Home Health Heart Attack: ಭಾರತೀಯರಲ್ಲಿ ಈ ಕಾರಣದಿಂದ ಹೃದಯಾಘಾತ ಹೆಚ್ಚಳ; WHO ವರದಿ

Heart Attack: ಭಾರತೀಯರಲ್ಲಿ ಈ ಕಾರಣದಿಂದ ಹೃದಯಾಘಾತ ಹೆಚ್ಚಳ; WHO ವರದಿ

Heart Attack

Hindu neighbor gifts plot of land

Hindu neighbour gifts land to Muslim journalist

ಒಂದು ಕಾಲವಿತ್ತು. ಕೇವಲ 50 ವರ್ಷ ತುಂಬಿದ ನಂತರ ಹೃದಯ ಸಂಬಂಧಿ ಕಾಯಿಲೆಗಳು ಕಾಣುತ್ತಿದ್ದವು. ಆದರೆ ಇದೀಗ 25 ವರ್ಷದವರೆಗೂ ಹೃದಯಾಘಾತಗಳು ಕಾಡುತ್ತಿವೆ .

ಇದನ್ನೂ ಓದಿ: Cleaning Hacks: ಬಚ್ಚಲಮನೆಯಲ್ಲಿ ನೀರು ಕಟ್ಟಿಕೊಂಡಿದ್ಯ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

ಇತ್ತೀಚೆಗೆ ಬದಲಾಗುತ್ತಿರುವ ಆಹಾರ ಪದ್ಧತಿ ಮತ್ತು ಜೀವನ ಶೈಲಿಯಿಂದಾಗಿ ಹೃದಯದ ಸಮಸ್ಯೆಗಳು ಹೆಚ್ಚುತ್ತಿವೆ . ಹೃದ್ರೋಗಗಳಿಗೆ ಮುಖ್ಯ ಕಾರಣ ದೈಹಿಕ ಚಟುವಟಿಕೆಯ ಮಾಡದಿರುವುದು ಎಂದು ತಜ್ಞರು ಹೇಳುತ್ತಾರೆ.

ಒಂದೇ ಸ್ಥಳದಲ್ಲಿ ಕುಳಿತು ದೀರ್ಘವಾಗಿ ಕೆಲಸ ಮಾಡುವವರಿಗೆ ಹೃದಯ ಸಂಬಂಧಿ ಖಾಯಿಲೆ ಬರುತ್ತದೆ ಎಂಬುದು ವೈದ್ಯರ ವಾದ. ಡಬ್ಲ್ಯುಎಚ್ಒ ಇತ್ತೀಚೆಗೆ ಒಂದು ವರದಿಯನ್ನು ಬಿಡುಗಡೆ ಮಾಡಿದೆ. ಡಬ್ಲ್ಯುಎಚ್ಒ ವರದಿಯ ಪ್ರಕಾರ ಭಾರತೀಯರಲ್ಲಿ ವ್ಯಾಯಾಮದ ಕೊರತೆಯಿಂದ ಹೃದಯ ರೋಗ ಬರುತ್ತಿದೆ ಎಂದು ಹೇಳಿದೆ.

ಕನಿಷ್ಠ ಪ್ರತಿ ದಿನ 150 ನಿಮಿಷಗಳ ಕಾಲ ವ್ಯಾಯಾಮ ಮಾಡ್ಬೇಕು. ಶೇ .50 ರಷ್ಟು ಭಾರತೀಯರು ವ್ಯಾಯಾಮ ಮಾಡುವುದಿಲ್ಲ.

ಯುಎಸ್ ನ ಎಂಐಟಿಯ ಸಂಶೋಧಕರು ಸಂಶೋಧನೆ ನಡೆಸಿದ್ದಾರೆ. ಅವರ ಪ್ರಕಾರ ಭಾರತವನ್ನು ಒಳಗೊಂಡಂತೆ 42 ದೇಶಗಳ 20,000 ಸಾವಿರ ಜನರನ್ನು ಸಂಶೋಧನೆಗೆ ಒಳಪಡಿಸಿದೆ . ದಿನಕ್ಕೆ 6000 ದಿಂದ 9000 ಹೆಜ್ಜೆ ನಡೆಯುವವರಲ್ಲಿ ಹೃದಯ ಸಮಸ್ಯೆಗಳು ಶೇಕಡಾ 60 ರಷ್ಟು ಕಡಿಮೆಯಾಗುತ್ತವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಆದರಿಂದ ವ್ಯಾಯಾಮ ಮನುಷ್ಯನಿಗೆ ಬಹು ಮುಖ್ಯ