Home Interesting Kateel Mela: ಕಟೀಲಿನ ಯಕ್ಷಗಾನ ಮೇಳಗಳ ಕಾಲಮಿತಿ ತೆರವು!! ರಾತ್ರಿಯಿಡೀ ಯಕ್ಷಗಾನ ಪ್ರದರ್ಶನ! 

Kateel Mela: ಕಟೀಲಿನ ಯಕ್ಷಗಾನ ಮೇಳಗಳ ಕಾಲಮಿತಿ ತೆರವು!! ರಾತ್ರಿಯಿಡೀ ಯಕ್ಷಗಾನ ಪ್ರದರ್ಶನ! 

Kateel Mela

Hindu neighbor gifts plot of land

Hindu neighbour gifts land to Muslim journalist

 

Kateel: ಕಟೀಲು ಶ್ರೀ ದುರ್ಗಾಪರಮೇಶ್ವರಿ ಜ.14 ರಿಂದ ಮತ್ತೆ ಹಳೆಯ ಪದ್ಧತಿಯಲ್ಲಿ ಆರೂ ಮೇಳಗಳ ಯಕ್ಷಗಾನ ಇಡೀ ರಾತ್ರಿ ಪ್ರದರ್ಶನ ಕಾಣಲಿದೆ.

ಕಳೆದ ವರ್ಷದಿಂದ ಕಾಲಮಿತಿಗೆ ಒಳಪಟ್ಟಿದ್ದ ಕಟೀಲು ಮೇಳ ಉಚ್ಛ ನ್ಯಾಯಾಲಯದ ಆದೇಶ ಮತ್ತು ಶ್ರೀ ಕ್ಷೇತ್ರದ ಭಕ್ತರ ಅಪೇಕ್ಷೆ ಮೇರೆಗೆ ಜ.14 ರ ಮಕರ ಸಂಕ್ರಮಣದಿಂದ ಬೆಳಗ್ಗಿನವರೆಗೆ ಯಕ್ಷಗಾನ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಹಾಗೂ ಅನುವಂಶಿಕ ಮುಕ್ತೇಸರ ಕೊಡೆತ್ತೂರುಗುತ್ತು ಸನತ್‌ ಕುಮಾರ್‌ ಶೆಟ್ಟಿ ಹಾಗೂ ಅನುವಂಶಿಕ ಮೊಕ್ತೇಸರ ವಾಸುದೇವ ಅಸ್ರಣ್ಣ ತಿಳಿಸಿದ್ದಾರೆ.

ಇದನ್ನೂ ಓದಿ: Morning Breakfast: ಯಾವುದೇ ಕಾರಣಕ್ಕು ಬೆಳಗ್ಗಿನ ತಿಂಡಿಯನ್ನು ಮಾಡದೇ ಇರಬೇಡಿ, ಹೆಲ್ತ್ ಹಾಳಾಗುತ್ತೆ!

ಬೆಂಗಳೂರಿನ ಕೃಷ್ಣಕುಮಾರ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂದರ್ಭ ಹೈಕೋರ್ಟ್‌, ಪೂರ್ಣರಾತ್ರಿ ಯಕ್ಷಗಾನ ಪ್ರದರ್ಶನಕ್ಕೆ ತೊಂದರೆ ಇಲ್ಲ, ನಿಯಮ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದಿತ್ತು. ಶಬ್ದಮಾಲಿನ್ಯ ಉಂಟಾಗಲಾರದು, ಧ್ವನಿವರ್ಧಕ ಬಳಕೆಯಿಂದ ಹಳ್ಳಿಗಳಲ್ಲಿ ಯಾವುದೇ ಸಮಸ್ಯೆ ಇಲ್ಲ. ನಗರದಲ್ಲಿ ಶಬ್ದಮಿತಿಯನ್ನು ನೋಡಿಕೊಳ್ಳಲಾಗುವುದು. ಇದು ಹರಕೆಯ ಆಟ. ಹಾಗಾಗಿ ಜನರಿಗೆ ಯಾವುದೇ ಸಮಸ್ಯೆ ಆಗಲಾರದು ಎಂದು ಸನತ್‌ಕುಮಾರ್‌ ಶೆಟ್ಟಿ ಮಾಧ್ಯಮವೊಂದಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ.