Home latest Shocking news: ತವರಿಗೆ ಹೋದ ಪತ್ನಿ, ಮಂತ್ರವಾದಿಯ ಜತೆ ಪರಾರಿ

Shocking news: ತವರಿಗೆ ಹೋದ ಪತ್ನಿ, ಮಂತ್ರವಾದಿಯ ಜತೆ ಪರಾರಿ

Bihar
Image source: News 18 kannada

Hindu neighbor gifts plot of land

Hindu neighbour gifts land to Muslim journalist

Bihar: ವ್ಯಕ್ತಿಯೊಬ್ಬ ತನ್ನ ಪತ್ನಿಯ ವಿರುದ್ಧ ದೂರು ದಾಖಲಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಮದುವೆಯಾಗಿ (Marriage) ಕೇವಲ ಒಂದೇ ಒಂದು ತಿಂಗಳಿಗೆ ಪತ್ನಿ (Wife) ತನಗೆ ಕೈಕೊಟ್ಟು ಮಂತ್ರವಾದಿಯೊಂದಿಗೆ (Tantrik) ಪರಾರಿಯಾಗಿದ್ದು, ತನ್ನ ಹೆಂಡತಿಯನ್ನು ಹುಡುಕಿ ಕೊಡುವಂತೆ ದೂರು ದಾಖಲಿಸಿದ್ದಾನೆ.

ಹೌದು, ಬಿಹಾರದ (Bihar) ಕೈಮೂರ್ ಜಿಲ್ಲೆಯ ಭಭುವಾ ಪೊಲೀಸ್ ಠಾಣೆಯಲ್ಲಿ ಈ ವಿಚಿತ್ರ ಕೇಸು ದಾಖಲಾಗಿದೆ. ಸಂತ್ರಸ್ತನು ನೀಡಿದ ದೂರಿನ ಪ್ರಕಾರ, “ಡಿಸೆಂಬರ್ 2020ರಲ್ಲಿ ಮದುವೆಯಾಗಿದ್ದು, ಒಂದು ತಿಂಗಳು ಮಾತ್ರ ತನ್ನ ಮನೆಯಲ್ಲಿದ್ದಳು. ನಂತರ ಅನಾರೋಗ್ಯದ ಕಾರಣ ಹೇಳಿ ತವರು ಮನೆಗೆ ಹೋದವಳು ಮತ್ತೆ ವಾಪಸ್ ಆಗಿಲ್ಲ. ಇದೀಗ ಮಂತ್ರವಾದಿ ಜೊತೆ ಪರಾರಿಯಾಗಿದ್ದಾಳೆ ಎಂದು‌ ಪತಿಯು ಆರೋಪಿಸಿದ್ದಾನೆ. ಪೊಲೀಸರು ಈ ಸಂಬಂಧ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆ ಹಾಗೂ ಮಂತ್ರವಾದಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ದೂರುದಾರ ಚೋಟು ಕುಮಾರ್​ ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಪರೆವಾ ಗ್ರಾಮದ ನಿವಾಸಿಯಾಗಿದ್ದಾನೆ. 2020ರಲ್ಲಿ ಕೈಮೂರ್ ಜಿಲ್ಲೆಯ ಭಭುವಾ ಪೊಲೀಸ್ ಠಾಣೆ ವ್ಯಾಪ್ತಿಯ ಸಾರಂಗ್‌ಪುರದ ಯುವತಿಯನ್ನ ವಿವಾಹವಾಗಿದ್ದ. ವಿವಾಹವಾದ ಒಂದೇ ತಿಂಗಳಿಗೆ ಹೆಂಡತಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ತಾಯಿಯ ಮನೆಗೆ ಮರಳಿದ್ದಳು. ಆಕೆಗೆ ಆನಾರೋಗ್ಯವಿದ್ದರಿಂದ ಮಂತ್ರವಾದಿ ಸರಿಮಾಡುವ ನೆಪದಲ್ಲಿ ಮಹಿಳೆಯ ಮನೆಗೆ ಬಂದು ಹೋಗುತ್ತಿದ್ದ. ಅಲ್ಲದೆ ಕೆಲವೊಮ್ಮೆ ಪೂಜೆ ನೆಪದಲ್ಲಿ ಆಕೆಯ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದ. ಈ ವೇಳೆ ಮಹಿಳೆಯನ್ನು ತನ್ನ ಬುಟ್ಟಿಗೆ ಬೀಳಿಸಿಕೊಂಡಿದ್ದಾನೆ. ಅಲ್ಲದೆ, ಮಹಿಳೆ ನಾಪತ್ತೆಯಾದ ದಿನದಿಂದ ಆತನೂ ಕೂಡ ಕಣ್ಮರೆಯಾಗಿದ್ದಾನೆ. ಹಾಗಾಗಿ ಇಬ್ಬರು ಸೇರಿ ಓಡಿ ಹೋಗಿದ್ದಾರೆ ಎಂದು ಮಹಿಳೆಯ ಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಪತ್ನಿ ತವರಿಗೆ ಹೋಗಿ ವರ್ಷಗಳು ಕಳೆದರೂ ವಾಪಸ್​ ಬರದ ಕಾರಣ ತಾನೇ ಮನೆಗೆ ತೆರಳಿದ್ದಾನೆ. ಅಲ್ಲಿಗೆ ತೆರಳಿದಾಗಲೇ ಪತ್ನಿ ಮಂತ್ರವಾದಿ ಜೊತೆ ಪರಾರಿಯಾಗಿದ್ದಾಳೆ ಎಂಬ ವಿಷಯ ಬಹಿರಂಗಗೊಂಡಿದೆ. ಆತನ ಭಾವಮೈದ ಹಾಗೂ ಅತ್ತೆ-ಮಾವ ಈ ವಿಚಾರದ ಬಗ್ಗೆ ಆತನಿಗೆ ತಿಳಿಸಿದ್ದಾರೆ. ತಕ್ಷಣ ಭಭುವಾ ಪೊಲೀಸ್​ ಠಾಣೆಯಲ್ಲಿ ತನ್ನ ಪತ್ನಿ ಮತ್ತು ಮಂತ್ರವಾದಿ ಓಜಾ ಎಂಬಾತನ ವಿರುದ್ಧ ದೂರು ನೀಡಿದ್ದಾನೆ. ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ಓಜಾ ಮತ್ತು ಸಂತ್ರಸ್ತನ ಪತ್ನಿಯ ಹುಡುಕಾಟದಲ್ಲಿ ತೊಡಗಿದ್ದಾರೆ.

 

ಇದನ್ನು ಓದಿ: Snake: ಮನೆಯ ಸುತ್ತಮುತ್ತ ಹಾವುಗಳ ಕಾಟವೇ? ತಡೆಗಟ್ಟಲು ಇಲ್ಲಿದೆ ನಿಮಗೊಂದು ಈಜಿ ಟಿಪ್ಸ್‌