ಪ್ರಧಾನಿ ಭದ್ರತೆ ವೈಫಲ್ಯ ಪ್ರಕರಣದ ಹಿಂದಿದೆ ಖಲಿಸ್ತಾನಿ ಕರಿನೆರಳು!! ಸುಪ್ರೀಂ ಕೋರ್ಟ್ ವಕೀಲರಿಗೆ ಬರುತ್ತಿದೆ ಬೆದರಿಕೆ ಕರೆ-ಸಾಮಾಜಿಕ ಜಾಲತಾಣದಲ್ಲಿ ಹರಿಯುತ್ತಿದೆ ಕೆಲ ಸುಳ್ಳು ಸುದ್ದಿ
ಪಂಜಾಬ್:ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದ ಕಾರ್ಯಕ್ರಮವೊಂದಕ್ಕೆ ರಸ್ತೆಯಲ್ಲಿ ತೆರಳುವ ಸಂದರ್ಭ ಪ್ರತಿಭಟನಾಕಾರರು ಅಡ್ಡಿಪಡಿಸಿದಲ್ಲದೇ, ಪ್ರಧಾನಿಯನ್ನು ಫ್ಲೈ ಓವರ್ ಮೇಲೆಯೇ ನಿಲ್ಲಿಸಿ ದೇಶದ ಪ್ರಧಾನಿಗೇ ಭದ್ರತೆ ನೀಡುವಲ್ಲಿ ವಿಫಲರಾದ ಪಂಜಾಬ್ ಸರ್ಕಾರಕ್ಕೆ ಎಲ್ಲೆಡೆಯಿಂದಲೂ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಅದೊಂದು ಫೋಟೋ ಜನರ ಯೋಚನೆಗಳ ದಾರಿ ತಪ್ಪಿಸುತ್ತ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಇಲ್ಲಿ ಕಾಣುವ ಈ ಫೋಟೋದಲ್ಲಿ ಕಾಲು ಗಂಟೆ ಹೊತ್ತು ಫ್ಲೈ ಓವರ್ ಮೇಲೆ ಸಿಕ್ಕಿಹಾಕಿಕೊಂಡಿದ್ದ ಪ್ರಧಾನಿಯ ಕೊಲೆಗೆ ಸ್ಕೆಚ್ ನಡೆದಿತ್ತು ಎನ್ನಲಾಗಿದ್ದು, ಇದಕ್ಕೆ ಸಾಕ್ಷಿ …