Home latest Urad dal Side Effects : ಉದ್ದಿನ ದೋಸೆ ಪ್ರಿಯರು ನೀವೂ ಆಗಿದ್ದರೆ ಈ ಮಾಹಿತಿಯತ್ತ...

Urad dal Side Effects : ಉದ್ದಿನ ದೋಸೆ ಪ್ರಿಯರು ನೀವೂ ಆಗಿದ್ದರೆ ಈ ಮಾಹಿತಿಯತ್ತ ಕಣ್ಣಾಡಿಸುವುದು ಉತ್ತಮ!

Hindu neighbor gifts plot of land

Hindu neighbour gifts land to Muslim journalist

ಉದ್ದಿನ ದೋಸೆ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸಾಮಾನ್ಯವಾಗಿ ಎಲ್ಲರೂ ಕೂಡ ತಿಂದಿರುತ್ತಾರೆ. ಸೂಪರ್ ಟೇಸ್ಟ್ ಜೊತೆ ಹೊಟ್ಟೆ ಫುಲ್ ಆಗುವ ಈ ಉದ್ದಿನ ಯಾವುದೇ ಆಹಾರವನ್ನು ಹೆಚ್ಚಿನವರು ಇಷ್ಟ ಪಡುತ್ತಾರೆ. ಆದ್ರೆ, ಯಾವುದೇ ಒಂದು ಆಹಾರಕ್ಕೂ ಒಂದು ಲಿಮಿಟ್ ಅನ್ನೋದು ಇದೆ. ಹಾಗಾಗಿ ನಮ್ಮ ದೇಹಕ್ಕೆ ಎಷ್ಟು ಸೂಕ್ತವೋ ಅಷ್ಟೇ ಸೇವಿಸೋದು ಮುಖ್ಯ.

ಹೌದು. ಉದ್ದಿನ ಬೇಳೆ ವಿವಿಧ ರೀತಿಯ ಪೌಷ್ಟಿಕಾಂಶದ ಮೌಲ್ಯಗಳನ್ನು ಹೊಂದಿದ್ದು, ಇವು ದೇಹವನ್ನು ಸದೃಢಗೊಳಿಸುತ್ತವೆ. ಆದ್ರೆ, ಇದು ಎಷ್ಟು ಆರೋಗ್ಯಕ್ಕೆ ಉತ್ತಮವೋ ಅಷ್ಟೇ ಅಡ್ಡಪರಿಣಾಮಗಳನ್ನು ಬೀರುತ್ತದೆ. ಅರೋಗ್ಯ ಸಮಸ್ಯೆ ಇರುವವರು ಎಷ್ಟು ಬೇಕೋ ಅಷ್ಟೇ ಸೇವಿಸುವುದು ಉತ್ತಮ. ವಾರದಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ ಉದ್ದಿನ ಬೇಳೆ ತಿನ್ನಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಯಾಕಂದ್ರೆ, ಉದ್ದಿನ ಬೇಳೆಯನ್ನು ಅತಿಯಾಗಿ ಸೇವಿಸುವುದರಿಂದ ಯೂರಿಕ್ ಆಸಿಡ್ ಸಮಸ್ಯೆ ಹೆಚ್ಚಾಗುತ್ತದೆ. ಅದರಲ್ಲೂ ನಾವು ತಿಳಿಸುವ ಆರೋಗ್ಯ ಸಮಸ್ಯೆ ನಿಮ್ಮಲ್ಲಿದ್ದರೆ ಅಂತೂ ಸಮಸ್ಯೆ ಕಟ್ಟಿಟ್ಟಬುತ್ತಿ. ಹಾಗಾಗಿ ಈ ಸಮಸ್ಯೆಗಳಿಂದ ಬಳಲುತ್ತಿರುವವರು ಉದ್ದಿನ ಬೇಳೆ ತಿನ್ನಲೇಬಾರದು..

*ಈಗಾಗಲೇ ಸಂಧಿವಾತ ಸಮಸ್ಯೆಯಿಂದ ಬಳಲುತ್ತಿರುವವರು ಉದ್ದಿನ ಬೇಳೆಯನ್ನು ತಿನ್ನಬಾರದು.
*ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವವರು ಉದ್ದಿನ ಬೇಳೆಯನ್ನು ತಿನ್ನಬಾರದು.
*ಮಲಬದ್ಧತೆ, ಹೊಟ್ಟೆಯಲ್ಲಿ ಗ್ಯಾಸ್, ಹೊಟ್ಟೆ ಉಬ್ಬರ ಮುಂತಾದವುಗಳ ಸಮಸ್ಯೆ ಇದ್ದವರು ಉದ್ದಿನ ಬೇಳೆಯನ್ನು ತಿನ್ನುವುದರಿಂದ ಮತ್ತಷ್ಟು ಅನಾರೋಗ್ಯ ಬಾಧಿಸುತ್ತದೆ.
*ಯೂರಿಕ್ ಆಸಿಡ್‌ ದೇಹದಲ್ಲಿ ಹೆಚ್ಚಾಗಿದ್ದರೆ, ಅಂತಹ ಜನರು ಇದನ್ನು ತಪ್ಪಿಸಬೇಕು. ಇವು ಮೂತ್ರಪಿಂಡದಲ್ಲಿ ಕಲ್ಲುಗಳ ಬೆಳವಣಿಗೆಗೆ ಕಾರಣವಾಗುತ್ತವೆ.