Home latest ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದ ಹಿಂದೂ ಯುವಕ!! ಗೋ ಮಾಂಸ ತಿನ್ನಲು ನಿರಾಕರಿದಾಗ ನಡೆಯಿತು ಶವ ಮೆರವಣಿಗೆ!!

ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದ ಹಿಂದೂ ಯುವಕ!! ಗೋ ಮಾಂಸ ತಿನ್ನಲು ನಿರಾಕರಿದಾಗ ನಡೆಯಿತು ಶವ ಮೆರವಣಿಗೆ!!

Hindu neighbor gifts plot of land

Hindu neighbour gifts land to Muslim journalist

ಸೂರತ್:ತಿಂಗಳ ಹಿಂದೆಯಷ್ಟೇ ಮುಸ್ಲಿಂ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದ ಹಿಂದೂ ಯುವಕನೊಬ್ಬ ಫೇಸ್ಬುಕ್ ನಲ್ಲಿ ಕಾರಣ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದ್ದು, ಸಾವಿನ ಸುತ್ತ ಗೋ ಮಾಂಸ ತಿನ್ನಿಸಿದ ಮಾತುಗಳು ಕೇಳಿ ಬಂದ ಬೆನ್ನಲ್ಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪತ್ನಿ ಹಾಗೂ ಆಕೆಯ ಸಹೋದರನ ವಿಚಾರಣೆಯೊಂದಿಗೆ ತನಿಖೆ ಮುಂದುವರಿದ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ.

ಮೃತನನ್ನು ರೋಹಿತ್ ಪ್ರತಾಪ್ ಸಿಂಗ್(24)ಎಂದು ಗುರುತಿಸಲಾಗಿದ್ದು,ಮನೆಯವರ ವಿರೋಧದ ನಡುವೆಯೇ ಮದುವೆಯಾಗಿದ್ದ ಯುವಕ ದುರಂತ ಮರಣ ಹೊಂದಿದ ಬೆನ್ನಲ್ಲೇ ಮನೆ ಮಂದಿ ಆಕ್ರೋಶ ವ್ಯಕ್ತಪಡಿಸಿ ತನಿಖೆಗೆ ಆಗ್ರಹಿಸಿದ್ದಾರೆ.

ಘಟನಾ ವಿವರ: ರೋಹಿತ್ ಮೂಲತಃ ಉತ್ತರಪ್ರದೇಶದವರಾಗಿದ್ದು, ಸೂರತ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇದೇ ಸಂದರ್ಭ ಜೊತೆಯಲ್ಲಿ ಕೆಲಸ ಮಾಡುವ ಸೋನಂ ಎಂಬ ಮುಸ್ಲಿಂ ಯುವತಿಯೊಂದಿಗೆ ಗೆಳೆತನ ಬೆಳೆದಿದ್ದು, ಬಳಿಕ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ.ಇಬ್ಬರು ಮದುವೆಯಾಗುವ ಹಂಬಲ ವ್ಯಕ್ತಪಡಿಸಿದಾಗ ಮನೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮನೆಮಂದಿಯ ವಿರೋಧದ ನಡುವೆಯೇ ರೋಹಿತ್ ಆಕೆಯನ್ನು ವಿವಾಹವಾಗಿ ಜೊತೆಯಾಗಿದ್ದರು.ಇದೇ ಕಾರಣಕ್ಕಾಗಿ ರೋಹಿತ್ ಮನೆಯವರ ಸಂಪರ್ಕ ಕಳೆದುಕೊಂಡಿದ್ದರು.

ಫೇಸ್ಬುಕ್ ನಲ್ಲಿತ್ತು ಡೆತ್ ನೋಟ್!

ಸಾವಿಗೂ ಮುನ್ನ ರೋಹಿತ್ ಡೆತ್ ನೋಟ್ ನ್ನು ಒಂದನ್ನು ಬರೆದಿದ್ದು, ನನ್ನ ಸಾವಿಗೆ ಪತ್ನಿ ಹಾಗೂ ಆಕೆಯ ಸಹೋದರನೇ ಕಾರಣ. ಬಲವಂತವಾಗಿ ಗೋ ಮಾಂಸ ತಿನ್ನಿಸಿ, ಬೆದರಿಸಿ ಕೊಲೆಗೈಯ್ಯಲು ಮುಂದಾಗಿದ್ದಾರೆ ಎಂದು ಫೇಸ್ಬುಕ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ತಿಂಗಳ ಹಿಂದೆ ಇದನ್ನು ಗಮನಿಸಿದ ಆತನ ಸ್ನೇಹಿತ ಮನೆ ಮಂದಿಗೆ ಸುದ್ದಿ ಮುಟ್ಟಿಸಿದ ಬಳಿಕ ಪ್ರಕರಣ ಬಯಲಾಗಿದೆ.

ಸಾವಿನ ಬಗ್ಗೆ ಕುಟುಂಬಕ್ಕೆ ತಿಳಿಸದ ಆರೋಪಿಗಳು!

ರೋಹಿತ್ ಸತ್ತು ತಿಂಗಳುಗಳೇ ಕಳೆದರೂ ಮನೆ ಮಂದಿಗೆ ವಿಷಯ ಮುಟ್ಟಿಸಿರಲಿಲ್ಲ. ಈ ಬಗ್ಗೆ ರೋಹಿತ್ ತಾಯಿ ಪ್ರಕರಣ ದಾಖಲಿಸಿದ್ದು, ಮದುವೆಯಾದಾಗಿನಿಂದ ಆತ ಮಾತು ಬಿಟ್ಟಿದ್ದ. ಸೊಸೆಯೇ ಸೇರಿ ಆತನನ್ನು ಕೊಲೆ ಮಾಡಿದ್ದಾಳೆ ಎನ್ನುವ ಅನುಮಾನವಿದ್ದು ಸೂಕ್ತ ತನಿಖೆ ನಡೆಸುವಂತೆ ಆಗ್ರಹ ವ್ಯಕ್ತವಾಗಿದೆ.