Home latest Ration card: ಈ ತಪ್ಪು ಮಾಡಿದ್ರೆ ನಿಮ್ಮ ‘ರೇಷನ್ ಕಾರ್ಡ್’ ರದ್ದು

Ration card: ಈ ತಪ್ಪು ಮಾಡಿದ್ರೆ ನಿಮ್ಮ ‘ರೇಷನ್ ಕಾರ್ಡ್’ ರದ್ದು

Ration Card

Hindu neighbor gifts plot of land

Hindu neighbour gifts land to Muslim journalist

Ration card: ಪಡಿತರ ಚೀಟಿ ಎಂದರೆ ಸರ್ಕಾರವು ಬಡ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸಲು ನೀಡುವ ಅಧಿಕೃತ ದಾಖಲೆಯಾಗಿದೆ.ಆದರೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡೆದ ಅನ್ನಭಾಗ್ಯದ ಅಕ್ಕಿ ಮಾರಿದರೆ 6 ತಿಂಗಳು ನಿಮ್ಮ ರೇಶನ್ ಕಾರ್ಡ್ ತಾತ್ಕಾಲಿಕವಾಗಿ ರದ್ದಾಗಲಿದೆ 

ಹೌದು, ಸರ್ಕಾರದ ಪ್ರತಿಯೊಂದು ಯೋಜನೆಗಳ ಸೌಲಭ್ಯ ಪಡೆಯಲು ರೇಷನ್ ಕಾರ್ಡ್ ಬೇಕಾಗಿರುತ್ತದೆ. ರೇಷನ್ ಕಾರ್ಡ್ ಪಡಿತರ ಪಡೆಯಲು ಮಾತ್ರವಲ್ಲದೇ ಗುರುತಿನ ಚೀಟಿ ಪಡೆಯಲು ಕೂಡ ಸಹಕಾರಿಯಾಗುತ್ತದೆ. ಅದಕ್ಕಾಗಿ ರೇಷನ್ ಕಾರ್ಡ್ ಸಂಬಂಧ ಸರ್ಕಾರ ನೀಡುವ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು.

ರೇಷನ್ ಕಾರ್ಡ್ ಗೆ ಇಕೆವೈಸಿ ಮಾಡಿಸುವುದು ಕಡ್ಡಾಯ: ಅಸಲಿ ರೇಷನ್ ಕಾರ್ಡ್ ಯಾವುದು ನಕಲಿ ರೇಷನ್ ಕಾರ್ಡ್ ಯಾವುದು ಎಂಬುದನ್ನು ತಿಳಿಯಲು ಸರ್ಕಾರ ಇಕೆವೈಸಿ ಕಡ್ಡಾಯಗೊಳಿಸಿದೆ. ಇದನ್ನು ಮಾಡಿಸದೇ ಹೋದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆಯಿದೆ. ಆದ್ದರಿಂದ ತಪ್ಪದೇ ಇಕೆವೈಸಿ ಮಾಡಿಸಿ.

ಪಡಿತರ ಪಡೆಯದೇ ಇದ್ರೆ ರೇಷನ್ ಕಾರ್ಡ್ ರದ್ದು: 6 ತಿಂಗಳಿನಿಂದ ಪಡಿತರ ಪಡೆಯದವರ ರೇಷನ್ ಕಾರ್ಡ್ ರದ್ದು ಮಾಡುತ್ತಿದ್ದು. ಯಾರು ಪಡಿತರವನ್ನು ಪಡೆದುಕೊಳ್ಳುತ್ತಿಲ್ಲವೋ ಅಂಥವರ ಬಿಪಿಎಲ್ ಕಾರ್ಡ್ ರದ್ದುಪಡಿಸಲು ಸಮೀಕ್ಷೆ ಕಾರ್ಯ ಆರಂಭವಾಗಿದೆ. 

ಅನ್ನಭಾಗ್ಯದ ಅಕ್ಕಿ ಮಾರಿದ್ರೆ ಕೇಸ್: ಅಕ್ರಮವಾಗಿ ಅನ್ನಭಾಗ್ಯದ ಅಕ್ಕಿ ಮಾರಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ.