Home latest Lokayukta Raid: ಈ BBMP ಅಧಿಕಾರಿ ಬಳಿ ಇವೆ 400 ಬ್ಲೇಸರ್, ಅವುಗಳ ಬೆಲೆ ಕೇಳಿದ್ರೆ...

Lokayukta Raid: ಈ BBMP ಅಧಿಕಾರಿ ಬಳಿ ಇವೆ 400 ಬ್ಲೇಸರ್, ಅವುಗಳ ಬೆಲೆ ಕೇಳಿದ್ರೆ ಬೆವೆತು ಹೋಗ್ತೀರಾ !

Lokayukta Raid
Image source: prajavani

Hindu neighbor gifts plot of land

Hindu neighbour gifts land to Muslim journalist

Lokayukta Raid: ಸೋಮವಾರ ಬಿಬಿಎಂಪಿಯ (BBMP) ಯಲಹಂಕ ವಲಯದ ನಗರ ಯೋಜನಾ ವಿಭಾಗದ ಸಹಾಯಕ ನಿರ್ದೇಶಕ ಕೆ.ಎಲ್. ಗಂಗಾಧರಯ್ಯ ಅವರ ಮನೆಗೆ ಲೋಕಾಯುಕ್ತರು ದಾಳಿ (Lokayukta Raid) ಮಾಡಿದ್ದು, ಈ ವೇಳೆ 400 ಬ್ಲೇಸರ್ ಗಳು ಪತ್ತೆಯಾಗಿದ್ದು, ಅವುಗಳ ಬೆಲೆ 40 ಲಕ್ಷಕ್ಕೂ ಹೆಚ್ಚು ಎಂದು ತಿಳಿದುಬಂದಿದೆ.

ಸದ್ಯ ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ಘಟಕವು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಗಂಗಾಧರಯ್ಯ ವಿರುದ್ಧ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸುತ್ತಿದೆ.

ಗಂಗಾಧರಯ್ಯನ (Gangadharayya) ಬಳಿ ಆದಾಯಕ್ಕಿಂತ ಹೆಚ್ಚು ಆಸ್ತಿ ಇದೆ ಎಂಬ ಆರೋಪ ಕೇಳಿಬರುತ್ತಿತ್ತು. ಹೆಚ್ಚು ವೆಚ್ಚ ವ್ಯಯಿಸುತ್ತಾರೆ ಎನ್ನಲಾಗುತ್ತಿತ್ತು. ಹಾಗಾಗಿ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ತನಿಖೆ ವೇಳೆ ಇನ್ನಷ್ಟು ವಿಚಾರಗಳು ಬಹಿರಂಗವಾಗಿದ್ದು, ಅಧಿಕಾರಿಯ ಮನೆಯಲ್ಲಿ ಬಟ್ಟೆ ಮಾರಾಟ ಮಳಿಗೆಗಳಲ್ಲಿ ಇರಿಸುವಂತೆ ವ್ಯವಸ್ಥಿತವಾಗಿ ಬೇರು‌ಗಳನ್ನು ಜೋಡಿಸಿಡಲಾಗಿತ್ತು. ಇದರ ಬೆಲೆ ರೂ. 40 ಲಕ್ಷ ಕ್ಕಿಂತ ಹೆಚ್ಚೇ ಇದೆ ಎನ್ನಲಾಗಿದೆ. ಗಂಗಾಧರಯ್ಯ ಟೈಲರ್ ಗೆ 4 ಲಕ್ಷ ಬಿಲ್ ಪಾವತಿಸಿರುವ ದಾಖಲೆಗಳು ಪತ್ತೆಯಾಗಿವೆ. ಈ ಬಿಲ್‌ಗಳನ್ನೂ ವಶಕ್ಕೆ ಪಡೆಯಲಾಗಿದೆ.

ಈತನ ಮನೆಯಲ್ಲಿ ಸುಮಾರು ರೂ. 73 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣಗಳು ಪತ್ತೆಯಾಗಿವೆ. ಆದರೆ, ಸಾಕಷ್ಟು ಆಭರಣದ ಖಾಲಿ ಡಬ್ಬಗಳು ಪತ್ತೆಯಾಗಿವೆ. ಬ್ಯಾಂಕ್ ಲಾಕರ್‌ಗಳಲ್ಲಿ 350 ಗ್ರಾಂ ನಷ್ಟು ಚಿನ್ನಾಭರಣ ಸಿಕ್ಕಿದೆ. ಖಾಲಿ ಡಬ್ಬದಲ್ಲಿದ್ದ ಚಿನ್ನದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ವಿದೇಶ ಪ್ರವಾಸದ ವಿವರಗಳನ್ನೂ ಪತ್ತೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Supreme court: ಆಯುರ್ವೇದ ಡಾಕ್ಟರ್ Vs MBBS ಸಂಬಳ: ಇಬ್ಬರೂ ಸಮಾನ ವೇತನಕ್ಕೆ ಅರ್ಹರಲ್ಲ ಎಂದ ಸುಪ್ರೀಂ, ಯಾರಿಗೆ ಜಾಸ್ತಿ ?!