Home daily horoscope Vastu Tips: ಮನೆಯ ಈ ಭಾಗದಲ್ಲಿ ಕುದುರೆ ಲಾಳ ತಂದಿಡಿ – ಎರಡೇ ದಿನದಲ್ಲಿ ನಿಮ್ಮ...

Vastu Tips: ಮನೆಯ ಈ ಭಾಗದಲ್ಲಿ ಕುದುರೆ ಲಾಳ ತಂದಿಡಿ – ಎರಡೇ ದಿನದಲ್ಲಿ ನಿಮ್ಮ ಹಣದ ಏರಿಕೆಯಲ್ಲಿ ಆಗೋ ಮ್ಯಾಜಿಕ್ ನೋಡಿ!!

Hindu neighbor gifts plot of land

Hindu neighbour gifts land to Muslim journalist

Vastu Tips: ಮನೆಯಲ್ಲಿ ಸುಖ- ಸಂತೋಷ ನೆಮ್ಮದಿ ಸಿಗಬೇಕು ಎಂದು ಬಯಸುವುದು ಸಹಜ. ವಾಸ್ತು ಪ್ರಕಾರ ಮನೆಯ ಮುಖ್ಯ ದ್ವಾರ ಬಹಳ ಮಹತ್ವವನ್ನು ಹೊಂದಿದೆ.ಕುದುರೆಯ ಗೊರಸನ್ನು ನೇತುಹಾಕುವುದರಿಂದ ಜೀವನದಲ್ಲಿ ಎಲ್ಲಾ ಕಷ್ಟಗಳು, ಸಮಸ್ಯೆಗಳು ದೂರವಾಗುತ್ತವೆ. ಮನೆಯಲ್ಲಿ ಕುದುರೆ ಗೊರಸುಗಳನ್ನು ಇಡುವುದರಿಂದ ಶಾಂತಿ ನೆಲೆಸುತ್ತದೆ ಎಂಬ ನಂಬಿಕೆಯಿದೆ.

 

ಮನೆಯಲ್ಲಿ ಕುದುರೆ ಗೊರಸು ನೇತು ಹಾಕುವುದು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಎಲ್ಲಾ ಹಣ ಸಂಬಂಧಿತ ಸಮಸ್ಯೆಗಳನ್ನು ದೂರ ಮಾಡುತ್ತದೆ ಎಂದು ನಂಬಲಾಗಿದೆ. ಆದರೆ ಮನೆಯಲ್ಲಿ ಕುದುರೆ ಗೊರಸು ನೇತು ಹಾಕುವಾಗ ವಾಸ್ತು ನಿಯಮಗಳನ್ನು ಪಾಲಿಸಲೇಬೇಕಾಗುತ್ತದೆ. ವಾಸ್ತು ಶಾಸ್ತ್ರದ ಅನುಸಾರ,ಮನೆಯಲ್ಲಿ ಕುದುರೆ ಗೊರಸು ಇಡುವುದು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಮನೆಯಲ್ಲಿ ಕಪ್ಪು ಕುದುರೆಯ ಗೊರಸು ಇದ್ದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರ ಜೊತೆಗೆ ಸಂತೋಷ, ಸಂಪತ್ತು ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ.

 

ವಾಸ್ತುಶಾಸ್ತ್ರದ ಅನುಸಾರ, ಮನೆಯ ಉತ್ತರ ಇಲ್ಲವೇ ಪೂರ್ವ ದಿಕ್ಕಿನಲ್ಲಿ ಕುದುರೆ ಗೊರಸು ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ಸಂಪತ್ತು, ಸಂತೋಷ ಹಾಗೂ ಅದೃಷ್ಟ ಹೆಚ್ಚಾಗುತ್ತದೆ. ವಾಸ್ತು ಪ್ರಕಾರ ಮನೆಯ ಮುಖ್ಯ ಬಾಗಿಲು ದಕ್ಷಿಣ ಅಥವಾ ಪೂರ್ವ ದಿಕ್ಕಿನಲ್ಲಿಡಬೇಕು. ದುಃಸ್ವಪ್ನಗಳನ್ನು ದೂರವಿಡಲು ಈ ಕುದುರೆ ಗೊರಸನ್ನು ಹಾಸಿಗೆಯ ಬಳಿ ಇರಿಸಬಹುದು. ಕುದುರೆಯ ಗೊರಸನ್ನು ತುದಿಗಳನ್ನು ಮೇಲಕ್ಕೆ ಇಡುವುದರಿಂದ ಆ ಮನೆಗೆ ಅದೃಷ್ಟ ಮತ್ತು ಸಂಪತ್ತು ಬರುತ್ತದೆ. ಇದನ್ನು ಮನೆಯಲ್ಲಿಟ್ಟರೆ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ.

 

ಕುದುರೆಯ ಗೊರಸನ್ನು ಮುಖ್ಯ ಬಾಗಿಲಿಗೆ ನೇತುಹಾಕಿದರೆ, ಅದು ಮನೆಯಲ್ಲಿ ಕುಟುಂಬ ಸದಸ್ಯರ ನಡುವಿನ ಭಿನ್ನಾಭಿಪ್ರಾಯಗಳನ್ನು ತೊಡೆದುಹಾಕುತ್ತದೆ. ಮನೆಗೆ ಆಧ್ಯಾತ್ಮಿಕ ಶಕ್ತಿಯನ್ನು ಆಕರ್ಷಿಸುತ್ತದೆ. ಕುದುರೆ ಗೊರಸನ್ನು ಬಾಗಿಲಿನ ಬಳಿ ನೇತು ಹಾಕುವುದರಿಂದ ದುಷ್ಟ ಕಣ್ಣು ದೂರವಾಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಾಣಲು ಕುದುರೆಯ ಬಲಗಾಲಿನ ಗೊರಸನ್ನು ಮನೆಯ ಮುಖ್ಯ ಬಾಗಿಲಿಗೆ ನೇತು ಹಾಕಬಹುದು. ಹೀಗೆ ಮಾಡುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಸಿಗಲಿದೆ.

 

 

 

 

 

 

 

 

ಇದನ್ನು ಓದಿ: Zombie Deer Disease: ಮಾಂಸ ಪ್ರಿಯರೇ ಹುಷಾರ್ – ಇನ್ನು ಈ ಪ್ರಾಣಿಯ ಮಾಂಸ ತಿಂದ್ರೆ ಇಡೀ ಜಗತ್ತಿಗೆ ಹರಡುತ್ತೆ ಪ್ರಾಣವನ್ನೇ ತೆಗೆಯೋ ಸಾಂಕ್ರಾಮಿಕ ರೋಗ !!