Home latest Nelluru: ತರಗತಿಯಲ್ಲೇ ಗರ್ಭಪಾತಮಾಡಿಕೊಂಡ ಬಿ ಟೆಕ್ ವಿದ್ಯಾರ್ಥಿನಿ, ತೀವ್ರ ರಕ್ತಸ್ರಾವದಿಂದ ಸಾವು!

Nelluru: ತರಗತಿಯಲ್ಲೇ ಗರ್ಭಪಾತಮಾಡಿಕೊಂಡ ಬಿ ಟೆಕ್ ವಿದ್ಯಾರ್ಥಿನಿ, ತೀವ್ರ ರಕ್ತಸ್ರಾವದಿಂದ ಸಾವು!

Nelluru

Hindu neighbor gifts plot of land

Hindu neighbour gifts land to Muslim journalist

Nelluru :ಖಾಸಗಿ ಕಾಲೇಜಿನಲ್ಲಿ ಬಿ. ಟೆಕ್ ಓದುತ್ತಿದ್ದ ಯುವತಿಯೊಬ್ಬಳು ಗರ್ಭಪಾತಕ್ಕೆ ಒಳಗಾಗಿ ತರಗತಿಯ ಕೊಠಡಿಯಲ್ಲೇ ಸಾವನ್ನಪ್ಪಿದ ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

ಹೌದು, ನೆಲ್ಲೂರಿನಲ್ಲಿ (Nelluru) ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು ಖಾಸಗಿ ಕಾಲೇಜಿನಲ್ಲಿ ಬಿ. ಟೆಕ್ ಓದುತ್ತಿದ್ದ ಮರ್ರಿಪಾಡು ಮಂಡಲದ 19 ವರ್ಷದ ಯುವತಿ ಗರ್ಭಪಾತಕ್ಕೆ ಒಳಗಾಗಿ ತರಗತಿಯ ಕೊಠಡಿಯಲ್ಲೇ ಸಾವನ್ನಪ್ಪಿದ್ದಾಳೆ. ಆದರೆ ಇದೀಗ ಆಕೆಗೆ ತರಗತಿಯಲ್ಲಿಯೇ ಗರ್ಭಪಾತವಾಯಿತಾ? ಅಥವಾ YouTube ವೀಡಿಯೊ ಮೂಲಕ ತನಗೆ ತಾನೇ ಸ್ವಯಂ ಅಬಾರ್ಷನ್ ಮಾಡಿಕೊಂಡಳಾ? ಎಂಬ ಅನುಮಾನ ಮೂಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಬಗ್ಗೆ ವಿವರ ಸಂಗ್ರಹಿಸುತ್ತಿದ್ದಾರೆ.

ಪೋಲೀಸರು ನೀಡಿದ ಮಾಹಿತಿ ಪ್ರಕಾರ ನೆಲ್ಲೂರಿನಲ್ಲಿ ಬಿ. ಟೆಕ್ ದ್ವಿತೀಯ ವರ್ಷ ಓದುತ್ತಿದ್ದ (B Tech student) ವಿದ್ಯಾರ್ಥಿನಿ ಇದೇ ಏಪ್ರಿಲ್ ತಿಂಗಳ 11ರಂದು ಕಾಲೇಜಿನಲ್ಲಿ ತನ್ನ ಸಹಪಾಠಿಗಳೆಲ್ಲ ಹೊರಗಡೆ ಇರುವಾಗ ತಾನು ಒಬ್ಬಳು ಮಾತ್ರ ತರಗತಿಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಬಹಳ ಹೊತ್ತಾದರೂ ಹೊರಗೆ ಬಾರದೇ ಇದ್ದ ಕಾರಣ ಸ್ನೇಹಿತೆಯರು ಬಾಗಿಲು ಒಡೆದು ನೋಡಿದಾಗ ಯುವತಿ ತೀವ್ರ ರಕ್ತಸ್ರಾವವಾಗಿ ತರಗತಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ (Abortion). ಇನ್ನೂ ಆಘಾತಕಾರಿ ಸಂಗತಿಯೆಂದರೆ ಆ ವಿದ್ಯಾರ್ಥಿನಿಯ ಪಕ್ಕದಲ್ಲಿ 6 ತಿಂಗಳ ಭ್ರೂಣವಿದ್ದುದು! ಆ ಕೂಡಲೇ ಎಚ್ಚೆತ್ತ ಸಹಪಾಠಿಗಳೆಲ್ಲರೂ ಕೂಡಿ ತಾಯಿ ಹಾಗೂ ಭ್ರೂಣವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ತಾಯಿ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.

ಇನ್ನು ಈ ಕುರಿತು ನೆಲ್ಲೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಂತರ ಮಾಹಿತಿ ಪಡೆದ ನೆಲ್ಲೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ವಿವರ ಸಂಗ್ರಹಿಸಿದ್ದಾರೆ. ಬಾಲಕಿಯ ತಂದೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಅಂದಹಾಗೆ ತರಗತಿಯಲ್ಲಿಯೇ ಗರ್ಭಪಾತವಾಯಿತಾ? ಅಥವಾ YouTube ವೀಡಿಯೊ ಮೂಲಕ ತನಗೆ ತಾನೇ ಸ್ವಯಂ ಅಬಾರ್ಷನ್ ಮಾಡಿಕೊಂಡಳಾ? ಪೊಲೀಸರು ಈ ಬಗ್ಗೆ ವಿವರ ಸಂಗ್ರಹಿಸುತ್ತಿದ್ದಾರೆ. ಯುವತಿಯ ಸೆಲ್‌ ಫೋನ್ ವಶಪಡಿಸಿಕೊಂಡ ಪೊಲೀಸರು, ಅದರಲ್ಲಿನ ಡೇಟಾ ಕಲೆಹಾಕಿದ್ದಾರೆ. ಅದರ ಆಧಾರದ ಮೇಲೆ ಆಕೆ ಅನಂತಸಾಗರ ಪ್ರದೇಶದ ಕಾರು ಚಾಲಕನೊಂದಿಗೆ ನಿಕಟ ಸಂಪರ್ಕ ಹೊಂದಿದ್ದಳು ಎಂದು ತಿಳಿದುಬಂದಿದೆ. ಮುಂದಿನ ತನಿಖೆ ನಡೆಯಬೇಕಿದೆ.