

ಹ್ಯಾಕಿಂಗ್ ಅತೀ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಭಾರತದಲ್ಲಿ ಹ್ಯಾಕಿಂಗ್ ಸರಾಗವಾಗಿ ಅಡಚಣೆಯಿಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ನಡೆಯತ್ತಿದ್ದು ಎಲ್ಲರಲ್ಲಿ ಆತಂಕ ಮೂಡಿಸಿರುವುದಂತೂ ಸ್ಪಷ್ಟ.
ಹ್ಯಾಕರ್ಸ್ ಸಾಮಾನ್ಯವಾಗಿ ಕಂಪನಿಗಳ, ಗಣ್ಯ ವ್ಯಕ್ತಿಗಳ, ಜೊತೆಗೆ ಜಾಲತಾಣ ದ ಮೂಲಕ ವೈಯಕ್ತಿಕ ಮಾಹಿತಿಯನ್ನು ಹ್ಯಾಕ್ ಮಾಡುವ ಟ್ರೆಂಡ್ ಬದಲಾಗಿ, ವಿಶ್ವದ ಅತೀ ದೊಡ್ಡ ಟ್ಯಾಕ್ಸಿ ಸರ್ವೀಸ್ ಗಳಲ್ಲಿ ಒಂದಾಗಿರುವ ಉಬರ್ ನ ಡೇಟಾವ ನ್ನು ಹ್ಯಾಕ್ ಮಾಡಿ ಉಬರ್ ಗೆ ದೊಡ್ಡ ಮಟ್ಟದ ಶಾಕ್ ನೀಡಿದೆ.ಆರಂಭದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸದೆ ಜಾಲತಾಣಗಳಲ್ಲಿ ಹರಿದಾಡುವ ನಕಲಿ ಮೆಸೇಜ್ ಎಂದು ಸುಮ್ಮನಿದ್ದ ಉಬರ್ ಸಂಸ್ಥೆ ಹ್ಯಾಕ್ ಆದ ಸತ್ಯಾಂಶ ಹೊರ ಬಿದ್ದಾಗ ಕ್ಷಣಕಾಲ ದಿಗ್ಭ್ರಮೆಗೊಂಡಿದೆ.
ಉಬರ್ ಆಂತರಿಕ ಸಂವಹನ ಸಿಸ್ಟಮ್, ಎಂಜಿನಿಯರ್ ಸಿಸ್ಟಮ್ ಸೇರಿದಂತೆ ಉಬರ್ ಬಹುತೇಕ ಡೇಟಾಗಳು ಹ್ಯಾಕ್ ಆಗಿದ್ದು, ತಕ್ಷಣವೇ ಸೈಬೆರ್ ಸೆಕ್ಯೂರಿಟಿಕೆ ಮಾಹಿತಿ ನೀಡಿ , ತನಿಖೆ ನಡೆಸುವಂತೆ ಆದೇಶಿಸಿದೆ.
18ರ ಹರೆಯದ ಯುವಕ ಉಬರ್ ಡೇಟಾ, ಆ್ಯಪ್ ಸೇರಿದಂತೆ ಬಹುತೇಕ ಗೌಪ್ಯ ಮಾಹಿತಿಗಳು, ಸೆಕ್ಯೂರಿಟಿಗಳನ್ನು ಹ್ಯಾಕ್ ಮಾಡಿರುವುದೆಂದು ತನಿಖೆಯಿಂದ ತಿಳಿದುಬಂದಿದ್ದು ಎಲ್ಲರಿಗೂ ಶಾಕ್ ಆಗಿದೆ.
ಉಬರ್ ಆಡಳಿತ ಮಂಡಳಿ ಸದಸ್ಯ ಎಂದು ಹೇಳಿಕೊಂಡು ಸಂದೇಶ ರವಾನಿಸುತ್ತಿರುವುದಲ್ಲದೆ, ಉಬರ್ ಡೇಟಾಗಳನ್ನು ಬಹಿರಂಗಪಡಿಸಿದ್ದಾನೆ. ಉಬರ್ ಉದ್ಯೋಗಿಗಳಿಗೆ ಸತತವಾಗಿ ರಹಸ್ಯ ಮಾಹಿತಿಗಳು ಬರತೊಡಗಿದ್ದರೂ ಕೂಡ ಜೋಕ್ ಎಂದು ಸುಮ್ಮನಿದ್ದ ಉದ್ಯೋಗಿಗಳು , ಕೆಲ ಆತಂರಿಕ ವಿಚಾರ ಬಹಿರಂಗವಾಗುತ್ತಿದ್ದಂತೆ ಎಚ್ಚೆತ್ತುಕೊಂಡು ಕಂಪನಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಆ್ಯಪ್ ಹ್ಯಾಕ್ ಆಗಿರುವ ವಿಷಯ ಬಹಿರಂಗವಾಗಿದೆ.
ಉಬರ್ ಹ್ಯಾಕಿಂಗ್ ಆದ ಮಾಹಿತಿ ತಿಳಿಯುತ್ತಿದ್ದಂತೆ ಉಬರ್ ಆಡಳಿತ ಮಂಡಳಿ ಸೈಬರ್ ಸೆಕ್ಯೂರಿಟಿಯ ಮೊರೆಹೊಕ್ಕಿದ್ದು, ಸದ್ಯ ಈ ಕುರಿತು ತನಿಖೆ ಮುಂದುವರೆಯುತ್ತಿದೆ ಎನ್ನಲಾಗಿದೆ.
ಇಷ್ಟೇ ಅಲ್ಲದೆ , ಗಣ್ಯ ವ್ಯಕ್ತಿಗಳ ಟ್ವಿಟರ್ ಅಕೌಂಟ್ ಕೂಡ ಹ್ಯಾಕ್ ಮಾಡುತ್ತಿರುವ ಖದೀಮರು, ಎಗ್ಗಿಲ್ಲದೆ ಹ್ಯಾಕ್ ಮಾಡುವ ಪ್ರಕ್ರಿಯೆ ರೂಡಿಸಿಕೊಂಡಿದ್ದಾರೆ. ಇದರಿಂದ ಸಾಮಾನ್ಯರು ಕೂಡ ಹೆದರುವ ಸ್ಥಿತಿ ಎದುರಾಗಿದೆ.













