status check

Hindu neighbor gifts plot of land

Hindu neighbour gifts land to Muslim journalist

Ration Card Status check: ಪಡಿತರ ಕಾರ್ಡ್ (Ration Card)ಹೊಂದಿರುವವರಿಗೆ ಆಹಾರ ಇಲಾಖೆ ಖುಷಿಯ ಸುದ್ದಿಯನ್ನು ನೀಡಿದೆ. ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ತಿದ್ದುಪಡಿಗೆ ಎದುರು ನೋಡುತ್ತಿದ್ದ ಮಂದಿಗೆ ಪಡಿತರ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಈ ಹಿಂದೆ ಕೂಡ ಪಡಿತರ ಕಾರ್ಡ್ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದ್ದು, ಸರ್ವರ್ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಮೂರು ದಿನಗಳ ಕಾಲ ಪಡಿತರ ತಿದ್ದುಪಡಿಗೆ ಸರ್ಕಾರ ಅನುವು ಮಾಡಿಕೊಟ್ಟಿದೆ. ಕಳೆದ ಸುಮಾರು 53 ಸಾವಿರ ಅರ್ಜಿಗಳು ಪಡಿತರ ಕಾರ್ಡ್ ತಿದ್ದುಪಡಿಗೆ ಸಲ್ಲಿಕೆಯಾಗಿದೆ. ಆದರೆ,ಅರ್ಜಿ ಸಲ್ಲಿಕೆಯಾದ ನೀವು ಸಲ್ಲಿಕೆ ಮಾಡಿರುವ ಅರ್ಜಿಯ ಸ್ಟೇಟಸ್ ಚೆಕ್(Ration Card Status check) ಮಾಡುವುದು ಹೇಗೆ?

ನೀವು ಅರ್ಜಿ ತಿದ್ದುಪಡಿಯ ಸ್ಟೇಟಸ್ ಅನ್ನು ಮೊಬೈಲ್, ಕಂಪ್ಯೂಟರ್ ಪರಿಶೀಲನೆ ಮಾಡಬಹುದು.

# ಇದಕ್ಕೆ ನೀವು ಆಹಾರ ಇಲಾಖೆ ವೆಬ್ ಸೈಟ್ www.ahara.kar.in ಗೆ ಭೇಟಿ ನೀಡಬೇಕು.
# ಅಲ್ಲಿ ನೀವು ಇ-ಸ್ಥಿತಿ ಮೇಲೆ ಕ್ಲಿಕ್ ಮಾಡಿದರೆ ಅಲ್ಲಿ ನಿಮಗೆ ಮೂರು ಆಯ್ಕೆ ಕಾಣಿಸುತ್ತದೆ.
# ಹೊಸ/ಹಾಲಿ ಪಡಿತರ ಚೀಟಿ ಸ್ಥಿತಿ, ತಿದ್ದುಪಡಿ ವಿನಂತಿ ಸ್ಥಿತಿ & ಡಿಬಿಬಿ ಸ್ಥಿತಿ ಎಂಬ ಆಯ್ಕೆಗಳನ್ನು ನೋಡಬಹುದು.
# ನೀವು ತಿದ್ದುಪಡಿ ವಿನಂತಿ ಸ್ಥಿತಿ ಮೇಲೆ ಕ್ಲಿಕ್ ಮಾಡಬೇಕು. ಆ ಬಳಿಕ ನಿಮ್ಮ ಜಿಲ್ಲೆಯ ವಲಯದ ಮೇಲೆ ಕ್ಲಿಕ್ ಮಾಡಬೇಕು.

# ನಿಮಗೆ ಹೊಸ ಪೇಜ್ ತೆರೆದುಕೊಳ್ಳಬೇಕು. ಅಲ್ಲಿ ನೀವು ಮೂರನೇ ಆಯ್ಕೆ ಆಗಿರುವ ‘ಪಡಿತರ ಚೀಟಿ ಬದಲಾವಣೆ ಕೋರಿಗೆ ಸ್ಥಿತಿ’ ಮೇಲೆ ಕ್ಲಿಕ್ ಮಾಡಬೇಕು.
# ನೀವು ನಿಮ್ಮ ಆರ್ಸಿ ನಂಬರ್, ಅಂದರೆ ಪಡಿತರ ಚೀಟಿ ಸಂಖ್ಯೆಯನ್ನು ನಮೂದು ಮಾಡಿಕೊಳ್ಳಬೇಕು.
# ನೀವು ತಿದ್ದುಪಡಿ ವೇಳೆ ಕೊಟ್ಟಿರುವ Akcnowledgment No ನಮೂದು ಮಾಡಿ ಬಳಿಕ Go ಅಂತ ಆಯ್ಕೆ ಮಾಡಿದರೆ ನಿಮ್ಮ ಅರ್ಜಿ ಸ್ಟೇಟಸ್ ತಿಳಿಯುತ್ತದೆ.
# ಎರಡು ಬಾಕ್ಸ್ಗಳಲ್ಲಿ ಸರಿಯಾದ ನಂಬರ್ಗಳನ್ನು ನಮೂದು ಮಾಡಿ Go ಅಂತ ಕ್ಲಿಕ್ ಮಾಡಿದರೆ, ನೀವು ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಕೆ ಮಾಡಿದ ದಿನಾಂಕ, ನಿಮ್ಮ ಅರ್ಜಿಯನ್ನು ಇಲಾಖೆ ಅರ್ಜಿಯ ಇನ್ನಿತರ ವಿವರ ತಿಳಿಯಲಿದೆ.

ಒಂದೊಮ್ಮೆ ನೀವು ಅರ್ಜಿ ಸಲ್ಲಿಕೆ ಮಾಡಿದ ಮಾಹಿತಿ ಸಿಗದಿದ್ದರೆ, ನಿಮ್ಮ ತಾಲೂಕು ಕೇಂದ್ರದ ಸಿಪಿಓ ಇಲ್ಲವೇ ಆಹಾರ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ಇದನ್ನೂ ಓದಿ: RBI Monetary Policy: ಸಾಲಗಾರರಿಗೆ ಭರ್ಜರಿ ಸುದ್ದಿ- ಆರ್‌ಬಿಐ ಯಿಂದ ಬಂತೊಂದು ಗುಡ್ ನ್ಯೂಸ್