Home latest Koragajja: ಕೊರಗಜ್ಜನ ಪವಾಡ; ಕೊಟ್ಟ ಮಾತು ತಪ್ಪದ ಅಜ್ಜ, ಗಿಡ ನೆಟ್ಟು ತೋರಿಸಿದ ಕೊರಗ ತನಿಯ!

Koragajja: ಕೊರಗಜ್ಜನ ಪವಾಡ; ಕೊಟ್ಟ ಮಾತು ತಪ್ಪದ ಅಜ್ಜ, ಗಿಡ ನೆಟ್ಟು ತೋರಿಸಿದ ಕೊರಗ ತನಿಯ!

Koragajja

Hindu neighbor gifts plot of land

Hindu neighbour gifts land to Muslim journalist

Koragajja Sullia: ಕೊರಗಜ್ಜ ಕರಾವಳಿ ಜನರ ಆರಾಧ್ಯ ದೈವ. ತುಳುನಾಡಿನ ಜನ ದೇವರಿಗಿಂತ ದೈವವನ್ನು ನಂಬುವುದೇ ಹೆಚ್ಚು. ಯಾವುದೇ ಕಷ್ಟ ಬಂದಾಗ ಮೊದಲಿಗೆ ಜನರ ಬಾಯಲ್ಲಿ ಬರುವ ಉದ್ಗಾರವೇ “ಅಜ್ಜ”. ಅಂತಹ ಕೊರಗಜ್ಜನೇ ಇದೀಗ ಇನ್ನೊಂದು ಪವಾಡ ಮಾಡಿದ್ದಾರೆ. ತನ್ನ ಕಾರ್ಣಿಕವನ್ನು ಆಗಾಗ್ಗೆ ಮೆರೆಯುವ ಅಜ್ಜ ತನ್ನ ಪವಾಡದಿಂದಲೇ ಜನರ ಕಷ್ಟ ನಿವಾರಣೆ ಮಾಡುತ್ತಾರೆ.

ಅಂತಹುದೇ ಒಂದು ಪವಾಡವನ್ನು ಕೊರಗಜ್ಜ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ಕಲ್ಲುಗುಂಡಿ ಸಮೀಪದ ಕಡೆಪಾಲದಲ್ಲಿರುವ ಶ್ರೀ ಆದಿನಾಗಬ್ರಹ್ಮ ಮೊರ್ಗೇಕಳ ದೈವಸ್ಥಾನದಲ್ಲಿ ನಡೆದಿದೆ.

ವರದಿಯ ಪ್ರಕಾರ, ಕಳೆದ ವರ್ಷ ಈ ದೈವಸ್ಥಾನದಲ್ಲಿ 2022 ಎಪ್ರಿಲ್‌ 21 ರಿಂದ 25 ರವರೆಗೆ ಪುನಃ ಪ್ರತಿಷ್ಠಾ ಕಲಶೋತ್ಸವ ನಡೆದು ನೇಮೋತ್ಸವ ನಡೆದಿತ್ತು. ಅಂದು ಹಾಲು ಬರುವ ಮರವನ್ನು (ಭೂತ ಸಂಪಿಗೆ ಮರ) ನೆಡುವ ಬಗ್ಗೆ ಕೊರಗಜ್ಜ ಇಲ್ಲಿಯ ಆಡಳಿತ ಸಮಿಯವರಲ್ಲಿ ಕೇಳಿದಾಗ, ಹಾಲು ಬರುವ ಮರವನ್ನು ಕಟ್ಟೆಯ ಪಕ್ಕ ನೆಟ್ಟರೆ, ಅಜ್ಜನ ಕಟ್ಟೆಗೆ ಬೇರು ಹೋಗಿ ತೊಂದರೆ ಉಂಟಾಗಬಹುದು, ಹಾಗಾಗಿ ಇದು ಬೇಡ ಎಂದು ಹೇಳಿದ್ದಾರೆ.

Koragajja

ಇದನ್ನು ಓದಿ: Congress: ಲೋಕಸಭಾ ಚುನಾವಣೆ ಬಳಿಕ ದೇಶದಲ್ಲಿ ಕಾಂಗ್ರೆಸ್ ಸ್ಥಿತಿ ಹೇಗಿರುತ್ತೆ ?!

ಆಗ ಕೊರಗಜ್ಜ ನನಗೆ ಬೇಕಾದ ಹಾಲು ಮರವನ್ನು ನನ್ನ ಕಟ್ಟೆಗೆ ಒಡಕು ಬಾರದ ಹಾಗೆ ಹುಟ್ಟಿಸಿದರೆ ನಿಮಗೆ ಸಂತೋಷವಾ ಎಂದು ಕೇಳಿದಾಗ ನೆರೆದಿರುವ ಜನರೆಲ್ಲ ಸಂತೋಷದಿಂದಲೇ ಒಪ್ಪಿಗೆ ನೀಡಿದ್ದಾರೆ.

Koragajja

ಇದೀಗ 3 ನೇ ವರ್ಷದ ನೇಮೋತ್ಸವಕ್ಕೆ ದೈವಸ್ಥಾನದ ವಠಾರವನ್ನು ಸ್ವಚ್ಛವ ಮಾಡುವ ಸಂದರ್ಭದಲ್ಲಿ ಹುಲ್ಲಿನ ನಡುವೆ ಕೊರಗಜ್ಜ ಹೇಳಿದ ಭೂತ ಸಂಪಿಗೆ ಮರದ ಗಿಡ ಮಣ್ಣಿನಡಿಯಿಂದ ಹುಟ್ಟಿ ಬಂದಿರುವುದು ಕಂಡು ಬಂದಿದೆ. ಅಜ್ಜನ ಕಟ್ಟೆ ಪಕ್ಕದಲ್ಲಿ, ಹಾಲು ಬರುವ ಮರನವನ್ನು ಕೊರಗಜ್ಜ ಸೃಷ್ಟಿ ಮಾಡಿ ಪವಾಡ ಮಾಡಿದ್ದಾರೆ.

ಹೀಗೆ, ಮರವನ್ನು ಹುಟ್ಟಿಸಿದ ಅಜ್ಜ, ನಂಬಿದವರನ್ನು ಯಾವತ್ತೂ ಕೈ ಬಿಡೋದಿಲ್ಲ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.