Home latest ತನ್ನ ಪ್ರೀತಿಯ ಮಗನ ಮದುವೆಗಾಗಿ 4 ಕೆ.ಜಿ 280 ಗ್ರಾಂ ತೂಕದ ಲಗ್ನ ಪತ್ರಿಕೆ ತಯಾರಿಸಿದ...

ತನ್ನ ಪ್ರೀತಿಯ ಮಗನ ಮದುವೆಗಾಗಿ 4 ಕೆ.ಜಿ 280 ಗ್ರಾಂ ತೂಕದ ಲಗ್ನ ಪತ್ರಿಕೆ ತಯಾರಿಸಿದ ತಂದೆ !! | ಅಷ್ಟಕ್ಕೂ ಇದರ ಬೆಲೆ ಕೇಳಿದ್ರೆ ನೀವೊಮ್ಮೆ ದಂಗಾಗೋದು ಪಕ್ಕಾ

Hindu neighbor gifts plot of land

Hindu neighbour gifts land to Muslim journalist

ಮನೆಯಲ್ಲಿ ಮದುವೆಯ ದಿನ ನಿಗದಿಯಾದ ಮೇಲೆ ಮೊದಲು ರೆಡಿಯಾಗುವುದೇ ಲಗ್ನ ಪತ್ರಿಕೆ. ಇತ್ತೀಚೆಗೆ ಜನರು ಹೊಸ ಶೈಲಿಯಲ್ಲಿ ಲಗ್ನ ಪತ್ರಿಕೆ ತಯಾರಿಕೆಯನ್ನು ಯೋಚಿಸುತ್ತಾರೆ. ಜನರ ಮನಸೆಳೆಯುವ ಲಗ್ನ ಪತ್ರಿಕೆಗಳನ್ನು ಹುಡುಕುತ್ತಾರೆ. ಈಗೆಲ್ಲಾ ಹೊಸ ಹೊಸ ಥೀಮ್ ಗಳೊಂದಿಗೆ ವೆಡ್ಡಿಂಗ್ ಕಾರ್ಡ್ಗಳು ಸಿದ್ಧವಾಗುತ್ತಿವೆ. ಇದೀಗ ಮತ್ತೊಂದು ಹೊಸ ಶೈಲಿಯ ವೆಡ್ಡಿಂಗ್ ಕಾರ್ಡ್ ನೆಟ್ಟಿಗರ ಕುತೂಹಲ ಕೆರಳಿಸಿದೆ.

ಮದುವೆ ಸಂಭ್ರಮಕ್ಕೆ ಏನಾದರೂ ಭಿನ್ನವಾಗಿ ಟ್ರೈ ಮಾಡಬೇಕು ಎಂದು ಇತ್ತೀಚಿನ ದಿನಗಳಲ್ಲಿ ಎಲ್ಲರೂ ಬಯಸುವುದು ಸಹಜ. ಅದರಂತೆ ಇಲ್ಲೊಬ್ಬ ತಂದೆ ತನ್ನ ಮಗನಿಗಾಗಿ 4 ಕೆಜಿ, 280 ಗ್ರಾಂ ತೂಕದ ಮದುವೆ ಕಾರ್ಡ್ ಅನ್ನು ಮಾಡಿಸಿದ್ದು, ಆ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳ ವಿವಾಹವನ್ನು ವಿಶೇಷವಾಗಿ ಮಾಡಬೇಕು ಎಂಬ ಕನಸು ಇರುತ್ತದೆ. ಅದರಲ್ಲಿಯೂ ವಿಶೇಷವಾಗಿ ಭಾರತದಲ್ಲಿ, ಜನರು ಮದುವೆಗಾಗಿ ಲಕ್ಷಾಂತರ ಹಣವನ್ನು ಖರ್ಚು ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬ ತಂದೆ ತನ್ನ ಮಗನ ಮದುವೆಗೆ ಆಮಂತ್ರಣದ ಕಾರ್ಡ್ ಅನ್ನು ಭಿನ್ನವಾಗಿ ಮಾಡಿಸಿದ್ದು, ಆ ಕಾರ್ಡ್ 4 ಕೆ.ಜಿ ಗಿಂತ ಹೆಚ್ಚು ತೂಕವಿದೆ. ಆ ಕಾರ್ಡ್ ನ ಬೆಲೆ ಏನಾದರು ಕೇಳಿದರೆ ಜನರು ಒಂದು ಕ್ಷಣ ದಂಗಾಗುವುದು ಖಂಡಿತ.

ಗುಜರಾತಿ ಉದ್ಯಮಿ ಮೌಲೇಶಭಾಯ್ ಉಕಾನಿ, ಸೋನಾಲ್ಬೆನ್ ಉಕಾನಿ ಅವರ ಮಗ ಜೇ ಉಕಾನಿ ಅವರ ವಿವಾಹಕ್ಕಾಗಿ 4 ಕೆ.ಜಿ ಮತ್ತು 280 ಗ್ರಾಂ ತೂಕದ ಕಾರ್ಡ್ ಅನ್ನು ಮಾಡಿಸಿದ್ದಾರೆ. ನವೆಂಬರ್ 14 ರಿಂದ 16 ರವರೆಗೆ ರಾಜಸ್ಥಾನದ ಜೋಧ್‍ಪುರದ ಉಮೈದ್ ಭವನ ಅರಮನೆಯಲ್ಲಿ ಈ ವಿವಾಹ ನಡೆದಿತ್ತು. ಈ ಮದುವೆ ಮುಗಿದು ಹೋಗಿದ್ದರೂ, ಆಮಂತ್ರಣ ಪತ್ರಿಕೆ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ.

ಭಾರೀ ತೂಕದ ಕಾರ್ಡ್ ಬೆಲೆ ಎಷ್ಟು ಎಂದರೆ ಬರೋಬ್ಬರಿ 7 ಸಾವಿರ ರೂಪಾಯಿ. ಈ ಕಾರ್ಡ್ ಗುಲಾಬಿ ಬಣ್ಣದ ಬಾಕ್ಸ್ ನಲ್ಲಿ ಇದ್ದು, ಈ ಕಾರ್ಡ್ ಅನ್ನು ತೆರೆದ ನಂತರ, ಅದರಲ್ಲಿ ಮಸ್ಲಿನ್ ಬಟ್ಟೆಯಲ್ಲಿ ಸುತ್ತುವ ನಾಲ್ಕು ಸಣ್ಣ ಪೆಟ್ಟಿಗೆಗಳನ್ನು ಕಾಣಬಹುದು. ಈ ನಾಲ್ಕೂ ಬಾಕ್ಸ್ ಗಳಲ್ಲಿ ಗೋಡಂಬಿ, ಬಾದಾಮಿ, ಒಣದ್ರಾಕ್ಷಿ, ಚಾಕಲೇಟ್‍ಗಳನ್ನು ಹಾಕಲಾಗಿದೆ.

ಅದಲ್ಲದೇ ಇದರೊಳಗೆ 7 ಪುಟಗಳಿದ್ದು, ಅದರಲ್ಲಿ ಮದುವೆಯ ಸಂಭ್ರಮದ ಎಲ್ಲ ವಿವರಗಳಿವೆ. ಉಕನಿ ಶ್ರೀಕೃಷ್ಣನ ಅಪಾರ ಭಕ್ತನಾಗಿರುವುದರಿಂದ ಕೃಷ್ಣನ ಚಿತ್ರವನ್ನು ಹಾಕಿಸಲಾಗಿದೆ.

ಮದುವೆ ಕಾರ್ಡ್ ಮಾತ್ರವಲ್ಲ, ಮದುವೆ ಸಹ ಅಷ್ಟೇ ಅದ್ದೂರಿಯಾಗಿ ನಡೆದಿದೆ. ಈ ಮದುವೆ ಭಾರತದ ರಾಜಮನೆತನದ ಮತ್ತು ದುಬಾರಿ ಹೋಟೆಲ್‍ಗಳಲ್ಲಿ ಒಂದಾದ ಜೋಧ್‍ಪುರದ ‘ಉಮೈದ್ ಭವನ್ ಪ್ಯಾಲೇಸ್’ ನಲ್ಲಿ ನಡೆಯಿತು. ಒಂದು ದಿನಕ್ಕೆ ಉಮೈದ್ ಭವನ್ ಅರಮನೆಯ ರೂಂಗೆ 2 ಲಕ್ಷದಿಂದ 3 ಲಕ್ಷದವರೆಗೆ ಆಗುತ್ತೆ. ಈ ಮದುವೆಯ ಔತಣಕೂಟದಲ್ಲಿ ಅತಿಥಿಗಳಿಗೆ ಬಡಿಸಿದ ತಟ್ಟೆಯ ಬೆಲೆ 18,000 ರೂ. ಆಗಿದೆ. ಒಟ್ಟರೆ ಈ ಮದುವೆ ಐಷಾರಾಮಿಯಾಗಿ ನೆರವೇರಿದ್ದು, ಮದುವೆ ಮುಗಿದರೂ ಸಹ ಸೋಶಿಯಲ್ ಮೀಡಿಯಾದಲ್ಲಿ ಮದುವೆ ಕುರಿತ ಚರ್ಚೆ ಇನ್ನೂ ಮುಗಿದಿಲ್ಲ.