Home latest Punjab: ಯಪ್ಪೋ…ಏನಿದು? ರೋಗಿಯ ಹೊಟ್ಟೆಯಲ್ಲಿದ್ದ ವಸ್ತು ನೋಡಿ ದಂಗಾಗಿ ನಿಂತ ವೈದ್ಯರು!

Punjab: ಯಪ್ಪೋ…ಏನಿದು? ರೋಗಿಯ ಹೊಟ್ಟೆಯಲ್ಲಿದ್ದ ವಸ್ತು ನೋಡಿ ದಂಗಾಗಿ ನಿಂತ ವೈದ್ಯರು!

Punjab

Hindu neighbor gifts plot of land

Hindu neighbour gifts land to Muslim journalist

Punjab: ಮಾನಸಿಕ ಅಸ್ವಸ್ಥನ ಹೊಟ್ಟೆಯ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರೋರ್ವರಿಗೆ ಆತನ ಹೊಟ್ಟೆಯಲ್ಲಿದ್ದ ವಸ್ತುಗಳನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ. 40 ರ ಹರೆಯದ ಮಾನಸಿಕ ಅಸ್ವಸ್ಥನೋರ್ವ ದೀರ್ಘಕಾಲದ ಹೊಟ್ಟೆನೋವಿನಿಂದ ಬಳಲುತ್ತಿದ್ದ ಎನ್ನಲಾಗಿದೆ(Punjab news). ಇದರಿಂದ ಈತನಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸತತ ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ್ದು, ಈತನ ಹೊಟ್ಟೆಯಿಂದ ಇಯರ್ ಫೋನ್‌, ಲಾಕೆಟ್‌ಗಳು, ಸ್ಕ್ರೂಗಳು, ಸೇಫ್ಟಿ ಪಿನ್‌ಗಳು, ಶರ್ಟ್‌ ಬಟನ್‌ಗಳು ಹಾಗೂ ರಾಖಿಗಳನ್ನು ಹೊರತೆಗೆದಿದ್ದಾರೆ.

ಈ ವಸ್ತುಗಳನ್ನೆಲ್ಲ ಸೋಶಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡಲಾಗಿದ್ದು, ಸಖತ್‌ ವೈರಲ್‌ ಆಗಿದೆ ಈ ಸುದ್ದಿ. ರೋಗಿಯು ಕಳೆದ ಎರಡು ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಜ್ವರ ಮತ್ತು ವಾಂತಿ ಆದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆ ಸಂದರ್ಭದಲ್ಲಿ ವೈದ್ಯರಿಗೆ ಇದೆಲ್ಲ ತಿಂದಿರುವುದು ಗಮನಕ್ಕೆ ಬಂದಿದ್ದು, ನಂತರ ಶಸ್ತ್ರಚಿಕಿತ್ಸೆ ನಡೆಸುವ ನಿರ್ಧಾರ ಮಾಡಲು ಬಂದೆವು ಎಂದು ಮೆಗಾ ಮೆಡಿಸಿಟಿ ಆಸ್ಪತ್ರೆಗೆಯ ನಿರ್ದೇಶಕರು ಹೇಳಿದ್ದಾರೆ.

ಇದನ್ನೂ ಓದಿ: ಮಂಗಳೂರು (ಉಳ್ಳಾಲ): ಬಲೆಗೆ ಬಿದ್ದ ದೈತ್ಯ ಗಾತ್ರದ ಪಿಲಿ ತೊರಕೆ ಮೀನು!